ಕರುನಾಡು ಘರ್ಜನೆ ಸುದ್ದಿ ಗದಗ : ಸರ್ಕಾರಕ್ಕೆ ಕಾನೂನು ಮಾಡಲು ಅನುದಾನವೇನು ಬೇಕಾಗಿಲ್ಲ, ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಕೃಷ್ಣಾ ಹಡಪದ ಅಭಿಮತ ಸವಿತಾ ಸಮಾಜದವರನ್ನು ನಿಂದಿಸುವ ಪದ ಬಳಕೆಗೆ ಕಡಿವಾಣ ಹಾಕಲು ಸರಕಾರವು ವಿಶೇಷ ಕಾನೂನು ರೂಪಿಸಲು ಮುಂದಾಗಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ಸರ್ಕಾರವನ್ನು ಒತ್ತಾಯಿಸಿದರು
ಅವರು ಗದಗ ಜಿಲ್ಲಾಡಳಿತ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಹಾಗು ಗದಗ ಜಿಲ್ಲಾ ಸವಿತಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರ ಹೇಳಿಕೆಯನ್ನು ಸ್ವಾಗತಿಸಿ ಮಾತನಾಡಿ ‘ಹುಟ್ಟಿನಿಂದ ಜಾತಿ ಬಂದಿಲ್ಲ. ವೃತ್ತಿಯಿಂದ ಜಾತಿ ಬಂದಿದೆ. ಯಾರೂ ಯಾವುದೇ ಜಾತಿಯನ್ನು ಆಯ್ಕೆ ಮಾಡಿ ಕೊಂಡು ಹುಟ್ಟಿರುವುದಿಲ್ಲ. ನಿಂದನಾತ್ಮಕ ಪದ ಬಳಸುವವರಿಗೆ ಹೆದರಿಕೆ ಹುಟ್ಟಬೇಕಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಶಿಕ್ಷೆಯಾಗಬೇಕಾದರೆ ಅದಕ್ಕೆ ಸರಿಯಾದ ಕಾನೂನು ಬೇಕು’ ಕಾನೂನು ಮಾಡಲು ಅನುದಾನವೇನು ಬೇಕಾಗಿಲ್ಲ’ ಎಂದು ಹೇಳಿದ ಕೃಷ್ಣಾ ಎಚ್ ಹಡಪದ ಅವರು. ಶೀಘ್ರದಲ್ಲೇ ರಾಜ್ಯ ಸವಿತಾ ಸಮಾಜದ ಮುಖಂಡರುಗಳ ನಿಯೋಗವನ್ನು ಹಿರಿಯರು ಹಾಗೂ ಕಾನೂನು ಸಚಿವರಾದ ಎಚ್ ಕೆ ಪಾಟೀಲ ಅವರ ಬಳಿ ಕರೆದುಕೊಂಡು ಹೋಗಿ ಕ್ಷೌರಿಕರ ನಿಂದನೆ ತಡೆಗೆ ವಿಶೇಷ ಕಾನೂನು ರೂಪಿಸಲು ಕಾನೂನು ಸಚಿವರಲ್ಲಿ ಮನವಿ ಮಾಡಿ ಒತ್ತಾಯಿಸಲು ದಿನಾಂಕ ನಿಗದಿಪಡಿಸಿಕೂಡಬೆಕೇಂದು’ ಸೇರಿದಂತೆ ವಸತಿ ರಹಿತ ಸಮಾಜದ ಬಡವರಿಗೆ ಆಶ್ರಯ ಮನೆ. ಉಚಿತ 200 ಸಲೂನ್ ಕುರ್ಚಿಗಳು. ಗಂಗಿಮಡಿಯಲ್ಲಿ ಶ್ರೀ ನಾಗದೇವರ ದೇವಸ್ಥಾನ ನಿರ್ಮಾಣಕ್ಕೆ 15 ಲಕ್ಷ ರುಪಾಯಿ ಬಿಡುಗಡೆ. ಧರ್ಮರ್ನಿಷ್ಟ ಕ್ಷೌರಿಕ ಶ್ರೀ ಸಂತಸೇನಾ ಮಹಾರಾಜ ಗುರುಗಳ ಹೆಸರು ಪ್ರಮುಖ 29 ನೇ ವಾರ್ಡಿನಲ್ಲಿ ಗುರುತಿಸಿದ ಎರಡು ವೃತ್ತಗಳಲ್ಲಿ ಯಾವುದಾದರೂ ಒಂದು ಪ್ರಮುಖ ವೃತಕ್ಕೆ ನಾಮಕರಣ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕೆಂದು ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲರಲ್ಲಿ ಮತ್ತು ಗದಗ ಜಿಲ್ಲಾ ಅಧಿಕಾರಿಗಳಲ್ಲಿ ಕೃಷ್ಣಾ ಎಚ್ ಹಡಪದ ಅವರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿ ಮಾತನಾಡಿದರು
ಸವಿತಾ ಮಹರ್ಷಿ ಭಾವಚಿತ್ರಕ್ಕೆ ಕೃಷ್ಣಗೌಡ್ರು ಪಾಟೀಲರು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ವೇದಿಕೆ ಮೇಲೆ ಉಪಸ್ಥಿತರದ್ದ ಎಲ್ಲಾ ಗಣ್ಯಮಾನ್ಯರು ಸೇರಿ ಪುಷ್ಪ ನಮನ ಸಲ್ಲಿಸಿದ ನಂತರ ಕೃಷ್ಣಗೌಡ್ರು ಪಾಟೀಲರು ಸವಿತಾ ಮಹರ್ಷಿಗಳ ಬಗ್ಗೆ ಹಿತ ನುಡಿಗಳನ್ನು ಮಾತನಾಡಿ ಕೃಷ್ಣ ಎಚ್ ಹಡಪದ ನೇತೃತ್ವದ ನಿಯೋಗದಿಂದ ಸಲ್ಲಿಸಿದ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಅದರಲ್ಲಿ ಕ್ಷೌರಿಕರ ನಿಂದನೆ ತಡೆಗೆ ಕಾನೂನು ರೂಪಿಸುವ ಪ್ರಮುಖ ಬೇಡಿಕೆ ಈಡೇರಲು ಬೆಂಗಳೂರಿಗೆ ತಮ್ಮ ಸಮಾಜದ ರಾಜ್ಯ ಮುಖಂಡರು ಹಾಗು ಸಮಾಜದ ಹಿರಿಯರೊಂದಿಗೆ ತಾವೆಲ್ಲರೂ ನಿಯೋಗದೊಂದಿಗೆ ಬಜೆಟ್ ಅಧಿವೇಶನದ ಮೊದಲು ಬನ್ನಿ ನಾನೇ ನಮ್ಮ ಪೂಜ್ಯ ತಂದೆಯವರು ಮತ್ತು ಕಾನೂನು ಸಚಿವರಾದ ಎಚ್ ಕೆ ಪಾಟೀಲಜಿ ಅವರ ಬಳಿ ಕರೆದುಕೊಂಡು ಹೋಗಿ ನಿಂದನಾ ಪದ ಬಳಸುವುದನ್ನು ನಿಯಂತ್ರಿಸಲು ಕಾನೂನು ಮಾಡಲು ಒತ್ತಾಯಿಸೋಣ. ಎಂದು ಕೃಷ್ಣಗೌಡ್ರು ಪಾಟೀಲರು ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳಾದ ಸಿ.ಎನ್ ಶ್ರೀಧರ್ ಅವರು ಮಾತನಾಡಿ ಗದಗ ಜಿಲ್ಲಾ ಸವಿತಾ ಸಮಾಜದ ಬೇಡಿಕೆಗಳನ್ನು ಪರಿಗಣಿಸಿ, ಸರ್ಕಾರದೊಂದಿಗೆ ಚರ್ಚಿಸಿ, ತ್ವರಿತವಾಗಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ. ನಿಷೇಧಿತ ಪದವನ್ನು ಯಾರಾದರೂ ಬಳಿಸಿದರೆ ಅಂತವರಿಗೆ ಸರ್ಕಾರದಲ್ಲಿ ಕಾನೂನಿನಲ್ಲಿ ಯಾವ ಅವಕಾಶಗಳಿವೇ ಅದನ್ನ ಕಾನೂನಾತ್ಮಕವಾಗಿ ಕಾನೂನು ರೂಪಿಸಲು ನಾನು ಸಹ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ತಮ್ಮ ಸಮಾಜದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲು ನಾನು ಸಿದ್ಧನಿದ್ದೇನೆ. ಸಮಾಜದ ಗೌರವ ಮತ್ತು ಸಮಾನತೆಯನ್ನು ಕಾಪಾಡಲು ನಾನು ಬದ್ಧನಿದ್ದೇನೆ.” ಎಂದು ಹೇಳಿದರು
ದಾವಣಗೆರೆ ವೆಂಕಟೇಶ ಅವರು ಮಾತನಾಡಿ ಸವಿತಾ ಸಮುದಾಯದವರು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಜಾತಿಗಳು ಮೊದಲು ಒಗ್ಗಟ್ಟಾಗುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ರಾಜಕೀಯ ನಾಯಕರಾದ ಅಕ್ಬರಸಾಬ ಬಬರ್ಚಿ. ರವಿಕುಮಾರ ರಡ್ಡಿ. ಅಬ್ದುಲಮುನಾಫ್ ಮುಲ್ಲಾ. ಸವಿತಾ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ. ಬಾಲರಾಜ ಕೋಟೆಕಲ್ಲ. ಅಶೋಕ ಮಾನೆ. ದತ್ತು ಮಾನೆ. ಅರೂಣ ರಾಂಪೂರ ಹಾಗೂ ಗದಗ-ಬೆಟಗೇರಿ ಸವಿತಾ ಸಮಾಜ ಮತ್ತು ಶ್ರೀ ಸಂತ ಸೇನಾ ಮಹಾರಾಜ ನಾಬಿಕ್ ಮರಾಠ (ಸವಿತಾ) ಸಮಾಜದ ಒಟ್ಟು ಐದು ದೈವಗಳು ಸೇರಿದಂತೆ ಶಿರಹಟ್ಟಿ. ನರಗುಂದ. ಲಕ್ಷ್ಮೇಶ್ವರ. ಸಮಾಜದ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಗುರುಹಿರಿಯರು ನೂರಾರು ಯುವಕರು ಅಧಿಕಾರಿಗಳು ರಾಜಕಾರಣಿಗಳು ವಿವಿಧ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು
: ಬಾಕ್ಸ್ ಹೇಳಿಕೆ :
ಮಾನ್ಯ ಕಾನೂನು ಸಚಿವರೇ ಮತ್ತು ಸರ್ಕಾರದ ಗೌರವಾನ್ವಿತ ಸದಸ್ಯರೇ,
ಸವಿತಾ ಸಮಾಜದ ಮೇಲೆ ನಿರಂತರವಾಗಿ ಆಗುತ್ತಿರುವ ನಿಂದನೆ ಮತ್ತು ಅಗೌರವದ ವಿರುದ್ಧ ಕಾನೂನು ರೂಪಿಸಲು ಒತ್ತಾಯಿಸುತ್ತೇವೆ. ನಾವು ಕೇವಲ ನ್ಯಾಯ ಮತ್ತು ಸಮಾನತೆಯನ್ನು ಬಯಸುತ್ತೇವೆ.
ಸರ್ಕಾರಕ್ಕೆ ಕಾನೂನು ಮಾಡಲು ಅನುದಾನವೇನು ಬೇಕಾಗಿಲ್ಲ, ಆದರೆ ನ್ಯಾಯ ಮತ್ತು ಸಮಾನತೆಗೆ ಬದ್ಧತೆಯ ಅಗತ್ಯವಿದೆ. ವಿಳಂಬಕ್ಕೆ ಯಾವುದೇ ಕಾರಣವಿಲ್ಲ, ಕ್ಷೌರಿಕ ಸವಿತಾ ಸಮಾಜದವರಿಗೆ ನ್ಯಾಯ ನೀಡುವ ಸಮಯ ಬಂದಿದೆ.
ಸವಿತಾ ಸಮಾಜದವರನ್ನು ನಿಂದಿಸುವ ಪದ ಬಳಕೆಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸಲು ಮುಂದಾಗಬೆಕೆಂದು ಸರಕಾರಕ್ಕೆ ಒತ್ತಾಯಿಸಿ ಆಗ್ರಹಿಸಿದ್ದಾರೆ.