ಕರುನಾಡು ಘರ್ಜನೆ ಸುದ್ದಿ ದಿನಾಂಕ : 05-09-2025 ರಂದು ಪ್ರವಾದಿ ಹಜರತ್ ಮೊಹ್ಮದ ಪೈಗಂಬರ ಅವರ ಜಯಂತಿ ಈದ ಮೀಲಾದ ದಿನ ಡಿ.ಜೆ. ಬ್ಯಾನ್ ಮಾಡುವ ಕುರಿತು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿ.
ಗದಗ ಜಿಲ್ಲಾ ಜಮಿಯತ್ ಉಲಮಾ – ಎ -ಹಿಂದ್ ಗದಗ ನೇತೃತ್ವದಲ್ಲಿ ದಿನಾಂಕ : 27-08-2025 ರಂದು ಗದಗ – ಬೆಟಗೇರ ನಗರದ ಎಲ್ಲಾ ಜಮಾತಗಳ ಮುಖಂಡರ ಈದ ಮೀಲಾದ ಕಮೀಟಿ ಪದಾಧಿಕಾರಿಗಳ ಹಾಗೂ ನಗರದ ನೌ – ಜವಾನ ಕಮೀಟಿಗಳ ಮುಖಂಡರು ಸೇರಿ ಈದ ಮೀಲಾದ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ.
ಈ ಸಭೆಯಲ್ಲಿ ಈ ಬಾರಿ ಈದ ಮೀಲಾದ ಆಚರಣೆ ಕುರಿತು ಚರ್ಚಿಸಿ ಎಲ್ಲರ ಒಪ್ಪಿಗೆ ಹಾಗೂ ಸಹಮತದಿಂದ ಈದ ಮೀಲಾದ ಆಚರಣೆಯನ್ನು ಶಾಂತಿ ರೀತಿಯಿಂದ ಆಚರಣೆ ಮಾಡಲು ಚರ್ಚಿಸಲಾಗಿದೆ.
ಈದ ಮೀಲಾದ ಆಚರಣೆಯಿಂದ ಯಾರಿಗೂ ತೊಂದರೆ ಆಗದೇ ರೀತಿಯಲ್ಲಿ ಡಿ.ಜೆ. ಬಳಕೆ ಮಾಡಬಾರದೆಂದು ಚರ್ಚಿಸಿ ಈ ಬಾರಿ ಈದ್ ಮೀಲಾದ ಆಚರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಯಾರು ಡಿ.ಜೆ ಯನ್ನು ಬಳಕೆ ಮಾಡಬಾರದೆಂದು ನಿರ್ಣಯಿಸಿ. 
ಈ ನಿರ್ಣಯಕ್ಕೆ ಎಲ್ಲರೂ ಸಹಮತದಿಂದ ಒಪ್ಪಿಗೆ ಸೂಚಿಸಿದರು , ಆದ ಕಾರಣ ತಾವುಗಳು ಮುಂಬರುವ ಈದ್ ಮೀಲಾದ ಹಬ್ಬ ಆಚರಣೆ ಸಂದರ್ಭದಲ್ಲಿ ಯಾರಿಗೊ ಡಿ.ಜೆ ಬಳಕೆ ಮಾಡಲು ಅನುಮತಿ ನೀಡಬಾರದೆಂದು ತಮ್ಮಲ್ಲಿ ಗದಗ್ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ವಿನಂತಿಸಿಕೊಳ್ಳುತ್ತೇವೆ.