ಕರುನಾಡು ಘರ್ಜನೆ ಸುದ್ದಿ ಗದಗ ರೋಣ ೫ : ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಅಬ್ಬಿಗೇರಿ ಕೋಟುಮಚಗಿ ರಸ್ತೆಯಲ್ಲಿ ಅಶೋಕ ಲೈಲ್ಯಾಂಡ್ ಕ್ಯಾಂಟರ್ ವಾಹನ ಸಮೇತ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಶನಿವಾರ ನಡೆದಿದೆ.
ಅಬ್ಬಿಗೇರಿ ಕೋಟುಮಚಗಿ ರಸ್ತೆಯಲ್ಲಿ ಅಬ್ಬಿಗೇರಿ ಗ್ರಾಮದ ಹತ್ತಿರ ರಿನಿವ್ ವಿಂಡ್ ಕಂಪನಿ ಹತ್ತಿರ ಶನಿವಾರ ಬೆಳಿಗ್ಗೆ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿರುವ ೫೦ಕೆಜಿ ತೂಕದ ೧೦೩ ಪ್ಲಾಸ್ಟಿಕ್ ಅಕ್ಕಿ ಚೀಲಗಳು,೫೧.೫೦ ಕ್ವಿಂಟಾಲ್, ಒಂದು ಲಕ್ಷ ಎಪ್ಪತೈದು ಸಾವಿರದ ಒಂದು ನೂರು ರೂ. ಬೆಲೆಯ ಸಾಗಾಟ ಮಾಡುತ್ತಿದ್ದ ಅಕ್ಕಿ ಸಮೇತ ಅಪರಾಧಿ ಶ್ರೀಧರ ತೇಗೂರ ಹಾಗೂ ಶಿವಕುಮಾರ ಹೊಂಬಳ್ಳಿ ಎಂಬುವರನ್ನು ಆಹಾರ ಇಲಾಖೆ ಅಧಿಕಾರಿ ಸುವರ್ಣ ಜಮ್ಮನಕಟ್ಟಿ, ಪ.ಪಂ ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ, ಮಹಾದೇವಪ್ಪ ಮ್ಯಾಗೇರಿ ಹಾಗೂ ಆಹಾರ ಇಲಾಖೆಯ ಸಿಬ್ಬಂದ್ದಿಗಳು ದಾಳಿ ಮಾಡಿ ವ್ಯಕ್ತಿಯನ್ನು ಬಂಧಿಸುವ ಮೂಲಕ ಅಕ್ರಮ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.