ಕರುನಾಡು ಘರ್ಜನೆ ಸುದ್ದಿ:-14.04.2026 ರಂದು ಈಗಿನ ಕಾಲದಲ್ಲಿ ಇಂತಹವರು ಇದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಹೌದು ಹೊಸ ಬಸ್ ನಿಲ್ದಾಣದಲ್ಲಿ ಗದಗ ಘಟಕದ ಕರಾಸ ಪೇದೆರವರಾದ ಶ್ರೀ ಜೆ.ವಿ.ಪಾಟೀಲ ರವರು ಸದರಿ ದಿನದಂದು ಕರ್ತವ್ಯ ವೇಳೆಯಲ್ಲಿ ಸಮಯ 16.00 ಘಂಟೆಗೆ ಲಕ್ಷೇಶ್ವರ ಪ್ಲಾಟ್ ಫಾರಂ ನಲ್ಲಿ ನಿಂತಿರುವ ಬಸ್ಸು ಹಿಂದುಗಡೆ ಬಂಗಾರದ ಬ್ರೆನ್‌ಲೈಟ ಚೈನ್ ಕಟ್ ಆಗಿ ಬಿದ್ದಿದ್ದು, ನಮ್ಮ ಘಟಕದ ಕರಾಸ ಪೇದೆಯವರಿಗೆ ಸಿಕ್ಕಿರುತ್ತದೆ,
ಇದನ್ನು ಮರಳಿ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರವರಿಗೆ ಗದಗ ಘಟಕ ವ್ಯವಸ್ಥಾಪಕರ& ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರ ಸಮ್ಮಖದಲ್ಲಿ ರಾಜೀವ್ ಗಾಂಧಿ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಈ ಸಂದರ್ಭದಲ್ಲಿ ಬಡಾವಣೆ ಪೋಲೀಸ್ ಠಾಣೆಯ PSI ಮಾರುತಿ ಜೋಗದಂಡಕರ್ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗ ಗದಗ ಅಧಿಕಾರಿಗಳು ಇದ್ದರು.