ಕರುನಾಡು ಘರ್ಜನೆ ಸುದ್ದಿ ಗದಗ 07: ಲೋಕಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭಮೇಳ ಯಶಸ್ವಿಯಾಗಿ, ಭವ್ಯ ಭಾರತ ಸಂಸ್ಕೃತಿಯು ವಿಶ್ವಮಟ್ಟದಲ್ಲಿ ಅನಾವರಣಗೊಳ್ಳಲು ಸಾಧ್ಯವಾಗಿದೆ ಎಂದು ಸರಕಾರಿಯ ನಿವೃತ್ತ ಜಿಲ್ಲಾ ಅಧಿಕಾರಿಗಳು ಹಾಗೂ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ಸೇವಾ ಸಮಿತಿ ಪ್ರಚಾರ ಸಮಿತಿ ಅಧ್ಯಕ್ಷರಾದ ರವಿ ಗುಂಜಿಕರ್ ಅವರು ಹೇಳಿದರು.
ಅವರು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಕಾರ್ಯಾಲಯಕ್ಕೆ ಬೇಟಿ ನೀಡಿ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರಿಗೆ ಆಮಂತ್ರಣ ಪತ್ರ ನೀಡಿ ಜಿಲ್ಲಾ ಸವಿತಾ ಸಮಾಜದ ಸನ್ಮಾನ ಸ್ವಿಕರಿಸಿ ಮಾತನಾಡಿ ಗದಗ ಮಹಾನಗರದಲ್ಲಿ ದಿನಾಂಕ : 11-11-2025 ರಿಂದ 18-11-2025 ರವರೆಗೆ ತಪಸ್ವಿಗಳ ಶಕ್ತಿಕೇಂದ್ರವೆಂದು ಖ್ಯಾತಿ ಹೊಂದಿರುವ ಹಿಮಾಲಯದ ನಾಗಸಾಧುಗಳು ಹಾಗೂ ಸ್ಥಳೀಯ ಪೂಜ್ಯರ ಮತ್ತು ಪಂಡಿತೋತ್ತಮರ ಸಾನಿಧ್ಯದಲ್ಲಿ, ಋತ್ವಿಜರ ವೇದವಾಣಿಯೊಂದಿಗೆ ನಾಡಿನ ಗಣ್ಯರು ಸಮ್ಮುಖದಲ್ಲಿ ಆಧ್ಯಾತ್ಮ ಚಿಂತಕರು ಹಾಗೂ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಆರ್.ಪಾಟೀಲರು ಹಾಗೂ ಮಾಜಿ ಸಚಿವರು, ನರಗುಂದದ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಸಿ ಪಾಟೀಲರ ಗೌರವಾಧ್ಯಕ್ಷತೆಯಲ್ಲಿ.
ಅತಿರುದ್ರಯಾಗ ಹಾಗೂ ಕಿರಿಯ ಕುಂಭಮೇಳವನ್ನು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನಡೆಸಲು ಗದಗ ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಅತಿರುದ್ರ ಮಹಾಯಜ್ಞ ಧರ್ಮಕಾರ್ಯದಲ್ಲಿ ಗದಗ ಬೆಟಗೇರಿ ಹಾಗೂ ಜಿಲ್ಲಾ ಸವಿತಾ ಸಮಾಜದ ಬಂಧು ಬಾಂಧವರು ತಾವು ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿ ಐತಿಹಾಸಿಕ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಬೇಕೆಂದು ಸಮಸ್ತ ಸವಿತಾ ಸಮಾಜದ ಸಕಲ ಬಂಧುಗಳಿಗೆ ವಿನಂತಿಸಿದರು.
ಗದಗ ಬೆಟಗೇರಿ ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಟ್ರಸ್ಟ ಕಮಿಟಿಯ ಗೌರವ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಆಮಂತ್ರಣ ಪತ್ರ ಸ್ವಿಕರಿಸಿ ಮಾತನಾಡಿ ನಮ್ಮ ಗದಗ ನಗರದಲ್ಲಿ ಜರುಗಲಿರುವ ಅತಿರುದ್ರಯಾಗ ಹಾಗೂ ಕಿರಿಯ ಕುಂಭಮೇಳದಂತಹ ದರ್ಮಕಾರ್ಯದಲ್ಲಿ ನಾವುಗಳೇಲ್ಲರೂ ಭಾಗವಹಿಸಲು ಅವಕಾಶ ಸಿಗುತ್ತಿರುವುದು ಸೌಭಾಗ್ಯ ಮತ್ತು ಪೂಣ್ಯದ ಕಾರ್ಯವಾಗಿದೆ ಎಂದ ಅವರು ಈ ಒಂಧು ಮಹಾ ಅತಿರುದ್ರಯಾಗ ಹಾಗೂ ಕಿರಿಯ ಕುಂಭಮೇಳದಲ್ಲಿ ನಮ್ಮ ಸಮಾಜದ ಸರ್ವರೇಲ್ಲರೂ ಭಾಗವಹಿಸಿ ಕೃತಾರ್ಥರಾಗಲು ಉತ್ಸುಕದಲ್ಲಿದ್ದೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾ ಪದಾಧಿಕಾರಿಗಳು ಹಾಗೂ ಗುರುಹಿರಿಯರು ಪ್ರಮುಖ ಬಾಂಧವರು ಹಾಜರಿದ್ದರು.