ಕರುನಾಡು ಘರ್ಜನೆ ಸುದ್ದಿ : ಧ್ವನಿ ಎತ್ತುವವುದೆ ತಪ್ಪಾ..? ಇದನ್ನು ಗದಗ ಜಿಲ್ಲೆಯ ಶಾಸಕರು ಹಾಗೂ ಸಚಿವರು ನೋಡಲೇಬೇಕು “ಗದಗದ ವಾರ್ಡ್ ನಂಬರ್ 16ರ ಹೊಂಬಳ ನಾಕಾ ಜನತಾ ಕಾಲೋನಿಯ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸಂಘವು ಕಳೆದ 40 ವರ್ಷಗಳ ಬೇಡಿಕೆಯಾದ ಒಳಚರಂಡಿ ವ್ಯವಸ್ಥೆ ಹಾಗೂ ಸುಸಜ್ಜಿತ ರಸ್ತೆಗಾಗಿ ನಿರಂತರವಾಗಿ ಹೋರಾಡುತ್ತಿದೆ. ರಸ್ತೆ ಮಧ್ಯದ ಗಿಡಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕೆಂಬುದು ನಮ್ಮ ನ್ಯಾಯಯುತ ಬೇಡಿಕೆ. ಆದರೆ, ಈ ಸಮಸ್ಯೆಗಳನ್ನು ಎತ್ತಿ ಹಿಡಿದಿದ್ದಕ್ಕೆ 16ನೇ ವಾರ್ಡಿನ ನಗರಸಭೆ ಸದಸ್ಯರು ನಮ್ಮ ಮನೆ ಹತ್ತಿರ ಬಂದು ನನ್ನ ತಾಯಿಯವರಿಗೆ ಮಾತನಾಡಿ, ‘ನಿನ್ನ ಮಗನನ್ನು ಒದ್ದು ಒಳಗೆ ಹಾಕಿಸುತ್ತೇನೆ’ ಎಂದು ಬೆದರಿಕೆ ಹಾಕಿರುವುದು ಖಂಡನೀಯ.
ಜನಪ್ರತಿನಿಧಿಗಳು ಜನರ ಧ್ವನಿಗೆ ಬೆಲೆ ಕೊಡಬೇಕೇ ಹೊರತು, ಈ ರೀತಿ ಧಮ್ಕಿ ಹಾಕುವುದಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವವನಲ್ಲ, ನನ್ನ ಹೋರಾಟ ನಿರಂತರ.
ಈಗಾಗಲೇ ಸಚಿವರ ಸುಪುತ್ರರಾದ ಶ್ರೀ ಕೃಷ್ಣಗೌಡ ಪಾಟೀಲ್ ಅವರು ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ನಮಗೆ ವೈಯಕ್ತಿಕ ಪ್ರತಿಷ್ಠೆ ಮುಖ್ಯವಲ್ಲ, ಕಾಲೋನಿಯ ಅಭಿವೃದ್ಧಿ ಮುಖ್ಯ. ಬನ್ನಿ, ಬೆದರಿಸುವ ಬದಲು ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ, ನಾವೆಲ್ಲರೂ ಸೇರಿ ಕಾಲೋನಿಯನ್ನು ಮಾದರಿಯನ್ನಾಗಿ ಮಾಡೋಣ.”
– ಕೃಷ್ಣಾ ಎಚ್. ಹಡಪದ
*ಅಧ್ಯಕ್ಷರು, ಹೊಂಬಳ ನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘ, ಗದಗ.
ಗದಗ | ಹೋರಾಟ ಅಭಿವೃದ್ಧಿಗಾಗಿಯೇ ಹೊರತು ವೈಯಕ್ತಿಕ ದ್ವೇಷಕ್ಕಲ್ಲ: ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ – ಕೃಷ್ಣಾ ಎಚ್ ಹಡಪದ
ಕರುನಾಡು ಘರ್ಜನೆ ಸುದ್ದಿ : ಧ್ವನಿ ಎತ್ತುವವುದೆ ತಪ್ಪಾ..? ಇದನ್ನು ಗದಗ ಜಿಲ್ಲೆಯ ಶಾಸಕರು ಹಾಗೂ ಸಚಿವರು ನೋಡಲೇಬೇಕು “ಗದಗದ ವಾರ್ಡ್ ನಂಬರ್ 16ರ ಹೊಂಬಳ ನಾಕಾ ಜನತಾ ಕಾಲೋನಿಯ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸಂಘವು ಕಳೆದ 40 ವರ್ಷಗಳ ಬೇಡಿಕೆಯಾದ…