ಕರುನಾಡು ಘರ್ಜನೆ ಸುದ್ದಿ ಗದಗ ನ. 10– ಸ್ಥಳೀಯ ಶ್ರೀ ಜಗದ್ಗುರು ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ರಾಹುಲ್ ವಸಂತ ಸಿದ್ದಮ್ಮನಹಳ್ಳಿ 2025-26ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲಾ ಮಾರಿಯಮ್ಮನ ಹಳ್ಳಿಯಲ್ಲಿ ಆಯೋಜಿಸಿದ್ದ 14 ರಿಂದ 17 ವರ್ಷದ ಒಳಗಿನ 110 ಕೆಜಿ ವಿಭಾಗದ ಬಾಲಕರ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಹಗರಿಬೊಮ್ಮನಳ್ಳಿ ಶಾಸಕರಾದ ನೇಮರಾಜ ನಾಯಕ ಅವರು ಪ್ರಶಸ್ತಿಯನ್ನು ನೀಡಿದರು ಅಂತಾರಾಷ್ಟ್ರೀಯ ಕುಸ್ತಿ ತರಬೇತಿದಾರರು ಹಾಗೂ
ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಟೆಕ್ನಿಕಲ್ ಸಮಿತಿಯ ಚೇರ್ಮನರಾದ ಡಾ.ಕೆ ವಿನೋದ ಕುಮಾರ, ಬಿಇಓ ಶೇಖರ ವರಪೇಟೆ, ವಸಂತ ಸಿದ್ದಮ್ಮನಹಳ್ಳಿ ಮತ್ತು ಸ್ಥಳೀಯ ಹಿರಿಯ ಪೈಲ್ವಾನರು ಉಪಸ್ಥಿತರಿದ್ದರು. ರಾಹುಲ್ ಸಿದ್ದಮ್ಮನಹಳ್ಳಿ ಅವರಿಗೆ ಹಾತಲಗೇರಿಯ ಪೈಲ್ವಾನರಾದ ಸೋಮಣ್ಣ ಮೇಲ್ಮನೆ ತರಬೇತಿ ನೀಡಿದ್ದಾರೆ. 
ಈ ಸಾಧನೆ ಮಾಡಿದ ವಿದ್ಯಾರ್ಥಿಗೆ ಶಾಲಾ ಮುಖ್ಯೋಪಾಧ್ಯಾಯ, ಶಿಕ್ಷಕರು,ಶಿಕ್ಷಿಕಿಯರು ಅಭಿನಂದಿಸಿದ್ದಾರೆ.
ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಹುಲ್ ಗೆ ದ್ವಿತೀಯ ಸ್ಥಾನ
ಕರುನಾಡು ಘರ್ಜನೆ ಸುದ್ದಿ ಗದಗ ನ. 10– ಸ್ಥಳೀಯ ಶ್ರೀ ಜಗದ್ಗುರು ತೋಂಟದಾರ್ಯ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ರಾಹುಲ್ ವಸಂತ ಸಿದ್ದಮ್ಮನಹಳ್ಳಿ 2025-26ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲಾ ಮಾರಿಯಮ್ಮನ ಹಳ್ಳಿಯಲ್ಲಿ ಆಯೋಜಿಸಿದ್ದ 14 ರಿಂದ 17…