ಕರುನಾಡು ಘರ್ಜನೆ ಸುದ್ದಿ ದಿನಾಂಕ: 14-12-2025 ರಂದು 18-00 ಗಂಟೆಯ ಸುಮಾರಿಗೆ ಬಿಂಕದಕಟ್ಟಿ ಗ್ರಾಮದ ಹತ್ತಿರ ಇರುವ ಮರಾಠ ತಡ್ಡಾ ಹೊಟೇಲ್ ಮುಂದೆ ರಸ್ತೆ ಬಾಜು ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ
1] ಮುಬಾರಕ ರೋಣ ಸಾ: ಪೆಂಡಾರ ಓಣಿ ಬೆಟಗೇರಿ, 2] ಆರೀಪ ಡಂಬಳ ಸಾ: ಖಾನತೋಟ ಗದಗ.
3] ಭಿಮಸೇನ ಮಡಿವಾಳರ ಸಾ: ಕಿಲ್ಲಾ ಓಣಿ ಗದಗ,
4] ಆನಂದ ಪವಾರ ಸಾ: ಹೊಸಪೇಟೆ ಚೆಕ್ ಬೆಟಗೇರಿ. ಮತ್ತು
5] ಮಂಜು ಶಹಾಪೂರ ಸಾ: ಹೊಂಬಳ ನಾಕಾ ಜನತಾ ಕಾಲೋನಿ.
ಈ ಎಲ್ಲರೂ ಸೇರಿ ತಮ್ಮ-ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಠಾಣೆಯ ಶ್ರೀ ಸಿದ್ದರಾಮೇಶ್ವರ ಗಡೇದ, ಪೊಲೀಸ್ ಇನ್ಸಪೆಕ್ಟರ್ ರವರು ದಾಳಿ ಮಾಡಿ 11 52 ಇಸ್ಪಿಟ್ ಎಲೆಗಳು ಮತ್ತು 2] 7400/- ನಗದು ಹಣವನ್ನು ಜಪ್ತ ಮಾಡಿ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರಿ ತರ್ಪಿ ಪಿರ್ಯಾದಿಯನ್ನು ನೀಡಿದ್ದು ಆರೋಪಿತರ ವಿರುದ್ಧ ಗುನ್ನಾ ನಂ: 277/2025 ಕಲಂ: 87 ಕೆ.ಪಿ ಯ್ಯಾಕ್ಟ್ ಮತ್ತು ಕಲಂ: 112 ಬಿಎನ್‌ಎಸ್-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.