ಕರುನಾಡು ಘರ್ಜನೆ ಸುದ್ದಿ ಮೈಸೂರು : ಪ್ರಶ್ನೆ ಮಾಡಲ್ಲ ಎಂದು ವಕೀಲ ರಂಗನಾಥ್ ವಾದಿಸಿದ್ದರು. ಕೆಲ ಪ್ರಕರಣಗಳ ಬಗ್ಗೆ ಉಲ್ಲೇಖಿಸಿ ವಾದ ಮಂಡನೆಯನ್ನು ವಕೀಲ ರಂಗನಾಥ್ ಮಾಡಿದ್ದರು.
ಇನ್ನೂ ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೊದಲು ಅರ್ಜಿ ಹಾಕಿದ್ದಾರೆ. ಸರ್ಕಾರದ ಆಹ್ವಾನ ಪ್ರಶ್ನೆ ಮಾಡಿ ಅರ್ಜಿ ಹಾಕಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನ ಕರೆಯ ಬಾರದು ಅಂತಾ ಹೇಳ್ತಿದ್ದಾರೆ. ಅವರೇ ಸಂಸದರಾಗಿದ್ದಾಗ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ರು. ಈ ವಿಚಾರವನ್ನ ಬಹಿರಂಗಪಡಿಸಿರಲಿಲ್ಲ. ಈಗ ಅರ್ಜಿ ಹಾಕಿದ್ದಕ್ಕೆ ಪ್ರತಾಪ್ ಸಿಂಹರಿಗೆ ದಂಡ ವಿಧಿಸಬೇಕು. ಆದ್ರೆ ಮುಸ್ಲಿಂ ವ್ಯಕ್ತಿಯನ್ನ ಕಾರ್ಯಕ್ರಮಕ್ಕೆ ಕರೆಯುತ್ತಿರೋದು ಇದು ಮೊದಲೇನಲ್ಲ. ಇಲ್ಲಿ ಕಾರ್ಯಕ್ರಮದ ಉದ್ಘಾಟನೆಗೆ ಅಷ್ಟೇ ಭಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಆದ್ರೆ ಧರ್ಮಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಅವರನ್ನ ಆಹ್ವಾನ ಮಾಡಿಲ್ಲ. ಭಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಪುರಸ್ಕೃತರು. ಹೀಗಾಗಿ ಅವರನ್ನು ಆಹ್ವಾನ ಮಾಡಲಾಗಿದೆ. ಈ ಮುಂಚೆ ಲೇಖಕರಾದ ನಿಸಾರ್ ಅಹಮದ್ ರನ್ನ ಆಹ್ವಾನ ಮಾಡಲಾಗಿತ್ತು. ಈಗ ಭಾನು ಮುಷ್ತಾಕ್ ರನ್ನ ಆಹ್ವಾನ ಮಾಡಲಾಗಿದೆ. ದಸರಾ ಕಮಿಟಿ, ಅಧಿಕಾರಿಗಳ ಜೊತೆ ನಿರ್ಧಾರ ಮಾಡಿಯೇ ಆಹ್ವಾನ ಮಾಡಲಾಗಿದೆ. ಆದ್ರೆ ಈ ಭಾರಿ ಮಾತ್ರ ಹಿಂದೂ ಮುಸ್ಲಿಂ ಅಂತಾ ವಿಚಾರ ಚರ್ಚೆ ಮಾಡ್ತಿದ್ದಾರೆ. ಇದು ಸಮಾಜಕ್ಕೆ ಬೇರೆ ರೀತಿ ಮೆಸೇಜ್ ಹೋಗ್ತಿದೆ ಎಂದು ರಾಜ್ಯ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದಿಸಿದ್ದರು. ಕೆಲ ಫೋಟೋಗಳನ್ನು ಹೈಕೋರ್ಟ್ ಗೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಲ್ಲಿಸಿದ್ದರು.
ವಾದ- ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್ ಸಿಜೆ ನೇತೃತ್ವದ ಪೀಠವು ಎಲ್ಲ ಮೂರು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ.
ಈ ಭಾರಿಯ ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಗೆ ಆಹ್ವಾನ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ಸಿ.ಜೆ. ಪೀಠವು ಆದೇಶ ನೀಡಿದೆ. ಇದರಿಂದಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಉಳಿದ ಇಬ್ಬರು ಅರ್ಜಿದಾರರಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ.
ವಿಸ್ತ್ರತ ಆದೇಶ ಪ್ರಕಟಿಸೋದಾಗಿ ತಿಳಿಸಿ ಮೂರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ