ಕರುನಾಡು ಘರ್ಜುನೆ ಸುದ್ದಿ ದಿನಾಂಕ 06.01.2025 ರಂದು ಬೆಳಿಗ್ಗೆ ಸುಮಾರು 09:30 ಗಂಟೆಗೆ ಪಾಪನಾಶಿ ಟೋಲ್ ನಾಕಾ ಸಮೀಪ KA-26 F-0852 ಸರ್ಕಾರಿ ಬಸ್ನ ನಿರ್ವಾಹಕಿ ಶ್ರೀಮತಿ ನೇತ್ರಾವತಿ ಗಂಡ ಮಹಾಂತೇಶ ಪತ್ರಿಮಠ ರವರ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ.
ಹಲ್ಲೆಗೊಳಗಾದ ನಿರ್ವಾಹಕಿ ನೀಡಿದ ದೂರಿನ ಮೇರೆಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 05/2026 ಕಲಂ 115(2), 132, 76, 352 ರೆ.ವು 3(5) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತ್ವರಿತ ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿತರಾದ A1 ಪ್ರಕಾಶ ತಂದೆ ಲಕ್ಷ್ಮಣ ಸಂಕಣ್ಣವರ (ಕದಂಪೂರ, ಮುಂಡರಗಿ) ಹಾಗೂ A2 ನೀಲಪ್ಪ @ ಮುತ್ತಣ್ಣ ತಂದೆ ಹುಚ್ಚಪ್ಪ ಜಂತ್ಲಿ (ಸಿಂಗಟರಾಯನಕೇರಿ, ಮುಂಡರಗಿ) ಇವರನ್ನು ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕ ಸೇವೆ ನಿರ್ವಹಿಸುವವರ ಮೇಲೆ ಹಲ್ಲೆಗೆ ಶೂನ್ಯ ಸಹನೆ — ಕಾನೂನು ಕ್ರಮ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ.
ಹೆಚ್ಚಿನ ಅಪ್ಡೇಟ್ಸ್ ಗಳಿಗಾಗಿ ತಪ್ಪದೆ ಕರುನಾಡು ಘರ್ಜುನೆ ಸುದ್ದಿ ಫಾಲೋ ಮಾಡಿ ಶೇರ್ ಮಾಡಿ.