Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
Uncategorized

“ಪ್ರತ್ಯೇಕ ಉತ್ತರ ಕರ್ನಾಟಕ ಸವಿತಾ ಸಮಾಜ” ಸಂಘಟನೆಯನ್ನು ಶೀಘ್ರದಲ್ಲೇ ಅಸ್ತಿತ್ವಕ್ಕೆ” ಕೃಷ್ಣಾ ಹಡಪದ ಘೋಷಣೆ,

ಕರುನಾಡು ಘರ್ಜನೆ ಸುದ್ದಿ ಸವಣೂರು 04 : ಸವಿತಾ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು ಹಾಗೂ ರಾಜಕೀಯವಾಗಿ ಸಮಾಜವನ್ನು ಗುರುತಿಸಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್. ಹಡಪದ…

ಕರುನಾಡು ಘರ್ಜನೆ ಸುದ್ದಿ ಸವಣೂರು 04 : ಸವಿತಾ ಸಮಾಜದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಾಗಿ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು ಹಾಗೂ ರಾಜಕೀಯವಾಗಿ ಸಮಾಜವನ್ನು ಗುರುತಿಸಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್. ಹಡಪದ ಆಗ್ರಹಿಸಿದರು.
ಅವರು ಸವಣೂರು ಸವಿತಾ ಸಮಾಜದ ವತಿಯಿಂದ ಗೋಕಾಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಕುರಿತು ಅವಹೇಳನಕಾರಿ ಅಥವಾ ನಿಷೇಧಿತ ಪದಗಳನ್ನು ಬಳಸುವವರ ವಿರುದ್ಧ ಸರ್ಕಾರವು ಕೂಡಲೇ ಜಾಮೀನು ರಹಿತ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸವಣೂರು ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷಗಳ ಅನುದಾನವನ್ನು ಮಂಜೂರು ಮಾಡಿದ ಜನಪ್ರೀಯ ಶಾಸಕರಾದ ಯಾಸೀರ ಅಹ್ಮದಖಾನ ಪಠಾಣ ಅವರಿಗೆ ಕೃತಜ್ಞತೆಗಳು ಸಲ್ಲಿಸಿ ಮಾತನಾಡಿ ಈ ಅನುದಾನವನ್ನು ಆದಷ್ಟು ಬೇಗ ಬಿಡುಗಡೆಗೊಳಿಸಬೇಕೆಂದು ವಿನಂತಿದರು ಮತ್ತು ಸವಣೂರು ಸವಿತಾ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಕಾಂಗ್ರೆಸ್ ಪಕ್ಷದ ಬಹುತೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಸಮಾಜ-ಪಕ್ಷದ ಸಂಘಟನೆಗೆ ಸುಮಾರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸಮಾಜದ ಯುವ ನಾಯಕರಾದ ವೆಂಕಟೇಶ ಉಂಡವೆಲ್ಲಿ ಅವರಿಗೆ ಈ ಕೂಡಲೇ ರಾಜಕೀಯ ಉನ್ನತ ಸ್ಥಾನಮಾನವನ್ನು ನೀಡಬೇಕು ಮತ್ತು ಮುಂಬರುವ ಪುರಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟನ್ನು ನೀಡಿ ಅವರ ಜತೆ ತಾವು ಖುದ್ದಾಗಿ ನಿಂತು ಗೆಲ್ಲಿಸಿ ಅವರಿಗೆ ಸಮಾಜ ಮತ್ತು ಸಾರ್ವಜನಿಕರ ಸೇವೆ ಸಲ್ಲಿಸಲು ಅನುಕುಲ ಮಾಡಿಕೊಡಬೇಕೆಂದು ಶಾಸಕರಾದ ಯಾಸಿರ ಅಹ್ಮದಖಾನ ಪಠಾಣ ಅವರಿಗೆ ಮತ್ತು ಅವರ ಸಹೋದರರಾದ ಮುನ್ನಾ ಅಹ್ಮದಖಾನ ಪಠಾಣ ಅವರಿಗೆ ಮನವಿ ಮಾಡಿ ಒತ್ತಾಯಿಸಿ ಮುಂದುವರೆದು ಮಾತನಾಡಿ
ಉತ್ತರ ಕರ್ನಾಟಕ ಹಾಗೂ ಈ ಭಾಗದ ಹಿಂದುಳಿದ ಶೋಷಿತ ಹಾಗೂ ಬಡ ಸವಿತಾ ಸಮಾಜದ ಕ್ಷೌರಿಕರ ಸಮಾನತೆ ಕುರಿತಾಗಿ ರಾಜಕಾರಣಿಗಳು ಮತ್ತು ಸವಿತಾ ಸಮಾಜದ ರಾಜ್ಯ ನಾಯಕರು ದೊಡ್ಡ ದೊಡ್ಡ ಭಾಷಣಗಳನ್ನೇ ಮಾಡುತ್ತಾರೆ. ಆದರೆ, ರಾಜಕಾರಣದಲ್ಲಿ ಮತ್ತು ರಾಜ್ಯ ಸವಿತಾ ಸಮಾಜದಲ್ಲಿ ಈ ಭಾಗದ ಸವಿತಾ ಸಮಾಜದ ಕ್ಷೌರಿಕರ ನಾಯಕರು ಎಷ್ಟಿದ್ದಾರೆ ಮತ್ತು ಸಮಾಜಕ್ಕೆ ಅನುಧಾನ ಎಷ್ಟು ದೂರಕಿದೆ ಹಾಗು ಸಮಾಜದ ಅಭಿವೃದ್ದಿ ಎಷ್ಟಾಗಿದೆ ಎಂದು ಕೇಳಿದರೆ ನಿಜಕ್ಕೂ ನಾಚಿಕೆಯಾಗುತ್ತದೆ ಹಾಗಾಗಿ ಇವರ ಮೇಲಿನ ಭರವಸೆ ನಮಗಿಲ್ಲ ಅನಿವಾರ್ಯವಾಗಿ ಉತ್ತರ ಕರ್ನಾಟಕ ಭಾಗದ ಸವಿತಾ ಬಾಂಧವರ ಹಿತದೃಷ್ಟಿಯಿಂದ ಶೀಗ್ರದಲ್ಲೇ “ಪ್ರತ್ಯೇಕ ಉತ್ತರ ಕರ್ನಾಟಕ ಸವಿತಾ ಸಮಾಜ” ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗುವುದು ಸಮರ್ಥ ನಾಯಕರಾದ ಗುರುರಾಜ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಕೃಷ್ಣಾ ಎಚ್ ಹಡಪದ ಘೋಷಿಸಿದರು.
ತಹಶೀಲ್ದಾರ ರವಿಕುಮಾರ್ ಕೊರವರ, ಪಂಚ ಗ್ಯಾರಂಟಿ ಅಧ್ಯಕ್ಷ ಸುಭಾಸ್ ಮಜ್ಜಗಿ, ಸವಿತಾ ಸಮಾಜದ ಕುರಿತು ಮಾತನಾಡಿದರು.
ತಾಲೂಕಾಧ್ಯಕ್ಷ ಏಕನಾಥ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು.ಎಸ್‌ಎಸ್ಎಲ್ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು. ಕಾವ್ಯಾ ಪ್ರಸಾದ ಉಪನ್ಯಾಸ ನೀಡಿದರು. ವಿವಿಧ ವಾಧ್ಯ ವೈಭವಗಳೊಂದಿಗೆ ಭಾವಚಿತ್ರವನ್ನು ಸಾರೋಟದಲ್ಲಿ ಪ್ರತಿಷ್ಟಾಪಿಸಿ ಮೆರವಣಿಗೆ ಕೈಗೊಳ್ಳಲಾಯಿತು. ತಹಶೀಲ್ದಾರ ರವಿಕುಮಾ‌ರ್ ಕೊರವರ ಚಾಲನೆ ನೀಡಿದರು. ಹಾವೇರಿ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಗುರುರಾಜ.ಕೆ, ಮಿನ್ನಲಪ್ಪ ಆರ್. ಕರ್ನೂಲ್, ಹನಮಂತಪ್ಪ ರಾಂಪೂರ, ವಿನಾಯಕ ರಾಯಚೂರ. ಕೃಷ್ಣ ಉಪ್ಪೇರ, ಪಾಂಡುರಂಗ ಬಿ. ಮುಪ್ಪಿಪಲ್ಲಿ, ಎಲ್ಲಪ್ಪ ಜಿ ಸುಗೂರ, ವೆಂಕಟೇಶ ಉಂಡವಲ್ಲಿ. ಕೃಷ್ಣ ವೆಲ್ಕೂರ, ಪ್ರಸಾದ ಜಿ. ಕತ್ತೆಪಲ್ಲಿ, ಸೋಮಣ್ಣ ಕರ್ನೂಲ್, ನಾಗರಾಜ್ ಬಿ. ರಾಯಚೂರ, ಶ್ರೀನಿವಾಸ್ ಜಿ ವಲ್ಲೂರ, ನರಸಪ್ಪ ವಿ. ಪುಡೂರ, ಸೇರಿದಂತೆ ಸವಿತಾ ಸಮಾಜದ ಮುಖಂಡರು, ಗಣ್ಯರು, ಸಮಾಜದ ಬಂಧುಗಳು ಇದ್ದರು.

ವರದಿ: ಶೌಕತ್ ಕಾತರಕಿ ಸಂಪಾದಕ 

Editor

Leave a comment