ಕರುನಾಡು ಘರ್ಜನೆ ಸುದ್ದಿ : ದಿನಾಂಕ 16/10/25 ರಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ನಿಯಂತ್ರಿಸಲು ಮತ್ತು ಶಾಲಾ ಕಾಲೇಜುಗಳ
ಸಮೀಪಗಳಲ್ಲಿ ಅಪ್ರಾಪ್ತ ವಯಸ್ಕರಿಗೆ ತಂಬಾಕು & ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ COTPA ಕಾಯ್ದೆ (Cigarettes and Other Tobacco Products Act) ಪ್ರಕರಣ ದಾಖಲಿಸಲಾಗುತ್ತಿದ್ದು ಇದು ಆರೋಗ್ಯಕರ, ಜಾಗೃತ ಸಮಾಜ ನಿರ್ಮಾಣ ಮಾಡುವಲ್ಲಿ ತೆಗೆದುಕೊಳ್ಳುವ ಮುಂಜಾಗೃತ ಕಾನೂನು ಕ್ರಮವಾಗಿರುತ್ತದೆ.
ದಿನಾಂಕ: 15.10.2025 ರಂದು ಗದಗ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 426 ಪ್ರಕರಣಗಳನ್ನು COTPA ಕಾಯ್ದೆ ಅಡಿಯಲ್ಲಿ ದಾಖಲಿಸಿದ್ದು ಠಾಣಾವಾರು ಮಾಹಿತಿ ಈ ಕೆಳಗಿನಂತಿರುತ್ತದೆ.
