ಕರುನಾಡು ಘರ್ಜನೆ ಸುದ್ದಿ ಮುಂಡರಗಿ : ಗಂಡನೊಬ್ಬ ನಡು ರಸ್ತೆಯಲ್ಲೇ ಹೆಂಡತಿಗೆ ಕಂದಿಲಿ ಎಂಬ ಕಬ್ಬಿಣದ ಹರಿತವಾದ ಆಯುಧದಿಂದ ಹೊಡೆದ ಪರಿಣಾಮ ಆಕೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ಮುಂಡರಗಿ ಪಟ್ಟಣದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ವುಮೇನ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದಾರೆ. ಆರೋಪಿ ಗಂಡನನ್ನು ಪೋಲಿಸರು ಬಂಧಿಸಿದ್ದಾರೆ.ಹಲ್ಲೆಗೊಳಗಾದ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಸಾರ್ವಜನಿಕರು, ಪೊಲೀಸರು ಸೇರಿ ಪೊಲೀಸ್ ಜೀಪಿನಲ್ಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯನ್ನು ಪ್ರಾಥಮಿಕ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಹೆಂಡತಿ ಹಾಗೂ ಗಂಡನ ನಡುವಿನ ಕೌಟುಂಬಿಕ ಕಲಹವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಪ್ರಕರಣ ದಾಖಲಿಸಿದ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.