ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಎಚ್.ಕೆ. ಪಾಟೀಲರಿಗೆ ಅನ್ವರ ಶಿರಹಟ್ಟಿ ಹಾಗೂ ಕಂಬಾರ ಓಣಿ ಮುಸ್ಲಿಂ ಜಮಾತನಿಂದ ಒತ್ತಾಯ.
ಕರುನಾಡು ಘರ್ಜುನೆ ಸುದ್ದಿ ಗದಗ ೦೮: ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರ ಹುದ್ದೆಯು ನೇಮಕವಾಗದೆ ಉಳಿದಿದ್ದು ಇಲ್ಲಿಯವರೆಗೆ ೧೨ ತಿಂಗಳು ಗÀತಿಸಿದೆೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯು ರಾಜ್ಯ ವಕ್ಫ್ ಮಂಡಳಿ ಮತ್ತು ಸಮುದಾಯದ ನಡುವಿನ ಒಂದು ಸೇತುವೆಯಂತೆ ಇದ್ದು, ವಕ್ಫ್ ಆಸ್ತಿಗಳನ್ನು ಕಾಪಾಡುವುದು, ಆಡಳಿತ ಮತ್ತು ಮೇಲ್ವಿಚಾರಣೆ, ಸರ್ವೇ ಮಾಡಿ ಆಸ್ತಿಗಳ ದಾಖಲೆಗಳನ್ನು ಕ್ರೊಢೀಕರಿಸುವುದು, ಪರಿವೀಕ್ಷಣೆ ಮತ್ತು ರಾಜ್ಯ ಮಂಡಳಿಗೆ ವರದಿ ಸಲ್ಲಿಸುವುದು, ವಕ್ಫ್ ಆಸ್ತಿಗಳ ವ್ಯಾಜ್ಯಗಳಿಗೆ ಸಂಬAಧಿಸಿದ ಕಾನೂನು ಸಹಾಯ ಒದಗಿಸುವುದು, ಮುತವಲ್ಲಿಗಳ ನೇಮಕಾತಿಯಲ್ಲಿ ಆಗುವ ಲೋಪದೋಷಗಳ ಕುರಿತು ರಾಜ್ಯ ಮಂಡಳಿಗೆ ವರದಿ ನೀಡುವುದು, ಗದಗ ಜಿಲ್ಲೆಯಲ್ಲಿ ೨೫೦ ಜಮಾತ್‌ಗಳು ನಡುವೆ ಇರುವ ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನಿಸಿ ಅದರ ಕುರಿತು ರಾಜ್ಯ ಮಂಡಳಿಗೆ ವರದಿ ನೀಡಿ ಸೂಕ್ತವಾದ ಕಾರ್ಯ ನಿಭಾಯಿಸುವುದು ಬಹಳ ಮುಖ್ಯವಾಗಿದೆ. ಇವೆಲ್ಲವುಗಳ ಜವಾಬ್ದಾರಿ ನಿಭಾಯಿಸುವಲ್ಲಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ತುಂಬಾ ಮಹತ್ವದ ಪಾತ್ರ ವಹಿಸುತ್ತಿದ್ದು, ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಆಗದೇ ಗದಗ ಜಿಲ್ಲೆಯ ಸಮುದಾಯದ ಅಭಿವೃದ್ಧಿಯ ಕುಂಠಿತವಾಗಲು ಕಾರಣವಾಗಿದೆ.
ಗದಗ ಜಿಲ್ಲೆಯಲ್ಲಿ ಏಳು ತಾಲೂಕುಗಳು ಇದ್ದು ಅನೇಕ ವಕ್ಫ್ ಆಸ್ತಿಗಳು ಇರುತ್ತವೆ. ಆದರೆ ಸಮಸ್ಯೆ ತುಂಬಾ ಇವೆ. ನೋಂದಣಿಗೊAಡ ಅನೇಕ ಜಮಾತಗಳ ನಡುವೆ ಸಾಕಷ್ಟು ಬಿಕ್ಕಟ್ಟು ನಿವಾರಣೆಯಾಗುತ್ತಿಲ್ಲ, ಖಬರಸ್ಥಾನ, ಮಸೀದಿ, ದರಗಾ ಮತ್ತು ಇನ್ನಿತರ ವಕ್ಫ್ ಆಸ್ತಿಗಳ ಸೂಕ್ತ ದಾಖಲೆಗಳು ಸಂಗ್ರಹಿಸಲು ಮತ್ತು ನಿರ್ವಹಿಸಲು ಆಗುತ್ತಿಲ್ಲ. ಅತೀ ಮಹತ್ವದ ಕಾರ್ಯಗಳ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಸೂಕ್ತವಾದ ಉತ್ತರ ಸಿಗುತ್ತಿಲ್ಲ. ಇತ್ತ ಸೂಕ್ತ ಸಲಹೆ ಮಾರ್ಗದರ್ಶನ ಸಿಗದೇ ಅತ್ತ ಬೆಂಗಳೂರಿಗೆ ಹೋಗಿ ಪರಿಹಾರ ಪಡೆಯಲು ಸಾಧ್ಯವಾಗದೇ ಮುಸ್ಲಿಂ ಸಮುದಾಯದ ಉನ್ನತಿ ಕುಂಠಿತವಾಗುತ್ತಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಮುಸ್ಲಿಂ ಸಮುದಾಯವು ತನ್ನದೇ ಅಸ್ತಿತ್ವವನ್ನು ವಕ್ಫ್ ಆಸ್ತಿಗಳ ಹೊಂದುವ ಮೂಲಕ ಸಾಧ್ಯವಾಗುತ್ತಿದೆ. ಜಮಾತುಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅನುಷ್ಠಾನವಾಗುತ್ತಿಲ್ಲ, ಎಲ್ಲವು ಹಾಳೆಯಲ್ಲಿ ಬರೆಯಲಾಗುತ್ತದೆ ವಿನಃ ನಿಜವಾಗಿ ಯಾವುದು ನಡೆಯುತ್ತಿಲ್ಲ ಎಂದು ಹೇಳಬಹುದು. ಬಹುತೇಕ ಅನಕ್ಷರಸ್ಥರು ಜಮಾತಿನ ಆಡಳಿತ ಮಂಡಳಿ ಸದಸ್ಯರಾಗಿದ್ದು ಕಾನೂನು ಮತ್ತು ಕಾಲಕಾಲಕ್ಕೆ ಹೊರಡಿಸಲಾಗುವ ನಿಯಮಗಳನ್ನು ಅರ್ಥ ಮಾಡಿಕೊಂಡು ಪ್ರಯತ್ನಪಡುವ ಸಾಮರ್ಥ್ಯ ಹೆಚ್ಚಿಸುವ ತರಬೇತಿ ಕಾರ್ಯಕ್ರಮಗಳಂತೂ ಇಲ್ಲವೇ ಇಲ್ಲ.
ಆದ್ದರಿಂದ ಶೀಘ್ರವೇ ಗದಗ ಜಿಲ್ಲಾ ವಕ್ಫ್ ಸಲಹಾ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ಎಚ್.ಕೆ. ಪಾಟೀಲರು ಹಾಗೂ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಡಿ.ಆರ್. ಪಾಟೀಲ ರವರುಗಳು ನಿರ್ದೇಶಿಸಬೇಕೆಂದು ಗದಗ ಜಿಲ್ಲೆಯ ಮುಸ್ಲಿಂ ಜಮಾತಿನ ಗುರು-ಹಿರಿಯರು, ಯುವಕರು ಒತ್ತಾಯಿಸಿದ್ದಾರೆ.
ದಿ. ೦೮/೦೪/೨೦೨೬ ಅನ್ವರ ಶಿರಹಟ್ಟಿ
ಮೊ: ೯೯೮೬೭೦೭೦೮೬