ಕರುನಾಡು ಘರ್ಜುನೆ ಸುದ್ದಿ ಇಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಆಭರಣ ಅಂಗಡಿಗಳು, ಬ್ಯಾಂಕ್/ಎಟಿಎಂಗಳು ಹಾಗೂ ಪೋಸ್ಟ್ ಆಫೀಸ್‌ಗಳಿಗೆ ಬೇಟಿ ನೀಡಿ ಸಮಗ್ರ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ.
ಈ ಸಂದರ್ಭದಲ್ಲಿ ಅಲಾರ್ಮ್ ವ್ಯವಸ್ಥೆ, 24×7 ಸಿಸಿಟಿವಿ ಕಾರ್ಯಾಚರಣೆ, ಸೈಕ್ಯೂರಿಟಿ ಗಾರ್ಡ್‌ಗಳ ನಿಯೋಜನೆ ಸೇರಿದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಅನುಸರಿಸುವ ಕುರಿತು ಸೂಚನಾ ಪತ್ರಗಳನ್ನು ನೀಡಲಾಗಿದ್ದು, ಕಡ್ಡಾಯವಾಗಿ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಗದಗ ಜಿಲ್ಲಾ ಪೊಲೀಸ್