ಗದಗ 05: ಕರುನಾಡು ಘರ್ಜನೆ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚಾರಪಡಿಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ.ಈ ಪತ್ರಿಕೆಯು ಹಳ್ಳಿಯಿಂದ ದಿಲ್ಲಿಯವರೆಗೂ ಸಣ್ಣ ಗುಡಿಸಲದಿಂದ ಅರಮನೆವರೆಗೂ ಸಾಮಾಜಿಕ, ಧಾರ್ಮಿಕ ಮತ್ತು ಬಡವರ, ರೈತರ, ಶ್ರಮಿಕರ ಪರವಾದ ಜನಪರವಾದ ವಿಚಾರಗಳನ್ನು ಪ್ರಕಟಿಸಿ ನ್ಯಾಯ ದೊರಕಿಸಿ ಕೊಡುವ ಪ್ರಯತ್ನ ಮಾಡುವಂತಾಗಲಿ ಎಂದು ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಾಶ್ರಮದ ಪರಮಪೂಜ್ಯರಾದ ಶ್ರೀ ಶ್ರೀ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿದರು.
ಅವರು ಕರುನಾಡು ಘರ್ಜನೆ ಪತ್ರಿಕೆಯ ವತಿಯಿಂದ ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ ಪುಣ್ಯಾಶ್ರಮದಲ್ಲಿ ನಡೆದ ಕರುನಾಡು ಘರ್ಜನೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಪೂಜ್ಯರು ಮಾತನಾಡಿ ಈ ಪತ್ರಿಕೆಯು ಸಮಾಜದಲ್ಲಿನ ಅಂತಿಮ ವ್ಯಕ್ತಿಗೂ ಧ್ವನಿಯಾಗುತ್ತಿದೆ ಮತ್ತು ಅವರ ಹಕ್ಕುಗಳನ್ನು ಪಡೆಯಲು ಸಹಾಯ ಮಾಡುತ್ತಿದೆ” ಎಂದು ಶ್ಲಾಘಿಸಿದರು. 
ಗದಗ ಜಿಲ್ಲಾ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ .ಸಿ .ನ್ ಶ್ರೀಧರ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೊಹನ್ ಜಗದೀಶ್, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರಗುಂದ ಶಾಸಕರು C, C ಪಾಟೀಲ ಹಾಗೂ ಕಾಟನ್ ಸೇಲ್ ಸೊಸಾಯಾಟಿಯಲ್ಲಿ ಮಾಜಿ ಶಾಸಕರು ಡಿ. ಆರ್. ಪಾಟೀಲ ಅವರ ಕೂಡ ಪತ್ರಿಕೆ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಗದಗ ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿಗಳಾದ ವಸಂತ ಮಡ್ಲೂರ ಅವರು ಮಾತನಾಡಿ ಕರುನಾಡು ಘರ್ಜನೆ ಪತ್ರಿಕೆಯು ತನ್ನ ಪ್ರಾಮಾಣಿಕ ಸೇವೆ ಮತ್ತು ಜನಪರವಾದ ಉದ್ದೇಶದಿಂದ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿದೆ.
ಈ ಪತ್ರಿಕೆಯು ಸಮಾಜದಲ್ಲಿನ ಅನ್ಯಾಯ, ಅಸಮಾನತೆಯನ್ನು ಎದುರಿಸಲು ಮತ್ತು ಜನರಿಗೆ ಸತ್ಯ ಮತ್ತು ನ್ಯಾಯದ ದಾರಿಯನ್ನು ತೋರಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ” ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತರಾದ ಉಡಚಪ್ಪ ಹಳ್ಳಿಕೇರಿ ಅವರು ಮಾತನಾಡಿ ಕರುನಾಡು ಘರ್ಜನೆ ಪತ್ರಿಕೆಯು ಸಮಾಜದಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ. ಈ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚುರಪಡಿಸುತ್ತಿದೆ. ಎಂದ ಅವರು ಕರುನಾಡು ಘರ್ಜನೆ ಪತ್ರಿಕೆಯ ತಂಡಕ್ಕೆ ಶುಭ ಹಾರೈಸಿದರು
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ಮಾತನಾಡಿ ಈ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚಾರಪಡಿಸುತ್ತಿದೆ. ಸಂಪಾದಕರುಗಳಾದ ಶೌಕತ್ ಕಾತರಕಿ ಮತ್ತು ಯಾಸೀನಸಾಬ ಬೋದ್ಲೆಖಾನ್ ಅವರ ನಿರಂತರ ಪ್ರಯತ್ನ ಮತ್ತು ಸಮರ್ಪಣೆಯಿಂದ ಈ ಪತ್ರಿಕೆಯು ಸಮಾಜದಲ್ಲಿನ ಅಂತಿಮ ವ್ಯಕ್ತಿಗೂ ಧ್ವನಿಯಾಗುತ್ತಿದೆ ಎಂದ ಅವರು ಈ ಪತ್ರಿಕೆಯ ಮೂಲಕ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿರುವ ಅವರ ಸೇವೆಯನ್ನು ಶ್ಲಾಘನೀಯ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂಜುನಾಥ ಆಸಂಗಿ, ಶಿವಾನಂದ ತಮ್ಮನವರ, ಕರೀಮ್ ಸುಣಗಾರ, ಗಣೇಶ ಹುಬ್ಬಳ್ಳಿ, ಪ್ರಕಾಶ್ ಬನ್ನಿಗಿಡದ , ಹನಮಂತಪ್ಪ ರಾಂಪುರ, ಹನುಮಂತ ಪಲದ್ದೊಡಿ , ಕೃಷ್ಣ ಹಡಪದ, ಮೆಹೆಬೂಬ ರೋಣ , ಬಸವರಾಜ ಈರಣ್ಣವರ, ದೇಸಾಯಿ ಹಾಗೂ ಉಪಸ್ಥಿತರಿದ್ದರು.