Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

“ಗದಗದ ಶಿಂಗಟಾಲೂರು ಮಾದರಿ ಇಡೀ ರಾಜ್ಯಕ್ಕೆ ದಾರಿದೀಪವಾಗಲಿ”‘ಸರ್ಕಾರಿ ಸೌಹಾರ್ದ ಸಲೂನ್’ ಯೋಜನೆ ವಿಸ್ತರಣೆಗೆ ಕೃಷ್ಣ ಹಡಪದ ಹಕ್ಕೊತ್ತಾಯ”

ಕರುನಾಡು ಘರ್ಜನೆ ಸುದ್ದಿ ಗದಗ 27: “ಸಹಕಾರ ಚಳವಳಿಯ ತವರೂರು ಮತ್ತು ಪ್ರಗತಿಪರ ಚಿಂತನೆಗಳ ನೆಲೆಬೀಡಾದ ನಮ್ಮ ಗದಗ ಜಿಲ್ಲೆಯಲ್ಲೇ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿ ಜೀವಂತವಿರುವುದು ನಮಗೆಲ್ಲರಿಗೂ ನೋವಿನ ಸಂಗತಿ. ಆದರೆ, ಈ ಅನಿಷ್ಟವನ್ನು ಮೆಟ್ಟಿ ನಿಲ್ಲಲು ಸರ್ಕಾರವೇ ಮುಂದೆ ಬಂದು…

ಕರುನಾಡು ಘರ್ಜನೆ ಸುದ್ದಿ ಗದಗ 27: “ಸಹಕಾರ ಚಳವಳಿಯ ತವರೂರು ಮತ್ತು ಪ್ರಗತಿಪರ ಚಿಂತನೆಗಳ ನೆಲೆಬೀಡಾದ ನಮ್ಮ ಗದಗ ಜಿಲ್ಲೆಯಲ್ಲೇ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿ ಜೀವಂತವಿರುವುದು ನಮಗೆಲ್ಲರಿಗೂ ನೋವಿನ ಸಂಗತಿ. ಆದರೆ, ಈ ಅನಿಷ್ಟವನ್ನು ಮೆಟ್ಟಿ ನಿಲ್ಲಲು ಸರ್ಕಾರವೇ ಮುಂದೆ ಬಂದು ಶಿಂಗಟಾಲೂರು ಗ್ರಾಮದಲ್ಲಿ ‘ಸರ್ಕಾರಿ ಸೌಹಾರ್ದ ಸಲೂನ್’ ಪ್ರಾರಂಭಿಸಿರುವುದು ಒಂದು ಐತಿಹಾಸಿಕ ಕ್ರಾಂತಿಯಾಗಿದೆ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಅವರು ಸರ್ಕಾರದ ಕ್ರಮ ಸ್ವಾಗತಿಸಿ ಮಾತನಾಡಿ, ಈ ಸಾಮಾಜಿಕ ಬದಲಾವಣೆಗೆ ಭದ್ರ ಬುನಾದಿ ಹಾಕಿದ ಗದಗ ಜಿಲ್ಲೆಯ ಹಿರಿಯ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಸನ್ಮಾನ್ಯ ಎಚ್.ಕೆ. ಪಾಟೀಲ್ ಸಾಹೇಬರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಡೀ ಸವಿತಾ ಕ್ಷೌರಿಕ ಸಮಾಜದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಚಿವರಾದ ಎಚ್.ಕೆ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಸಾಮರಸ್ಯವನ್ನೂ ಎತ್ತಿ ಹಿಡಿಯುವ ಕೆಲಸ ನಡೆಯುತ್ತಿದೆ ಎಂದು ಕೃಷ್ಣ ಎಚ್ ಹಡಪದ ಸಮಾಜದ ಸಮಸ್ತ ಬಾಂಧವರ ಪರವಾಗಿ ಶ್ಲಾಘಿಸಿದ್ದಾರೆ.
*ಪ್ರಮುಖ ಹಕ್ಕೊತ್ತಾಯಗಳು*
ಗದಗ ಜಿಲ್ಲೆಯ ಶಿಂಟಾಲೂರು ಗ್ರಾಮದ ಈ ಯಶಸ್ವಿ ಯೋಜನೆಯನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಸ್ತರಿಸಿ, ಸವಿತಾ ಕ್ಷೌರಿಕ ಸಮಾಜದ ವೃತ್ತಿಬಾಂಧವರ ಬದುಕಿಗೆ ಆರ್ಥಿಕ ಭದ್ರತೆ ನೀಡಬೇಕು.
ನಮ್ಮಲ್ಲಿ ಸಹೋದರತ್ವ ಮತ್ತು ಸಮನ್ವಯದ ಭಾವನೆ ಮೂಡಿಸಲು ಸರ್ಕಾರವು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಗ್ರಾಮ ಮಟ್ಟದಲ್ಲಿ *’ಸೌಹಾರ್ದ ಸಮನ್ವಯ ಜಾಗೃತಿ ಸಭೆ’* ಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು.
ಈ ಸರ್ಕಾರಿ ಸಲೂನ್‌ಗಳಲ್ಲಿ ಸೇವೆ ಸಲ್ಲಿಸುವ ಕ್ಷೌರಿಕರನ್ನು ಗೌರವ ನೌಕರರೆಂದು ಪರಿಗಣಿಸಿ, ಅವರಿಗೆ ನಿಗದಿತ ವೇತನ ಮತ್ತು ವಿಮಾ ಸೌಲಭ್ಯ ಒದಗಿಸಬೇಕು.
*ಗದಗ ಜಿಲ್ಲೆಯ ಮೇಲೆ ಅಂಟಿರುವ ತಾರತಮ್ಯದ ಕಳಂಕವನ್ನು ಅಳಿಸಿಹಾಕಿ, ಜಿಲ್ಲೆಯನ್ನು ಸಂಪೂರ್ಣ ಅಸ್ಪೃಶ್ಯತೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸರ್ಕಾರದಿಂದ ಒಂದು ಸಮಿತಿ ರಚನೆ ಮಾಡಬೇಕು ಅದರ ಸಂಪೂರ್ಣ ಜವಾಬ್ದಾರಿಯನ್ನು ಗದಗ ಜಿಲ್ಲೆಯ ದಲಿತ ಚಳುವಳಿಯ ಮುಂಚೂಣಿ ನಾಯಕರು ಮತ್ತು ಸವಿತಾ ಕ್ಷೌರಿಕ ಸಮಾಜ ಬಂದುಗಳ ಹಿತೈಷಿಗಳಾದ ಎಸ್ ಎನ್ ಬಳ್ಳಾರಿ ಗುರುಗಳಿಗೆ ನೀಡಿ ಅವರ ಮುಂದಾಳತ್ವದಲ್ಲಿ ವಿಶೇಷ ಅಭಿಯಾನವನ್ನು ಸರ್ಕಾರ ಕೈಗೊಳ್ಳಬೇಕು* ಎಂದು ಕೃಷ್ಣಾ ಎಚ್ ಹಡಪದ ಹೇಳಿದರಲ್ಲದೆ “ಶತಮಾನಗಳಿಂದ ಎಲ್ಲರನ್ನೂ ಮುಟ್ಟಿ ನಿಷ್ಠೆಯಿಂದ ಕ್ಷೌರಸೇವೆ ಸಲ್ಲಿಸುತ್ತಿರುವ ಸವಿತಾ ಸಮಾಜಕ್ಕೆ ಇಂದಿಗೂ ಇಂತಹ ತಾರತಮ್ಯದ ನೋವು ಕಾಡುತ್ತಿರುವುದು ದುರದೃಷ್ಟಕರ.
ಸರ್ಕಾರವು ನಮ್ಮ ಈ ನ್ಯಾಯಸಮ್ಮತ ಅಳಲನ್ನು ಆಲಿಸಿ, ಶಿಂಗಟಾಲೂರು ಮಾದರಿಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್ ಹಡಪದ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ
ಯಾರಾದರೂ ತೊಂದರೆ ನೀಡಿದರೆ ಅಥವಾ ತಾರತಮ್ಯ ಎಸಗಿದರೆ ತಕ್ಷಣ ನನ್ನನ್ನು 9845650612 ಸಂಪರ್ಕಿಸಿ ಎಂದು ಕೃಷ್ಣಾ ಎಚ್ ಹಡಪದ. ಹಿರಿಯರಾದ ಹನುಮಂತಪ್ಪ ರಾಂಪುರ. ಪರಶುರಾಮ ಕೋಟೆಕಲ್ಲ ಹಾಗೂ ಖಜಾಂಚಿ ಅರುಣ ರಾಂಪುರ ತಿಳಿಸಿದ್ದಾರೆ.

ಬಾಕ್ಸ್ ಹೇಳಿಕೆ
°°°°°°°°°°°°°°
*”ಜಾತಿ ಬೇಧದ ಅಳಿವಿಗೆ ಸರ್ಕಾರವೇ ಬರಬೇಕಾದ ಸ್ಥಿತಿ ನಮ್ಮ ಒಗ್ಗಟ್ಟಿನ ಕೊರತೆಗೆ ಸಾಕ್ಷಿ”*
“ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕಬೇಕಾದ ಕಾಲವಿದು. ಆದರೆ, ಇಂದಿಗೂ ಸಮಾಜದಲ್ಲಿ ಜಾತಿ ತಾರತಮ್ಯ ಜೀವಂತವಾಗಿದ್ದು, ಅದನ್ನು ಸರಿಪಡಿಸಲು ಸರ್ಕಾರವೇ ಮಧ್ಯಸ್ಥಿಕೆ ವಹಿಸಬೇಕಾದ ಸ್ಥಿತಿ ಬಂದಿರುವುದು ನಿಜಕ್ಕೂ ಬೇಸರದ ಸಂಗತಿ. ನಮ್ಮಲ್ಲಿ ಸಮನ್ವಯದ ಕೊರತೆ ಇರುವುದರಿಂದಲೇ ಇಂತಹ ಕೆಟ್ಟ ಪದ್ಧತಿಗಳು ಜೀವ ಪಡೆದಿವೆ ಎಂಬುದು ಇಡೀ ರಾಜ್ಯಕ್ಕೆ ತಿಳಿಯುವಂತಾಗಿದ್ದು ನೋವಿನ ವಿಷಯ.
*ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ, ಸರ್ಕಾರವು ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ‘ಸೌಹಾರ್ದ ಸಮನ್ವಯ ಜಾಗೃತಿ ಸಭೆ’ಗಳನ್ನು ನಡೆಸಬೇಕು.* ಆಗ ಮಾತ್ರ ಜನರಲ್ಲಿ ಅರಿವು ಮೂಡಿ ಇಂತಹ ತಾರತಮ್ಯಗಳು ಮರೆಯಾಗಲು ಸಾಧ್ಯ.
‘ಸ್ಪೀನ್ ಸೇವಾ ಪ್ರತಿಷ್ಠಾನ’ವು ಈಗಾಗಲೇ ರಾಜ್ಯಾದ್ಯಂತ ‘ಕ್ಷೌರ ಕುಟಿರ’ಗಳ ಮೂಲಕ ಬಡ ಕುಟುಂಬಗಳಿಗೆ ಆಧಾರವಾಗುತ್ತಿದೆ. ಈಗಲಾದರೂ ಸರ್ಕಾರ ಕೇವಲ ಯೋಜನೆ ಘೋಷಿಸದೆ, ಶಿಂಟಾಲೂರು ಮಾದರಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸಿ, ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಶಾಶ್ವತವಾಗಿ ನೆಲೆಗೊಳಿಸಬೇಕು.”
— ನಾಮದೇವ ನಾಗರಾಜ್,
ಅಧ್ಯಕ್ಷರು, ಸ್ಪೀನ್ ಸೇವಾ ಪ್ರತಿಷ್ಠಾನದ ಮಾಲೀಕರು – ಬೆಂಗಳೂರು.

 

Editor

Leave a comment