ಕರುನಾಡು ಘರ್ಜನೆ ಸುದ್ದಿ ಗದಗ: ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯದ ಬಹುದಿನದ ಬೇಡಿಕೆಯಾಗಿದ್ದ ‘ಹಜ್ ಭವನ’ ನಿರ್ಮಾಣಕ್ಕೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮಂಜೂರಾತಿ ದೊರೆತಿರುವುದು ಈ ಭಾಗದ ಜನರಲ್ಲಿ ಹರ್ಷ ತಂದಿದೆ. ಸರ್ಕಾರದ ಈ ನಿರ್ಧಾರವನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಮುಕ್ತಕಂಠದಿಂದ ಸ್ವಾಗತಿಸಿದೆ.
ನಗರದ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಹಾಸಭಾದ ರಾಜ್ಯಾಧ್ಯಕ್ಷರಾದ ಮಹ್ಮದಶಫಿ ನಾಗರಕಟ್ಟಿ ಅವರು, “ಇದು ಕೇವಲ ಒಂದು ಕಟ್ಟಡವಲ್ಲ, ಉತ್ತರ ಕರ್ನಾಟಕದ ಮುಸ್ಲಿಂ ಬಾಂಧವರ ದಶಕಗಳ ಭಾವನಾತ್ಮಕ ಹೋರಾಟಕ್ಕೆ ಸಂದ ಜಯ” ಎಂದು ಬಣ್ಣಿಸಿದರು.
ಸತತ ಹೋರಾಟಕ್ಕೆ ಸಿದ್ಧ ಪ್ರತಿಫಲವಾಗಿದೆ 2016-17 ರಿಂದಲೇ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾವು ಧಾರವಾಡದಲ್ಲಿ ಹಜ್ ಭವನ ಸ್ಥಾಪನೆಗಾಗಿ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿತ್ತು. ಧಾರವಾಡ ಹಾಗೂ ಗದಗ ಜಿಲ್ಲೆಯ ಸಮಾಜದ ಮುಖಂಡರು ಈ ಬೇಡಿಕೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಿದ್ದರು. ಧಾರವಾಡದಿಂದಲೇ ನೇರವಾಗಿ ಹಜ್ ಯಾತ್ರೆಗೆ ತೆರಳುವ ವ್ಯವಸ್ಥೆಯಾಗಬೇಕು ಹಾಗೂ ಯಾತ್ರಿಕರಿಗೆ ತಂಗಲು ಸೂಕ್ತ ವ್ಯವಸ್ಥೆ ಇರಬೇಕೆನ್ನುವುದು ಈ ಭಾಗದ ಜನರ ಆಶಯವಾಗಿತ್ತು.
ಪ್ರಸ್ತಾವಿತ ಹಜ್ ಭವನವು ಕೇವಲ ಯಾತ್ರಿಕರಿಗೆ ಸೀಮಿತವಾಗದೆ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೂ ಪೂರಕವಾಗಲಿದೆ. ಈ ಭವನದಲ್ಲಿ ಐಎಎಸ್ (IAS) ಮತ್ತು ಐಪಿಎಸ್ (IPS) ತರಬೇತಿ ಕೇಂದ್ರಗಳನ್ನು ಒಳಗೊಂಡಿರಬೇಕೆಂಬ ಬೇಡಿಕೆಯೂ ಇದೆ. ಇದರಿಂದ ಉತ್ತರ ಕರ್ನಾಟಕದ ಪ್ರತಿಭಾವಂತ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅನುಕೂಲವಾಗಲಿದೆ.
“ನಮ್ಮ ಭಾಗದ ಜನರ ಧ್ವನಿಗೆ ಸ್ಪಂದಿಸಿ ಬಜೆಟ್‌ನಲ್ಲಿ ಅನುದಾನ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ನಾವು ಋಣಿಯಾಗಿದ್ದೇವೆ. ಈ ಹೋರಾಟಕ್ಕೆ ಬೆಂಬಲವಾಗಿ ನಿಂತ ಜಿಲ್ಲಾ ಉಸ್ತುವಾರಿ ಸಚಿವರುಗಳು, ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಹಕಾರ ಅಭಿನಂದನೀಯ,” ಎಂದು ನಾಗರಕಟ್ಟಿ ಅವರು ಸಭೆಯಲ್ಲಿ ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಹಜ್ ಭವನ ನಿರ್ಮಾಣ: ಉತ್ತರ ಕರ್ನಾಟಕದ ದಶಕದ ಕನಸು ನನಸು.
ಕರುನಾಡು ಘರ್ಜನೆ ಸುದ್ದಿ ಗದಗ: ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯದ ಬಹುದಿನದ ಬೇಡಿಕೆಯಾಗಿದ್ದ ‘ಹಜ್ ಭವನ’ ನಿರ್ಮಾಣಕ್ಕೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮಂಜೂರಾತಿ ದೊರೆತಿರುವುದು ಈ ಭಾಗದ ಜನರಲ್ಲಿ ಹರ್ಷ ತಂದಿದೆ. ಸರ್ಕಾರದ ಈ ನಿರ್ಧಾರವನ್ನು ಅಖಿಲ ಕರ್ನಾಟಕ ಮುಸ್ಲಿಂ…