ಕರುನಾಡು ಘರ್ಜನೆ ಸುದ್ದಿ ಗದಗ : ದೌರ್ಜನ್ಯ ಪ್ರಕರಣವು ನಡೆದು 15 ದಿನ ಕಳೆದರೂ ಆರೋಪಿಗಳನ್ನು ಬಂಧಿಸದ ಬೆಟಗೇರಿ ಸಿಪಿಐ ವಿರುದ್ಧ ಕ್ರಮವನ್ನು ಆಗ್ರಹಿಸಿ ಮತ್ತು ಆರೋಪಿಗಳನ್ನು ರಾಷ್ಟ್ರದ್ರೋಷಿ ಕಾನೂನುಡಿಯಲ್ಲಿ ಇವರ ಮೇಲೆ ಪ್ರಕರಣವನ್ನು ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಮನವಿ
ಗದಗ ಜಿಲ್ಲೆ ಗದಗ ತಾಲೂಕು ಬೆಟಗೇರಿ ವ್ಯಾಪ್ತಿಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂಬರ್ 0124/2015 ణాంశ 15-10-2025 00 ಹರಿದು ಹಾಕಿ ಅಪಮಾನವೆಸಗಿ ಮಷ್ಕರ್ಮಿಗಳು, ಪುಡರೌಡಿಗಳನ್ನು ದಲಿತರಿಗೆ ಆವಾಜ್ಞೆ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿರುವ ದುಷ್ಕರ್ಮಿಗಳನ್ನು ಬೆಟಗೇರಿ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸದೆ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದ್ದು ಕಂಡು ಬಂದಿದೆ. ಬೆಟಗೇರಿ ಸಿಪಿಐ ಮತ್ತು ಬೆಟಗೇರಿ ಪಿಎಸ್‌ಐ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು
ಶೋಷಿತ ಸಮುದಾಯಕ್ಕೆ ಶೋಷಿಕ ಶಕ್ತಿಗಳಿಂದ ದೌರ್ಜನ್ಯವಾದಾಗ ಶೋಷಿತರಿಗೆ ರಕ್ಷಣೆ ನೀಡುವದೇ ಪೋಲೀಸ್ ಇಲಾಖೆ ಎಂದು ನಾವು ನಂಬಿದ್ದೇವೆ. ಆದರೆ ಗದಗ ಜಿಲ್ಲೆಯಲ್ಲಿ ಕೆಲವು ಪೋಲೀಸ್ ಇಲಾಖೆಯ ಅಧಿಕಾರಿಗಳ ಈ ರೀತಿಯ ಕರ್ತವ್ಯ ಲೋಪದಿಂದಾಗಿ ಪೋಲೀಸ್ ಇಲಾಖೆಯ ಮೇಲಿದ್ದ ಗೌರವ ಕಡೆಮೆಯಾಗುತ್ತಿದೆ.ದಯವಿಟ್ಟು ದಯಾಳುಗಳಾದ ತಾವು ಕೂಡಾ ದಲಿತ ಸಮುದಾಯದಲ್ಲಿಯೇ ಜನಿಸಿರುವದರಿಂದ ಅಸ್ಪಷ್ಟತೆ, ಆಸಮಾನತೆಯನ್ನ ಅನುಭವಿಸಿದ್ದೀರಿ ದಲಿತರ ನೋವು ಸಂಕಟಗಳನ್ನ ಅರ್ಥೈಸಿಕೊಂಡು ದೌರ್ಜನ್ಯಕ್ಕೊಳಗಾದ ಕರ್ತವ್ಯ ಲೋಪ ಎಸಗಿ ದಲಿತ ವಿರೋಧಿ ನೀತಿಯನ್ನ ದುಷ್ಕರ್ಮಿಗಳನ್ನು ಹಾಗೂ ಪುಡ ರೌಡಿಗಳು ಆರೋಪಿಗಳಾದ 1) ಹರೀಶ ತಂದೆ ಶಶಿಕಾಂತ್ ಬಾಕಳೆ 2) ದುಂಡುಸಾ ಅಂಬಾಸಾ ಬಾಕಳಿ 3) ಶಿವಾನಂದ ಶಶಿಕಾಂತ ಬಾಕಳೆ 4) ಶ್ರೀನಿವಾಸ ಕೊಟ್ಟೂರಸಾ ಬಾಕಳೆ 5) ಅಂಬಾಸಾ ಸುಂದರಲಾಲ ಬಾಕಳೆ ಸಹಚರರನ್ನು ರಾಷ್ಟ್ರದ್ರೋಹಿ ಕಾನೂನುಡಿಯಲ್ಲಿ ಇವರ ಮೇಲೆ ಪ್ರಕರಣವನ್ನು ದಾಖಲಿಸಿ ಜಿಲ್ಲೆಯಿಂದ ಗಡಿಪಾರುಗಳನ್ನು ಮಾಡಿ ಅದಕ್ಕೆ ಕುಮ್ಮಕ್ಕ ನೀಡಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕೂಡಲೆ ಅಮಾನತ್ತಿನಲ್ಲಿಟ್ಟು ದೌರ್ಜನ್ಯಕ್ಕೊಳಗಾದ ಬಡ ದಲಿತ ಕುಟುಂಬಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಒಂದು ವೇಳೆ ಈ ಮನವಿ ಕೊಟ್ಟ ಏಳು ದಿನದೊಳಗಾಗಿ ಸಂಬಂಧಿಸಿದ ಆರೋಪಿಗಳನ್ನು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸದಿದ್ದಲ್ಲಿ ಮುಂದಿನ ದಿನಮಾನದಲ್ಲಿ ಜಿಲ್ಲಾದ್ಯಂತ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಉಗ್ರ ಹೋರಾಟದ ಹಮ್ಮಿಕೊಳ್ಳಲಾಗುವುದೆಂದು ಸರಕಾರಕ್ಕೆ ಎಚ್ಚರಿಕೆ ನೀಡುತ್ತೇವೆ. ಈ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು