ಕರುನಾಡು ಘರ್ಜನೆ ಸುದ್ದಿ ಹುಬ್ಬಳ್ಳಿ: ಪ್ರವಾಸಕ್ಕೆ ತೆರಳಿದ್ದ ಸ್ನೇಹಿತರ ಗುಂಪಿನ ಮೇಲೆ ಕಾರು ಹರಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ತಡಸ್ ಬಳಿ ನಡೆದಿದೆ.
ದಾವಣಗೆರೆಯಿಂದ ಸುಮಾರು 10 ಮಂದಿ ಸ್ನೇಹಿತರು ಕಾರವಾರದ ದಾಂಡೆಲಿ ಕಡೆಗೆ ಪ್ರವಾಸಕ್ಕೆ ಹೊರಟಿದ್ದರು. ಮಂಗಳವಾರ ರಾತ್ರಿ 2 ಗಂಟೆಗೆ ದಾವಣಗೆರೆಯಿಂದ ಹೊರಟಿದ್ದ ಇವರು, ಬೆಳಗಿನ ಜಾವ 6 ಗಂಟೆ ಸುಮಾರಿಗೆ ತಡಸ್ ಬಳಿ ಚಹಾ ಕುಡಿಯಲು ನಿಂತಿದ್ದರು.
ಈ ವೇಳೆ ಟಿಟಿ ವಾಹಣದ ಸಮೀಪ ನಿಂತಿದ್ದ 7–8 ಜನರ ಮೇಲೆ ಇನೋವಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ 18 ವರ್ಷದ ಅಲಿ ಮಾಹಿನ್ ಎಂಬ ಯುವಕ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಆತ ದಾವಣಗೆರೆಯ ಭಗತ್ ಸಿಂಗ್ ನಗರ ನಿವಾಸಿ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಅಲ್ತಾಫ್ ಹಾಗೂ ಜುನೆದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅಲಿ ಮಾಹಿನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದು, ಶವಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಕುರಿತು ತಡಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ ತಾಲೂಕು ವರದಿಗಾರ:- ಅಬ್ದುಲ್ ರೌಫ್ ಲೋಕಾಪಲ್ಲಿ ಹುಬ್ಬಳ್ಳಿ