ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಮಹೀಂದ್ರ ಬೊಲೆರೋ ಹಾಗೂ ಬೈಕ್ ನಡುವ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ
ಕೊಪ್ಪಳದ ಇಂದರಗಿ ಬಳಿ ನಡೆದಿದೆ. ಬೈಕ್ಗೆ ಬೊಲೆರೋ ಜೀಪ್ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಮೂವರು ಯುವಕರು ಮೃತಪಟ್ಟಿದ್ದಾರೆ. 17 ವರ್ಷದ ವಾಜೀದ್, 17 ವರ್ಷದ ರಾಜಾ ಹುಸೇನ್ ಹಾಗೂ 18 ವರ್ಷದ ಆಸೀಫ್ ಮೃತ ಬೈಕ್ ಸವಾರರು.
ಒಂದೇ ಬೈಕ್ನಲ್ಲಿ ಮೂವರು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.