ಕರುನಾಡು ಘರ್ಜುನೆ ಸುದ್ದಿ ಗದಗ : ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.26 ರಂದು110 ಕೆವಿ ವಿದ್ಯುತ್ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಸದರಿ ಉಪಕೇಂದ್ರಗಳಿಂದ ಪೂರೈಕೆಯಾಗುವ ಜಿಮ್ಸ್ ಆಸ್ಪತ್ರೆ, ಕುಡಿಯುವ ನೀರಿನ ಸ್ಥಾವರಗಳು, 33 ಕೆವಿ ಐ.ಪಿಪಿ-ಕೆ.ಪಿ.ಸಿ.ಎಲ್, ನಾಗಾವಿ, ಮಲ್ಲಸಮುದ್ರ, ಪಯೋನಿರ್, ಟಿ.ಡಿ.ಪಿಎಲ್ 1 ಮತ್ತು 2, 33 ಕೆವಿ ಉಪಕೇಂದ್ರ-ಹುಲಕೋಟಿ, ಲಕ್ಕುಂಡಿ, ಕೆ.ಎಚ್.ಬಿಹಾಗೂ ಎಲ್ಲಾ 11 ಕೆವಿ ನಗರ, ಗ್ರಾಮೀಣ, ಕೈಗಾರಿಕಾ, ಸೋಲಾರ್ ಐ.ಪಿ.ಪಿ ಮತ್ತು ನೀರಾವರಿ ಪಂಪ್ಸೆಟ್ಗಳ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೇಕಾಗಿ ಹೆಸ್ಕಾಂ ಪ್ರಕಟಣೆ ವಿನಂತಿಸಿದೆ.