ಕರುನಾಡು ಘರ್ಜನೆ ಸುದ್ದಿ ದಿನಾಂಕ: 10 ಅಕ್ಟೋಬರ್ 2025 ಕಲ್ಯಾಣ ಕರ್ನಾಟಕ ಜಾಥಾದ ಆರನೇ ದಿನದ ಕಾರ್ಯಕ್ರಮವು 10ನೇ ಅಕ್ಟೋಬರ್ 2025ರಂದು ಪ್ರಾರಂಭವಾಯಿತು.
ರಾಜ್ಯ ಅಧ್ಯಕ್ಷರು ಬೀದರ್ ಜಿಲ್ಲಾ ಪತ್ರಿಕಾ ಭವನ್ ದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಾಥಾದ ಉದ್ದೇಶ ಹಾಗೂ ಅದರ ಮಹತ್ವವನ್ನು ವಿವರಿಸಿದರು.
ತದನಂತರ ಕಾರ್ ರ್ಯಾಲಿಯೊಂದಿಗೆ ಅಂಬೇಡ್ಕರ್ ಸರ್ಕಲ್ಗೆ ತೆರಳಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷ ಮುಜಾಹಿದ್ ಪಾಷಾ ಕುರೈಷಿ ಮಾತನಾಡಿದರು. ನಂತರ ಅಲ್ಲಿ ನೆರೆದಿದ್ದ ವರದಿಗಾರರನ್ನು ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಉಪಾಧ್ಯಕ್ಷರು ಜಾಥಾದ ಉದ್ದೇಶ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಂಬೇಡ್ಕರ್ ಸರ್ಕಲ್ನಿಂದ ಕಾರ್ ರ್ಯಾಲಿ ಗವಾನ್ ಚೌಕ್ಗೆ ತೆರಳಿ, ಅಲ್ಲಿ ಕಾರ್ನರ್ ಮೀಟಿಂಗ್ ನಡೆಯಿತು. ಈ ಸಭೆಯಲ್ಲಿ ರಾಜ್ಯ ಅಧ್ಯಕ್ಷರು ಹಾಗೂ ಮುಬಶೀರ್ ಶಿಂಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಊಟದ ವಿರಾಮದ ನಂತರ ಜಾಥಾ ಬಗ್ದಲ್ ಗ್ರಾಮಕ್ಕೆ ತಲುಪಿತು. ಅಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ನಂತರ ಬಗ್ದಲ್ ಗ್ರಾಮದಲ್ಲಿ ಪಾದಯಾತ್ರೆ ನಡೆಸಲಾಯಿತು. ಕೊನೆಗೆ ಬಸ್ಸ್ಟ್ಯಾಂಡ್ ಬಳಿ ನಡೆದ ಕಾರ್ನರ್ ಮೀಟಿಂಗ್ನಲ್ಲಿ ರಾಜ್ಯ ಅಧ್ಯಕ್ಷರು, ರಾಜ್ಯ ಕಾರ್ಯದರ್ಶಿ ಎಂ ಎಂ ಬೆಳೆಕುದ್ರಿ ಹಾಗೂ ರಾಜ್ಯ ಖಜಾಂಚಿ ಸಿ.ಹೆಚ್. ಸಲಾಂ ಮಾತನಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.