ಕರುನಾಡು ಘರ್ಜನೆ ಸುದ್ದಿ ಗದಗ ಡಿಸೆಂಬರ್ 19: ವಿಭಾಗದ ಮಟ್ಟದ ಪಿಂಚಣಿ ಅದಾಲತ್ ನ್ನು ಡಿಸೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಇಲಾಖೆಯ ಗದಗ ವಿಭಾಗೀಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಚೆ ಪಿಂಚಣಿದಾರರ ಕುಂದುಕೊರತೆಗಳನ್ನು ಮಾತ್ರ ಪರಿಗಣಿಸಲಾಗುವುದು.
ಪಿಂಚಣಿದಾರರು ತಮ್ಮ ಕುಂದುಕೊರತೆಗಳನ್ನು ಮೇಲ್ ವಿಳಾಸ dogadag.ka@indiapost.gov.in ಕ್ಕೆ ಕುಂದುಕೊರತೆಗಳನ್ನು ಡಿಸೆಂಬರ್ 22 ರೊಳಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗದಗವಿಭಾಗೀಯ ಅಂಚೆ ಕಚೇರಿಯ ಅಧೀಕ್ಷಕರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.