ಕರುನಾಡು ಘರ್ಜನೆ ಸುದ್ದಿ ಗದಗ ಡಿಸೆಂಬರ್ 12: ದಿನಾಂಕ: 17.12.2025(ಬುಧವಾರ) ರಂದು 110 ಕೆವ್ಹಿ ಗದಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ.
ಮುಂಜಾನೆ 10:00 ಗಂಟೆಯಿಂದ ಸಾಯಂಕಾಲ 05.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಸದರಿ ಉಪಕೇಂದ್ರಗಳಿಂದ ಪೂರೈಕೆಯಾಗುವ ಜಿಮ್ಸ ಆಸ್ಪತ್ರೆ, ಕುಡಿಯುವ ನೀರಿನ ಸ್ಥಾವರಗಳು, 33 ಕೆವ್ಹಿ ಐ.ಪಿಪಿ–ಕೆ.ಪಿ.ಸಿ.ಎಲ್, ನಾಗಾವಿ, ಮಲ್ಲಸಮುದ್ರ, ಪಯೋನಿರ್, ಟಿ.ಡಿ.ಪಿ ಎಲ್ 1, ಮತ್ತು 2, 33 ಕೆವಿ ಉಪಕೇಂದ್ರ–ಹುಲಕೋಟಿ, ಲಕ್ಕುಂಡಿ, ಕೆ.ಎಚ್.ಬಿಹಾಗೂ ಎಲ್ಲಾ 11 ಕೆವ್ಹಿ ನಗರ, ಗ್ರಾಮೀಣ, ಕೈಗಾರಿಕಾ, ಸೋಲಾರ್ ಐ.ಪಿ.ಪಿ, ಮತ್ತು ನೀರಾವರಿ ಪಂಪಸೆಟ್ಟಗಳ ವಿದ್ಯುತ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.