ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ತಾಲ್ಲೂಕು ಹಲಿಗೇರಿ ಕ್ರಾಸ್ ಬಳಿ ಸಂಭವಿಸಿದೆ ಬೈಕ್ ಸವಾರನಿಗೆ ಹಿಂಬದಿಯ ಹಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದ ಹತ್ತಿರ ಕಾವೇರಿ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ ಸೋಮವಾರ 22/04/2024 ಸಾಯಂಕಾಲ ನಡೆದಿದೆ.
ಗಂಗಾವತಿ ತಾಲೂಕಿನ ಆರಾಹಳ ಗ್ರಾಮದ ನಿವಾಸಿಯಾದ ರಾಜೇಸಾಬ (60) ಮೃತ ದುರ್ದೈವಿ ಎಂದು ಗುರಿತಿಸಲಾಗಿದೆ.
ರಾಜೇಸಾಬ ಕುಕನೂರು ತಾಲ್ಲೂಕು ಮನ್ನಾಪೂರ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಗೆ ಬಂದಿದ್ದು ಮುಗಿಸಿ ಕೊಂಡು ಮರಳಿ ತಮ್ಮ ಊರಿಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂಬದಿಯ ಹಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿ ರಭಸಕ್ಕೆ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ. ಬೈಕ್ ನಲ್ಲಿ ಇದೆಂತ ಬೈಕ್ ಸವಾರರು ಬೈಕ್ ಬಿಟ್ಟು ಸ್ಥಳದಿಂದ ಪಲಾಯಾನ ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಅಪಘಾತ ಪಡಿಸಿದ ಬೈಕ್ ಡಿಕ್ಕಿ ಹೊಡೆದು ಸ್ಥಳದಿಂದ ಪಲಾಯಾನ ಮಾಡಿದ್ದಾರೆ . ಈ ಕುರಿತು ಕೊಪ್ಪಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಂದು ತಿಳಿದು ಬಂದಿದೆ