Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಕ್ಷೌರಿಕರಿಗೆ ಸರ್ಕಾರಿ ಮಾನ್ಯತೆ ನೀಡಿ; ‘ಸರ್ಕಾರಿ ಸಲೂನ್’ ಮೂಲಕ ಸಾಮಾಜಿಕ ಬದಲಾವಣೆಗೆ ಕೃಷ್ಣ ಹಡಪದ ಆಗ್ರಹ

ಕರುನಾಡು ಘರ್ಜನೆ ಸುದ್ದಿ ಗದಗ 14: ರಾಜ್ಯದಲ್ಲಿ ಸವಿತಾ ಸಮಾಜದ ಯುವಕರು ಎದುರಿಸುತ್ತಿರುವ ಸಾಮಾಜಿಕ ಕಡೆಗಣನೆ ಮತ್ತು ಉದ್ಯೋಗ ಭದ್ರತೆಯ ಕೊರತೆಯನ್ನು ನೀಗಿಸಲು ಸರ್ಕಾರವು ತಕ್ಷಣವೇ ‘ಸರ್ಕಾರಿ ಸಲೂನ್’ ಯೋಜನೆಯನ್ನು ಬರುವ ಇದೇ ಬಜೆಟ್ ನಲ್ಲಿ ಜಾರಿಗೆ ತರಬೇಕು ಎಂದು ಗದಗ…

ಕರುನಾಡು ಘರ್ಜನೆ ಸುದ್ದಿ ಗದಗ 14: ರಾಜ್ಯದಲ್ಲಿ ಸವಿತಾ ಸಮಾಜದ ಯುವಕರು ಎದುರಿಸುತ್ತಿರುವ ಸಾಮಾಜಿಕ ಕಡೆಗಣನೆ ಮತ್ತು ಉದ್ಯೋಗ ಭದ್ರತೆಯ ಕೊರತೆಯನ್ನು ನೀಗಿಸಲು ಸರ್ಕಾರವು ತಕ್ಷಣವೇ ‘ಸರ್ಕಾರಿ ಸಲೂನ್’ ಯೋಜನೆಯನ್ನು ಬರುವ ಇದೇ ಬಜೆಟ್ ನಲ್ಲಿ ಜಾರಿಗೆ ತರಬೇಕು ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರದ ಮುಂದೆ ಈ ಕೆಳಗಿನ ಕ್ರಾಂತಿಕಾರಿ ಬೇಡಿಕೆಗಳನ್ನು ಮಂಡಿಸಿದ್ದಾರೆ:
*ಸರ್ಕಾರಿ ಸಲೂನ್ ಮತ್ತು ಉದ್ಯೋಗ ಭದ್ರತೆ:* ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಸರ್ಕಾರಿ ಸಲೂನ್‌ಗಳನ್ನು ಸ್ಥಾಪಿಸಬೇಕು. ಇಲ್ಲಿ ಕಾರ್ಯನಿರ್ವಹಿಸುವ ಸವಿತಾ ಸಮಾಜದ ಕ್ಷೌರಿಕರಿಗೆ ಸರ್ಕಾರಿ ನೌಕರರಂತೆ ಮಾನ್ಯತೆ ಮತ್ತು ವೇತನ ಶ್ರೇಣಿ ನೀಡಬೇಕು.
*ಆರನೇ ಗ್ಯಾರಂಟಿ – ಉಚಿತ ಸೇವೆ:* ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಈ ಸಲೂನ್‌ಗಳಲ್ಲಿ ಸಂಪೂರ್ಣ ಉಚಿತ ಕ್ಷೌರ ಸೇವೆ ನೀಡಬೇಕು. ಇದರಿಂದ ಅವರಿಗೆ ಶಿಸ್ತು ಮತ್ತು ನೈರ್ಮಲ್ಯದ ಅಭ್ಯಾಸ ಬೆಳೆಯುತ್ತದೆ ಮತ್ತು ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. 60 ವರ್ಷದ ನಂತರದ ಹಿರಿಯ ನಾಗರಿಕರಿಗೆ ಈ ಸಲೂನ್‌ಗಳಲ್ಲಿ ಸಂಪೂರ್ಣ ಉಚಿತ ಕ್ಷೌರ ಸೇವೆ ನೀಡಬೇಕು. ಇದರಿಂದ ಅವರಿಗೆ ಅನುಕೂಲ ಆಗುತ್ತದೆ, ಸಂತೋಷವಾಗುತ್ತದೆ ಮತ್ತು ಸರ್ಕಾರವು ಅವರ ಕ್ಷೇಮವನ್ನು ಪರಿಗಣಿಸುವಂತಾಗುತ್ತದೆ ಈ ಮೂಲಕ ಸರ್ಕಾರವು ತನ್ನ ಆರನೇ ಗ್ಯಾರಂಟಿ ಎಂದು ಘೋಷಿಸಿ ಜನಸಾಮಾನ್ಯರ ನೆರವಿಗೆ ಬರಬೇಕು.
*ಸಾಮಾಜಿಕ ಗೌರವ ಮತ್ತು ವಿವಾಹದ ಭದ್ರತೆ:* ಇಂದಿನ ದಿನಗಳಲ್ಲಿ ಪೋಷಕರು ಕೇವಲ ಸರ್ಕಾರಿ ನೌಕರರಿಗಷ್ಟೇ ಹೆಣ್ಣು ಕೊಡಲು ಬಯಸುತ್ತಿದ್ದಾರೆ. ಇದರಿಂದಾಗಿ ಕಾಯಕವನ್ನೇ ನಂಬಿದ ನಮ್ಮ ಸಮಾಜದ ಸಾವಿರಾರು ಯುವಕರು ಮದುವೆಯಾಗಲು ಹೆಣ್ಣು ಸಿಗದೆ ಸಂಕಷ್ಟದಲ್ಲಿದ್ದಾರೆ. ಈ ಯೋಜನೆಯಿಂದ ಕ್ಷೌರಿಕ ವೃತ್ತಿಗೂ ‘ಸರ್ಕಾರಿ ಮಾನ್ಯತೆ’ ದೊರೆತಂತಾಗುತ್ತದೆ. ಆಗ ಹೆಣ್ಣು ಮಕ್ಕಳು ಮತ್ತು ಅವರ ಪೋಷಕರು ಕ್ಷೌರಿಕ ಯುವಕರನ್ನು ಮದುವೆಯಾಗಲು ಹೆಮ್ಮೆಯಿಂದ ಮುಂದೆ ಬರುವಂತಾಗುತ್ತದೆ. ಇದು ಸಮಾಜದಲ್ಲಿ ನಮಗೆ ಸಿಗಬೇಕಾದ ನಿಜವಾದ ಗೌರವ.
*ಆರ್ಥಿಕ ಸ್ವಾವಲಂಬನೆ:* ಕಾರ್ಪೊರೇಟ್ ಕಂಪನಿಗಳ ಪೈಪೋಟಿಯ ನಡುವೆ ನಶಿಸುತ್ತಿರುವ ಕುಲಕಸುಬನ್ನು ಉಳಿಸಲು ಸರ್ಕಾರವು ವಿದ್ಯುತ್ ರಿಯಾಯಿತಿ ಹಾಗೂ ಆಧುನಿಕ ಪರಿಕರಗಳ ಖರೀದಿಗೆ ಧನಸಹಾಯ ನೀಡಬೇಕು.
“ನಮ್ಮ ಬೇಡಿಕೆ ಕೇವಲ ಹಣಕ್ಕಾಗಿ ಅಲ್ಲ, ಅದು ನಮ್ಮ ಸಮಾಜದ ಯುವಕರ ಆತ್ಮಗೌರವದ ಪ್ರಶ್ನೆಯಾಗಿದೆ. ಸರ್ಕಾರಿ ನೌಕರಿ ಎಂಬ ಲೇಬಲ್ ಸಿಕ್ಕರೆ ಮಾತ್ರ ನಮ್ಮ ಯುವಕರಿಗೆ ಸಮಾಜದಲ್ಲಿ ಮತ್ತು ವಿವಾಹ ಮಾರುಕಟ್ಟೆಯಲ್ಲಿ ಬೆಲೆ ಸಿಗುವಂತಾಗಿದೆ. ಈ ತಾರತಮ್ಯ ಅಳಿಯಲು ಸರ್ಕಾರಿ ಸಲೂನ್ ಸ್ಥಾಪನೆ ಅನಿವಾರ್ಯ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ತಿಳಿಸಿದ್ದಾರೆ.

Editor

Leave a comment