ಕರುನಾಡು ಘರ್ಜನೆ ಸುದ್ದಿ ಗದಗ ೨೨: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರೌಢಶಾಲಾ ಪ್ರದಾನ ಗುರುಗಳ ಹುದ್ದೆಗೆ ಬಡ್ತಿ ಪ್ರಕ್ರಿಯೆಯನ್ನು ಡಿಸೆಂಬರ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಎಂದು ಧಾರವಾಡ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದರು. ಈ ಕುರಿತು ಪ್ರೌಢಶಾಲಾ ಸಹಶಿಕ್ಷಕ ಸಂಘದ ಬೆಳಗಾವಿ ವಿಭಾಗದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಹೇಳಿದ ಅವರು, ಪ್ರೌಢಶಾಲಾ ಸಹ ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಬದ್ಧವಾಗಿರುವದಾಗಿ ತಿಳಿಸುತ್ತಾ, ವಿಭಾಗದ ಶಿಕ್ಷಕರ ಅನುಕೂಲಕ್ಕಾಗಿ ಎಚ್.ಆರ್.ಎಂ.ಎಸ್.
ಕೋಶವನ್ನು ಧಾರವಾಡದಲ್ಲಿ ತೆರೆಯಲಾಗುವುದು. ಸಹಶಿಕ್ಷಕರ ಸೇವಾ ಸೌಲಭ್ಯವನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಈ-ಆಫೀಸ್ ಆರಂಭಿಸಲಾಗುವುದೆAದು ತಿಳಿಸಿದರು.
ರಾಜ್ಯ ಸಂಘದ ಅಧ್ಯಕ್ಷರಾದ ಬಿ. ಸಿದ್ದಬಸಪ್ಪ ಹಾಗೂ ಪ್ರದಾನ ಕಾರ್ಯದರ್ಶಿಗಳಾದ ದೇವರಾಜೇಗೌಡ ಸಹ ಶಿಕ್ಷಕರ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎಫ್. ಪೂಜಾರ ಮಾತನಾಡಿ, ಪ್ರೌಢಶಾಲಾ ಸಹ ಶಿಕ್ಷಕರು ತುಂಬಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕ ಸ್ನೇಹಿ ವಾತಾವರಣ ಸೃಷ್ಟಿಸಿದಾಗ ಬೋಧನೆ ಹಾಗೂ ಕಲಿಕೆ ಸಂತಸದಾಯಕವಾಗಿರುತ್ತದೆ ಎಂದು ತಿಳಿಸಿ ಎಫ್.ಎಲ್.ಎನ್. ಸಾಮರ್ಥ್ಯಗಳನ್ನು ಮಗು ಪ್ರಾಥಮಿಕ ಹಂತದಲ್ಲೇ ಪೂರೈಸುವಂತೆ ನಿಗಾವಹಿಸಬೇಕು.
ಕಾರ್ಯನಿರ್ವಹಣಾ ವರದಿಗಾಗಿ (ಸಿ.ರ‍್ಸ್) ಶಿಕ್ಷಕರನ್ನು ಅಲೆದಾಡಿಸದೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೆ ವಿಶೇಷ ದೃಢೀಕರಣ ಕೊಡುವ ವ್ಯವಸ್ಥೆಯಾಗಬೇಕೆಂದು ಮನವಿ ಮಾಡಿದರು. ಆಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಮುತ್ತು ಗಾರವಾಡ, ಶಹರ ಘಟಕದ ಅಧ್ಯಕ್ಷರಾದ ಶರಣಪ್ಪ ನಾಗರಳ್ಳಿ, ಗದಗ ಗ್ರಾಮೀಣ ಘಟಕದ ಅಧ್ಯಕ್ಷರಾದ ರವಿರಾಜ ಪವಾರ, ಶಹರ ಖಜಾಂಚಿ ಯು.ಎಸ್. ನಿಪ್ಪಾಣಿಕರ ಉಪಸ್ಥಿತರಿದ್ದರು.