ಕರುನಾಡು ಘರ್ಜನೆ ಸುದ್ದಿ ಬೆಂಗಳೂರು: ಕೇಂದ್ರದ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ’ ಹಾಗೂ ರಾಜ್ಯದ ‘ಅನ್ನಭಾಗ್ಯ’ಯೋಜನೆಯ ಪಡಿತರ ಕನ್ನಕ್ಕೆ ಕಡಿವಾಣವೇ ಬೀಳುತ್ತಿಲ್ಲ. 6 ತಿಂಗಳಲ್ಲಿ ರಾಜ್ಯಾದ್ಯಂತ 16 ಸಾವಿರ ಕ್ವಿಂಟಾಲ್ ಅಕ್ಕಿ, ರಾಗಿ, ಇನ್ನಿತರ ಧಾನ್ಯ ಜಪ್ತಿ ಮಾಡಲಾಗಿದೆ.
ಗದುಗಿನಲ್ಲಿ ಕೂಡ ಮಿತಿ ಮೀರಿದ ಅಕ್ಕಿ ಕಳ್ಳರ ಗ್ಯಾಂಗ್ ಅಧಿಕಾರಿಗಳು ಗೊತ್ತು ಇದ್ದು ಗೊತ್ತು ಇಲ್ಲದಂತೆ ಕುರುಡು ಜಾಣತನವನ್ನು ಮಾಡ್ತಾ ಇದ್ದಾರೆ ಇದಕ್ಕೆ ಬ್ರೇಕ್ ಯಾವಾಗ ಅಂತ ಸಾರ್ವಜನಿಕರು ಕೇಳ್ತಾ ಇದ್ದಾರೆ.ಸಗಟು ಮಳಿಗೆಗಳ ಮ್ಯಾನೇಜರ್ ಸೇರಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳೇ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ತೂಕದಲ್ಲಿ ಮೋಸ ಮಾಡಿದರೆ, ಅಕ್ಕಿ ಗಿರಣಿ ಮಾಲೀಕರು ಕಾಳಸಂತೆಯಲ್ಲಿ ಅಕ್ರಮವಾಗಿ ಅಕ್ಕಿ ಖರೀದಿಸಿ ಪಾಲಿಶ್, ಸಾರ್ಟೆಕ್ಸ್ ಮಾಡಿ ಬೇರೆ ಬೇರೆ ಬ್ರಾಂಡ್ ನ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಳಿಗೆಗಳಲ್ಲಿ ಇಲಾಖೆಯ ಅಧಿಕಾರಿಗಳೇ ಕನ್ನ ಹಾಕುತ್ತಿದ್ದಾರೆ.