ಕರುನಾಡು ಘರ್ಜನೆ ಸುದ್ದಿ : ಮಾನ್ವಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಬಿ ಆರ್ ಗವಾಹಿ ಅವರ ಮೇಲೆ ಬೂಟ್ ಎಸೆತಾ ಸಂವಿಧಾನದ ಮೇಲೆ ಆಕ್ರಮಣ ಮಾಡುವ ಹುನ್ನಾರ ಈ ಕೃತ್ಯ ಅತ್ಯಂತ ಖಂಡನೀಯ, ಅಪರಾಧಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಮತ್ತು ಈ ಷಡ್ಯಂತ್ರ ದ ಹಿಂದೆ ಇರುವ ಸಂಘಟನೆ ಗಳ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವೋಕೇಟ್ ತಾಹೇರ್ ಹುಸೇನ್ ಅಗ್ರಹಿಸಿದ್ದಾರೆ.
ನಗರದಲ್ಲಿ ವೆಲ್ಫೇರ್ ಪಾರ್ಟಿ ವತಿಯಿಂದ ಆಯೋಜಿಸಲಾಗಿದೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಈ ದೇಶದಲ್ಲಿ ಸಂವಿಧಾನ ವಿರೋಧಿ ಶಕ್ತಿ ಗಳು ದಿನೇ ದಿನೇ ಸಂವಿಧಾನ ವನ್ನು ಮತ್ತು ಸಂವಿಧಾನಿಕ ಹುದ್ದೆ ಗಳನ್ನು ಅವಮಾನ ಮಾಡುವ ಮೂಲಕ ಸವಿಧಾನ ನಾಶ ಮಾಡುವ ಹುನ್ನಾರ ಮಾಡುತ್ತಿದ್ದಾವೆ, ನಾವು ಆಕ್ರೋಶ ವ್ಯಕ್ತಪಡಿಸಿದರು ಬದಲು ಅವಲೋಕನ ಮಾಡುವ ಅಗ್ಯತ ಇದೆ, ಈ ಘಟನೆ ಅಸ್ಮಿಕ ವಾಗಿ ಆಗಿರೋದಲ್ಲ ಬದಲಿಗೆ ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದೆ ಎಂದು ಅವರು ಹೇಳಿದರು.
ಈ ದೇಶಲ್ಲಿ ಪರ್ಯಾಯ ಸಂವಿಧಾನ ರಚಿಸುವ ಕೆಲಸ ಮಾಡಿದರು ಅದನ್ನು ಖಂಡಿಸುವ ಮತ್ತು ಅದನ್ನು ತಡೆಯುವ ಪ್ರಯತ್ನ ಆಗಲಿಲ್ಲ ಇದರಿಂದ ಸಂವಿಧಾನ ವಿರೋಧಿ ಶಕ್ತಿ ಗಳಿಗೆ ಇನ್ನಷ್ಟು ಧೈರ್ಯ ಬಂದಿದೆ, ಇದರ ಬಗ್ಗೆ ಅಂಬೇಡ್ಕರ್ ವಾದಿ ಗಳು ಮತ್ತು ಸಂವಿಧಾನ ಪ್ರೇಮಿಗಳು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಈ ಸಂಧರ್ಭ ದಲ್ಲಿ ರವೀಂದ್ರ ಜಾನೇಕಲ್ ದಲಿತ ಮುಖಂಡರು, ಮಾರೆಪ್ಪ ಹರವಿ ಜಿಲ್ಲಾಧ್ಯಕ್ಷರು ಜನಶಕ್ತಿ ರಾಯಚೂರು, ಶರಣು ಜಿಲ್ಲಾಧ್ಯಕ್ಷರು ಎದ್ದೇಳು ಕರ್ನಾಟಕ,ಹನುಮಂತ ಕೋಟೆ ಅಧ್ಯಕ್ಷರು ಸರ್ವಧರ್ಮ ಸೇವಾ ವೆಲ್ಫೇರ್ ಟ್ರಸ್ಟ್, ಫರೀದ್ ಉಮರಿ ಮತ್ತು ಶರ್ಫುದ್ದಿನ್ ಪೋಟ್ನಾಳ್ ಸೀಟು ಅಧ್ಯಕ್ಷರು ಮಾತನಾಡಿದರು.