ಕರುನಾಡು ಘರ್ಜನೆ ಸುದ್ದಿ ಗದಗ 16: “ಜಾತಿ ವ್ಯವಸ್ಥೆಯ ವಿಷವರ್ತುಲವನ್ನು ಮುರಿದು, ದಲಿತ ಬಂಧುಗಳೊಂದಿಗೆ ಸೌಹಾರ್ದತೆಯಿಂದ ಬದುಕುವುದು ನಮ್ಮ ಸಂಕಲ್ಪ. ಇದನ್ನು ತಡೆಯಲು ಬರುವ ಮೇಲ್ವರ್ಗದ ಶಕ್ತಿಗಳ ಅಹಂಕಾರವನ್ನು ನಾವು ಮೆಟ್ಟಿ ನಿಲ್ಲುತ್ತೇವೆ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ. ಅವರು ಕ್ರಾಂತಿಕಾರಿ ಕರೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಅವರು ಮಾತನಾಡಿ ಮಾನವೀಯತೆಯೇ ನಮ್ಮ ಪರಮೋಚ್ಚ ಧರ್ಮ ಮನುಷ್ಯ ಮನುಷ್ಯರನ್ನು ಪ್ರೀತಿಸುವುದು ಮತ್ತು ಗೌರವಿಸುವುದು ನಮ್ಮ ಸಂಸ್ಕೃತಿ. ದಲಿತ ಬಂಧುಗಳು ನಮ್ಮ ಅಣ್ಣ-ತಮ್ಮಂದಿರಿದ್ದಂತೆ. ಅವರೊಂದಿಗೆ ಸಮಾನವಾಗಿ ಸೌಹಾರ್ದಯುತ ಬಾಂಧವ್ಯ ಬೆಳೆಸಲು ನಾವು ಸದಾ ಸಿದ್ಧ. ಯಾರು ಏನಾದರೂ ಅಂದುಕೊಳ್ಳಲಿ, ದಲಿತರಿಗೆ ಗೌರವಯುತ ಕ್ಷೌರ ಸೇವೆ ನೀಡುವುದು ನಮ್ಮ ಸಂವಿಧಾನಬದ್ಧ ಕರ್ತವ್ಯ ಮತ್ತು ಸಂಕಲ್ಪವಾಗಿದೆ ಎಂದು ಸವಿತಾ ಸಮಾಜಕ್ಕೆ ತಿಳಿಸಿದರು
ಕೆಲವು ಗ್ರಾಮಗಳಲ್ಲಿ ಮೇಲ್ವರ್ಗದ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ಸಮಾಜದ ಬಂಧುಗಳ ಮೇಲೆ ಒತ್ತಡ ಹೇರುತ್ತಿರುವುದು ಮತ್ತು ಅಸ್ಪೃಶ್ಯತೆಯನ್ನು ಪೋಷಿಸುತ್ತಿರುವುದು ಅಮಾನವೀಯ. ಇಂತಹ ‘ಮನುಧರ್ಮ’ದ ಕಾಲ ಈಗ ಮುಗಿದಿದೆ. ನಮ್ಮ ಸೌಹಾರ್ದತೆಗೆ ಅಡ್ಡಿಪಡಿಸುವ ಅಥವಾ ನಮಗೆ ಬೆದರಿಕೆ ಹಾಕುವ ಯಾವುದೇ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಅವರನ್ನು ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ಜೈಲಿಗೆ ಕಳುಹಿಸಲು ನಾವು ಹಿಂಜರಿಯುವುದಿಲ್ಲ ಎಂದ ಕೃಷ್ಣ ಎಚ್ ಹಡಪದ ಮುಂದುವರೆದು ಮಾತನಾಡಿ ಸೌಹಾರ್ದತೆಯಿಂದ ಸೇವೆ ಸಲ್ಲಿಸಲು ಹಂಬಲಿಸುವ ನಮ್ಮ ಬಂಧುಗಳಿಗೆ ಸರ್ಕಾರವು ಸೂಕ್ತ ರಕ್ಷಣೆ ನೀಡಬೇಕು. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಸರ್ಕಾರಿ ಸೌಹಾರ್ದ ಸಲೂನ್’ ನಿರ್ಮಿಸಿ, ಅಲ್ಲಿ ಕೆಲಸ ಮಾಡುವ ಸವಿತಾ ಸಮಾಜದ ಕ್ಷೌರಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಅವರಿಗೆ ಆರ್ಥಿಕ ಭದ್ರತೆ ನೀಡಬೇಕು ಈ ಕುರಿತು ಈ ಕ್ರಾಂತಿಕಾರಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶೀಘ್ರದಲ್ಲೇ ಗದಗ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಬೃಹತ್ ಮನವಿ ಸಲ್ಲಿಸಲಾಗುವುದು ಎಂದ ಅವರು ಅಸ್ಪೃಶ್ಯತೆ ಮುಕ್ತ ಜಿಲ್ಲೆಯನ್ನಾಗಿ ಗದಗವನ್ನು ಮಾಡುವುದೇ ನಮ್ಮ ಗುರಿ. ಹಾಗೂ ಗದಗ ಜಿಲ್ಲೆಯ ದಲಿತ ಚಳುವಳಿಯ ಮುಂಚೂಣಿ ನಾಯಕರಾದ ಎಸ್. ಎನ್.ಬಳ್ಳಾರಿ ಗುರುಗಳ ಆಶಯವು ಸಹ ಹೌದು ಹಾಗಾಗಿ ಜಿಲ್ಲೆಯ ಸವಿತಾ ಸಮಾಜದ ಬಾಂಧವರು ಯಾವುದೇ ಶಕ್ತಿಗಳಿಗೆ ಹೆದರುವ ಅಗತ್ಯವಿಲ್ಲ. ನಿಮ್ಮ ಹಿಂದೆ ಗದಗ ಜಿಲ್ಲಾ ಸವಿತಾ ಸಮಾಜವು ಮತ್ತು ಗದಗ ಜಿಲ್ಲೆಯ ದಲಿತ ಚಳುವಳಿಯ ಸಂಘಟನೆಗಳು. ಹಾಗೂ ನಾಯಕರುಗಳು ಮತ್ತು ಪ್ರಗತಿಪರರು ಬಂಡೆಯಂತೆ ನಿಂತಿದ್ದಾರೆ.
ಯಾರಾದರೂ ತೊಂದರೆ ನೀಡಿದರೆ ತಕ್ಷಣ ನನ್ನನ್ನು 9845650612 ಸಂಪರ್ಕಿಸಿ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ಹಾಗೂ ಸಮಾಜದ ನಾಯಕರುಗಳು ತಿಳಿಸಿದ್ದಾರ