ಕರುನಾಡು ಘರ್ಜನೆ ಸುದ್ದಿ ಗದಗ ಬೆಟಗೇರಿ ಅಂಜುಮನ ಚುನಾವಣೆಗೆ ಸ್ಪರ್ಧಿಸಲು ರೂ 10.000 ನಿಗದಿ ಮಾಡಿರುತ್ತಾರೆಂದು ತಿಳಿದು ವಿಷಾದವೆನಿಸಿತು ಏಕೆಂದರೆ ನಗರಸಭೆಗೆ ಸ್ಪರ್ಧಿಸಲು ಕೇವಲ 2000 ರಿಂದ 2500 ಮಾತ್ರ ಇದ್ದು ಶಾಸಕ ಸ್ಥಾನಕ್ಕೆ 10000 ರೂಪಾಯಿಗಳು ನಿಗದಿ ಮಾಡಿದ್ದರು ಅಂಜುಮನ ಚುನಾವಣೆ ಎಂದರೆ.
ಅದೊಂದು ರಾಜಕೀಯವಲ್ಲದ ಸಮೂಹದ ಬಡಜನರ ಹಾಗೂ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹಾಗೂ ಸಮಾಜದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಇರುವಂತಹ ಅಂಜುಮನ ಸಂಸ್ಥೆ ಇದರ ಚುನಾವಣೆಗೆ ಈ ರೀತಿಯಾಗಿ ಅವೈಜ್ಞಾನಿಕ ದರ ನಿಗದಿಪಡಿಸಿರುವುದು ಅಪರಾಧ ಅದರ ವಿರುದ್ಧವಾಗಿ ನಾವು ಧ್ವನಿ ಎತ್ತಲೇಬೇಕು ಏಕೆಂದರೆ ಅಂಜುಮನ ಚುನಾವಣೆ ಸೇವೆ ಮಾಡುವವರ ಚುನಾವಣೆ ಆಗಬೇಕೆ ವಿನಹ ಹಣವಂತರ ಚುನಾವಣೆಯಾಗಬಾರದು ಅಂಜುಮನ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಅಭ್ಯರ್ಥಿಗಳು ಸಮಾಜದ ಹಿತಚಿಂತಕರಾಗಬೇಕು , ಬಂಡವಾಳ ಶಾಹಿಗಳಾಗಬಾರದು ಇದರಿಂದ ಸಮಾಜದ ಯಾವುದೇ ಕೆಲಸ ಕಾರ್ಯಗಳು ನಡೆಯುವುದು ಅಸಾಧ್ಯ ಸಮಾಜ ಸೇವೆ ಮಾಡಲು ಬಂದು ಹಣ ವ್ಯರ್ಥ ಮಾಡಲು ಯಾರು ಬಯಸುವುದಿಲ್ಲ ಹಣ ಹಾಕಿದವರು ಮರಳಿ ಅದರ ಹತ್ತು ಪಟ್ಟು ಗಳಿಸುವ ಇಚ್ಛೆಯಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹೆಚ್ಚಾಗಬಹುದು.
ಆದ್ದರಿಂದ ದಯಮಾಡಿ ಎಲ್ಲ ಪ್ರಜ್ಞಾವಂತ ಸಹೋದರರು ಇದರ ವಿರುದ್ಧ ಜಿಲ್ಲಾ ವಕ್ಫ್ ಚುನಾವಣಾ ಅಧಿಕಾರಿಗಳಿಗೆ ಮತ್ತು ಗದಗ ಜಿಲ್ಲಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಬೇಕು ಅದೇ ರೀತಿ ರಾಜ್ಯ ಸರ್ಕಾರದ ವಕ್ಫ್ ಸಚಿವರಿಗೂ ಕೂಡ ವಿಷಯ ತಲುಪುವಂತೆ ಮಾಧ್ಯಮದ ಮುಖಾಂತರ ಅಥವಾ ಮನವಿಯ ಪತ್ರಿಕೆ ಪ್ರಕಟನೆ ಮೂಲಕ ವ್ಯಕ್ತಿ ಪಡಿಸುತ್ತೇನೆ .