ಕರುನಾಡು ಘರ್ಜುನೆ ಸುದ್ದಿ ಗದಗ ಏಪ್ರಿಲ್ 6: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ, ರೋಣ ಮತ್ತು ಮುಂಡರಗಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 2026-27 ನೇ ಸಾಲಿಗೆ 6 ನೇ ತರಗತಿ ದಾಖಲಾತಿ ಪಡೆಯಲು ಪ್ರವೇಶ ಪರೀಕ್ಷೆ ದಿನಾಂಕ 12.04.2026 ರಂದು ಜರುಗಲಿದೆ.
ಅರ್ಜಿ ಸಲ್ಲಿಸಲು ನೋಂದಾಯಿಸಿದ ಪಾಲಕರ/ಪೋಷಕರ ದೂರವಾಣಿ ವಿದ್ಯಾರ್ಥಿಯ ಹೆಸರಿನೊಂದಿಗೆ ಪರೀಕ್ಷಾ ಕೇಂದ್ರದ ಮಾಹಿತಿಯನ್ನು ನಿರ್ದೇಶನಾಲಯ, ಬೆಂಗಳೂರು ರವರಿಂದ ಕಳುಹಿಸಲಾಗಿದೆ. ಸದರಿ ಪರೀಕ್ಷಾ ಪ್ರವೇಶ ಪತ್ರಗಳನ್ನು https://erp.dom.karnataka.gov.in/adm/Admission/StudentHallticket ಪಡೆದುಕೊಳ್ಳಬಹುದಾಗಿದೆ. ತಮಗೆ ನೀಡಿರುವ ಪರೀಕ್ಷಾ ಪ್ರವೇಶ ಪತ್ರಗಳಲ್ಲಿ ಸೂಚಿಸಿರುವ ಪರೀಕ್ಷಾ ಕೇಂದ್ರಕ್ಕೆ ಹಾಜರಿರಲು ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.