ಕರುನಾಡು ಘರ್ಜನೆ ಸುದ್ದಿ ಗದಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ದಿ: 20.12.2025 ರಂದು ರಾತ್ರಿ ವೇಳೆ “ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ.
ವಿಶೇಷ ಕಾರ್ಯಾಚರಣೆ” ಕೈಗೊಂಡು ರಾತ್ರಿ ಸಮಯದಲ್ಲಿನ ಜಾಗೃತಿಯನ್ನು ಹೆಚ್ಚಿಸಲು, ಸಾರ್ವಜನಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟಲು ವಾಹನಗಳನ್ನು ಪರಿಶೀಲಿಸಲಾಯಿತು.
ಜೊತೆಗೆ ಮದ್ಯಪಾನ ಮಾಡಿ ವಾಹನ ಚಲಾಯಿಸುವಿಕೆಯನ್ನು ಪತ್ತೆ ಮಾಡಿ ಒಟ್ಟು 38 ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ (Drunk & Drive) ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ವರದಿ ಗದಗ ಜಿಲ್ಲಾ ಪೊಲೀಸ್.