ಕರುನಾಡು ಘರ್ಜನೆ ಸುದ್ದಿ ಗದಗ ಜ.24- ಗದಗ ನಗರದ ಎಸ್.ಎಮ್.ಕೃಷ್ಣಾನಗರದ ವಸಂತ ಪ.ಸಿದ್ದಮ್ಮನಹಳ್ಳಿ ಇವರ ಸುಪುತ್ರನಾದ ರಾಹುಲ್ ವಸಂತ ಸಿದ್ದಮ್ಮನಹಳ್ಳಿ ಇವರು ತುಮಕೂರಿನಲ್ಲಿ ಜರುಗಿದ ಕರ್ನಾಟಕ ಕ್ರೀಡಾಕೂಟ 2026 ಕುಸ್ತಿ ಸ್ಪರ್ಧೆಯ 110 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಗದಗ ನಗರಕ್ಕೆ ಕೀರ್ತಿ ತಂದಿದ್ದಾನೆ.
ದಾವಣಗೆರೆ ಜಿಲ್ಲೆಯ ಪೊಲೀಸ್ ಇಲಾಖೆಯ ಕುಸ್ತಿ ತರಬೇತಿದಾರಾದ ಶ್ರೀಶೈಲ್ . ಹಾಗೂ ಹನುಮಂತ ಅವರು ಪ್ರಶಸ್ತಿ ಪತ್ರವನ್ನು ವಿತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕುಸ್ತಿ ತರಬೇತಿದಾರ ಡಾ. ವಿನೋದಕುಮಾರ ಉಪಸ್ಥಿತರಿದ್ದರು.