Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

” ಹೊಂಬಳನಾಕಾ ಜನತಾ ಕಾಲೋನಿಯ ನರಕಯಾತನೆಗೆ ಕೃಷ್ಣಗೌಡರೇ ಸಂಜೀವಿನಿ”: ನಿವಾಸಿಗಳ ಭಾವನಾತ್ಮಕ ಆಗ್ರಹ!

ಕರುನಾಡು ಘರ್ಜನೆ ಸುದ್ದಿ ಗದಗ 12: ಗದಗ ನಗರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ, ಜನರ ಕಷ್ಟಗಳಿಗೆ ಸ್ಪಂದಿಸುವ “ಜನಸಾಮಾನ್ಯರ ಆಶಾಕಿರಣ” ಶ್ರೀ ಕೃಷ್ಣಗೌಡ ಹೆಚ್. ಪಾಟೀಲ್ ಅವರು ನಮ್ಮ ಬಡಾವಣೆಗೂ ಭೇಟಿ ನೀಡಿ, ನಮ್ಮ 40 ವರ್ಷಗಳ ಕಣ್ಣೀರು ಒರೆಸಬೇಕೆಂದು…

ಕರುನಾಡು ಘರ್ಜನೆ ಸುದ್ದಿ ಗದಗ 12: ಗದಗ ನಗರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ, ಜನರ ಕಷ್ಟಗಳಿಗೆ ಸ್ಪಂದಿಸುವ “ಜನಸಾಮಾನ್ಯರ ಆಶಾಕಿರಣ” ಶ್ರೀ ಕೃಷ್ಣಗೌಡ ಹೆಚ್. ಪಾಟೀಲ್ ಅವರು ನಮ್ಮ ಬಡಾವಣೆಗೂ ಭೇಟಿ ನೀಡಿ, ನಮ್ಮ 40 ವರ್ಷಗಳ ಕಣ್ಣೀರು ಒರೆಸಬೇಕೆಂದು 16ನೇ ವಾರ್ಡ್‌ನ ಹೊಂಬಳನಾಕಾ ಜನತಾ ಕಾಲೋನಿ ನಿವಾಸಿಗಳು ಅತ್ಯಂತ ಕಳಕಳಿಯಿಂದ ವಿನಂತಿಸಿದ್ದಾರೆ.
ನಗರದಾದ್ಯಂತ ಕೃಷ್ಣಗೌಡರು ಕೈಗೊಳ್ಳುತ್ತಿರುವ ಜನಸ್ಪಂದನಾ ಅಭಿಯಾನವು ಮನೆಮಾತಾಗಿದೆ. ಸಚಿವ ಹೆಚ್.ಕೆ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಕೇವಲ ಭರವಸೆಯಾಗಿ ಉಳಿಯದೆ, ಕಾರ್ಯರೂಪಕ್ಕೆ ಬರುತ್ತಿವೆ.
“ಯಾರ ಕೈಗೂ ಸಿಗದ ಅಧಿಕಾರಿಗಳನ್ನು ಚುರುಕುಗೊಳಿಸುವ ಶಕ್ತಿ ಕೃಷ್ಣಗೌಡರಿಗೆ ಮಾತ್ರ ಇದೆ. ಅವರು ನಮ್ಮ ಕಾಲೋನಿಯ ಮಣ್ಣಿನ ಮೇಲೆ ಕಾಲಿಟ್ಟರೆ ಸಾಕು, ನಮ್ಮ ದಶಕಗಳ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ” ಎಂಬ ಅಚಲ ವಿಶ್ವಾಸವನ್ನು ಬಡಾವಣೆಯ ನಿವಾಸಿಗಳು ಹೊಂದಿದ್ದಾರೆ.
*ಬಡಾವಣೆಯ ಹೃದಯವಿದ್ರಾವಕ ಸ್ಥಿತಿ:*
*ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ರಾಜಕಾಲುವೆ:* ಕಳೆದ ಐದಾರು ವರ್ಷಗಳಿಂದ ಅರ್ಧಕ್ಕೆ ನಿಂತಿರುವ ರಾಜಕಾಲುವೆಯಿಂದಾಗಿ ಮಳೆ ಬಂದಾಗಲೆಲ್ಲಾ ಚರಂಡಿಯ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಬಡವರು ಕಷ್ಟಪಟ್ಟು ದುಡಿದು ಸಂಗ್ರಹಿಸಿದ್ದ ಜೋಳದ ಮುದ್ದೆ, ದಿನಸಿ, ಪಾತ್ರೆಗಳು ನೀರುಪಾಲಾಗುತ್ತಿವೆ. ನಗರಸಭೆಯ ನಿರ್ಲಕ್ಷ್ಯದಿಂದಾಗಿ ಬಡವರು ಹಸಿವಿನಿಂದ ಕಣ್ಣೀರು ಹಾಕುವಂತಾಗಿದೆ.
*ಹೆಗಲ ಮೇಲೆ ಗರ್ಭಿಣಿಯ ಸವಾರಿ:* ರಸ್ತೆಗಳು ಎಷ್ಟೊಂದು ಹದಗೆಟ್ಟಿವೆಯೆಂದರೆ ಅಂಬ್ಯುಲೆನ್ಸ್ ಬರಲು ದಾರಿಯಿಲ್ಲ. ಇತ್ತೀಚೆಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಕೆಯ ಪತಿ ಹೆಗಲ ಮೇಲೆ ಹೊತ್ತು ಮುಖ್ಯ ರಸ್ತೆಯವರೆಗೆ ಸಾಗಿಸಬೇಕಾದ ಅಮಾನವೀಯ ಸ್ಥಿತಿ ಇಲ್ಲಿ ಎದುರಾಗಿದೆ.
*ಬೆಂಕಿಯ ಆಹುತಕ್ಕೆ ಬಕೆಟ್ ನೀರೇ ಆಸರೆ:* ಮನೆಯೊಂದಕ್ಕೆ ಬೆಂಕಿ ಬಿದ್ದಾಗ ಅಗ್ನಿಶಾಮಕ ದಳದ ವಾಹನ ಬರಲು ಸಾಧ್ಯವಾಗದೆ, ಸ್ಥಳೀಯರೇ ಬಕೆಟ್ ಹಿಡಿದು ಬೆಂಕಿ ನಂದಿಸಬೇಕಾಯಿತು. 45 ಲಕ್ಷ ರೂ.ಗಳ ಅನುದಾನವಿದ್ದರೂ ಗದಗ-ಬೆಟಗೇರಿ ನಗರಸಭೆಯ ದಕ್ಷ ಅಧಿಕಾರಿಗಳು ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಲಕ್ಷ್ಮಣ ಜೋಗದಂಡಕರ ಸಾಹೇಬರ ಮಾರ್ಗದರ್ಶನ ವಿದ್ದರೂ ಸಹ ಕಾಮಗಾರಿಗಳು ಮಾತ್ರ ಇಂಚೂ ಕದಡುತ್ತಿಲ್ಲ ಈ ಕೆಲಸಕ್ಕೆ ಬ್ರೇಕ್ ಹಾಕುತ್ತಿರುವ ಆ ಅಜ್ಞಾತ ಶಕ್ತಿ ಯಾವುದು..? ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ವ್ಯವಸ್ಥೆಯ ಹಿಂದಿರುವ ಕೈವಾಡ ಯಾರದ್ದು ಎಂದು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ
ಅಧಿಕಾರಿಗಳು ಉತ್ತರ ಕೊಡದೆ ಕಾಮಗಾರಿ ಪ್ರಾರಂಭಿಸದೆ ಮೌನವಾಗಿರುವುದು ಬಡವರ ಜೀವದ ಜೊತೆ ಚೆಲ್ಲಾಟವಾಡಿದಂತಿದೆ.
*ಕೃಷ್ಣಗೌಡ್ರ ಪಾಟೀಲರಿಗೆ ಸವಿನಯ ಪ್ರಾರ್ಥನೆ:*
“ಕೃಷ್ಣಗೌಡರೇ, ನೀವು ಬಂದು ನಮ್ಮ ಈ ನರಕಸದೃಶ ಬದುಕನ್ನು ಒಮ್ಮೆ ಕಣ್ಣಾರೆ ನೋಡಿ. ಅಧಿಕಾರಿಗಳಿಗೆ ಮತ್ತು ಅಜ್ಞಾತಶಕ್ತಿಗೆ ಚುರುಕು ಮುಟ್ಟಿಸಿ, ಅರ್ಧಕ್ಕೆ ನಿಂತಿರುವ ರಾಜಕಾಲುವೆ ಹಾಗೂ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಮಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡಿ” ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ ಕೃಷ್ಣ ಎಚ್. ಹಡಪದ. ಕಾರ್ಯಾಧ್ಯಕ್ಷರಾದ ಪರಶುರಾಮ ಅಣ್ಣಿಗೇರಿ. ಹಾಗೂ ನೂರಾರು ನಿವಾಸಿಗಳು ಈ ಮೂಲಕ ಕಳಕಳಿಯಿಂದ ಆಗ್ರಹಿಸಿದ್ದಾರೆ.

Editor

Leave a comment