ಕರುನಾಡು ಘರ್ಜನೆ ಸುದ್ದಿ ಗದಗ: ಬೆಟಗೇರಿ ಹೊಸ ಬನಶಂಕರಿ ದೇವಾಲಯ ಕಬಾಡಿ ರೋಡ ಅಂಗಡಿಯನ್ನು ಬಾಡಿಗೆ ಪಡೆದ ಅಂಗಡಿಯ ಮುಂದೆ ತಮ್ಮ ಸಮಾಜದ ಸಂಘಟನೆಯ ಬ್ಯಾನರನ್ನು ಅಳವಡಿಸುವ ಉದ್ದೇಶದಿಂದ ಸಂಘಟನೆ ಹಾಗೂ ಡಾ: ಬಿ.ಆರ್, ಅಂಬೇಡ್ಕರ ಇವರ ಭಾವಚಿತ್ರವಿರುವ ಬ್ಯಾನರನ್ನು ಹಾಕುತ್ತಿರುವಾಗ 1] ಹರೀಶ ತಂದೆ ಶಶಿಕಾಂತ ಬಾಕಳೆ 2) ದೊಂಡುಸಾ ತಂದೆ ಅಂಬಾಸಾ ಬಾಕಳೆ 3] ಶಿವನಾಂದ ಶಶಿಕಾಂತ ಬಾಕಳೆ 4) ಶ್ರೀನಿವಾಸ ತಂದೆ ಕಿರ್ತೋಸಾ ಬಾಕಳೆ 5] ಅಂಬಾಸಾ ತಂದೆ ಸಂದರಲಾ ಬಾಕಳೆ ಸಾ: ಎಲ್ಲರೂ ಬೆಟಗೇರಿ ಇವರೇಲ್ಲರೂ ಏಕೋದ್ದೇಶದಿಂದ ವಿನಾಕಾರಣ ಪಿರ್ಯಾದಿ ಸಂಗಡ ತಂಟೆ ತೆಗೆದು ಆವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿಬಡಿ ಮಾಡುತ್ತಾ.
ಪಿರ್ಯಾದಿಯ ಜಾತಿಗೆ ಅವಮಾನ ಮಾಡುವು ಉದ್ದೇಶದಿಂದ ಡಾ|| ಬಿ.ಆರ್.ಅಂಬೇಡ್ಕರ ರವರ ಭಾವಚಿತ್ರ ಇರುವ ಬ್ಯಾನರನ್ನು ಕಿತ್ತು ಕಾಲಿನಿಂದ ತುಳಿದು ಪಿರ್ಯಾದಿಗೆ ಲೇ ಮಾದರ ಸೊಳೆ ಮಕ್ಕಳಾ ಅಂತಾ ಜಾತಿ ನಿಂದನೆ ಮಾಡಿ ಅವಮಾನ ಮಾಡಿದರು ಎಂದು ದೂರ ನೀಡಿದ್ದಾರೆ ಸಧ್ಯ ಬೆಟಗೇರಿ ಪೋಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಾಗಿ ಮೂರು ನಾಲ್ಕು ದಿನ ಕಳಿದರು ಪೋಲಿಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರರು ಹೇಳಿಕೆ ನೀಡಿದ್ದಾರೆ.