ಕರುನಾಡು ಘರ್ಜನೆ ಸುದ್ದಿ ಗದಗ 25: ಬೆಂಗಳೂರಿನ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟದ ಒಳಮೀಸಲಾತಿ ಸಭೆ ದಿನಾಂಕ: 24-04-2026 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧ್ಯಕ್ಷತೆಯಲ್ಲಿ ಜರುಗಿತು. ಶೇ. 15 ರಷ್ಟು ಒಳಮೀಸಲಾತಿ ಮೀಸಲಾತಿ ವರ್ಗೀಕರಣ ಎಡಗೈ 5.25%, ಬಲಗೈ 5.25%, ಸ್ಪರ್ಶ ಜಾತಿಗಳಾದ ಲಂಬಾಣಿ, ಭೋವಿ, ಕೊರಮ, ಕೊರಚ ಜೊತೆಗೆ ಸೇರಿಸಿ ಅಲೆಮಾರಿ 59 ಪರಿಶಿಷ್ಟ ಜಾತಿಗಳಿಗೆ ಒಟ್ಟು 63 ಜಾತಿ ಸೇರಿ 4.5% ಸುಮಾರು ನಾಲ್ಕು ದಶಕಗಳಿಂದ ಕಂಟಕವಾಗಿಯೇ ಉಳಿದಿದ್ದ ಮತ್ತು ಪ್ರಬಲ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿದ್ದ ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಗೊಂದಲಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಡಾ. ಬಿ. ಆರ್. ಅಂಬೇಡ್ಕರ ಸಂವಿಧಾನದ ಆಶಯಗಳಿಗೆ ಹಾಗೂ ಸುಪ್ರೀಂ ಕೋರ್ಟದ ಆದೇಶಗಳ ವಿರುದ್ಧವಾದ ನಿರ್ಣಯವನ್ನು ಕೈಗೊಂಡಿದೆ ಎಂದು ರಾಜ್ಯದ ಅಲೆಮಾರಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ. ಬಿ. ಆರ್. ಅಂಬೇಡ್ಕರ ಸಂವಿಧಾನ ಆಶಯದಂತೆ ಪರಿಶಿಷ್ಟ ಜಾತಿಯಲ್ಲಿ ಕಟ್ಟ ಕಡೆಯ ಜನಾಂಗದ ಅಸ್ಪಶ್ಯ ಅಲೆಮಾರಿ ಜನಾಂಗ ಇದುವರೆಗೂ ಅವರಿಗೆ ಯಾವುದೇ ಮೀಸಲಾತಿಯ ಸೌಲಭ್ಯ ಸಿಕ್ಕಿರುವುದಿಲ್ಲವೋ ಅಂತಹವರಿಗೆ ಅವಕಾಶ ಕಲ್ಪಿಸುವುದು ಭಾರತ ಸಂವಿಧಾನದ ಮೂಲ ಉದ್ದೇಶವಾಗಿದೆ. ಅಲೆಮಾರಿ ಜನಾಂಗದವರು ಇದೂವರಿಗೂ ರಾಜಕೀಯ ಪ್ರಾತಿನಿಧ್ಯ ಇರುವುದಿಲ್ಲ. ಸರ್ಕಾರಿ ಉದ್ಯೋಗ ಎನ್ನುವುದು ಮರೀಚಿಕೆ ಆಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಕನಿಷ್ಠವಾಗಿ ಭಿಕ್ಷಾಟನೆ ಮಾಡಿ, ಜೋಪಡಿ, ಗುಡಿಸಲು, ಟೆಂಟಗಳಲ್ಲಿ ವಾಸಿಸುವ ಸ್ವತಂತ್ರ ಭಾರತದ 79 ವರ್ಷಗಳ ಕಳೆದರೂ ಇವರ ಜೀವನ ಮಟ್ಟ ಸುಧಾರಣೆ ಆಗಿರುವುದಿಲ್ಲ. ಅಸ್ಪಶ್ಯರು ಅವರು ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಶೋಷಣೆ ಒಳಗಾಗಿದ್ದು ಆದರೆ ಈ ಅಸ್ಪಶ್ಯ ಅಲೆಮಾರಿ ಸಮುದಾಯದವರು ಊರಿನ ಹೊರಗಡೆ ಬೀದಿ, ಸ್ಮಶಾನ, ಗಟಾರು, ಫುಟಬಾತ್ಗಳಲ್ಲಿ ಮಳೆ, ಗಾಳಿ ಲೆಕ್ಕಿಸದೆ ಶೋಷಣೆಗೊಳಪಟ್ಟ ದಿನನಿತ್ಯ ಬದುಕು ಕನಿಷ್ಠ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತವರಿಗೆ ಸಂವಿಧಾನದ ಆಶಯಗಳ ಪ್ರಕಾರ ಒಳಮೀಸಲಾತಿಯಲ್ಲಿ ಪ್ರತ್ಯೇಕ 1% ಎ ಗುಂಪಿನಲ್ಲಿ ಹಿಂದುಳಿದಿರುವಿಕೆ ಆಧಾರದ ಮೇಲೆ ನ್ಯಾ. ನಾಗಮೋಹನದಾಸ ವರದಿ ಮತ್ತು ವೈಜ್ಞಾನಿಕ ಸಮೀಕ್ಷೆಯಲ್ಲಿ ಹಲವಾರು ಸಮೀಕ್ಷೆಯಲ್ಲಿ ಅಲೆಮಾರಿಗಳಿಗೆ ಪತ್ಯೇಕ ಆದ್ಯತೆ ನೀಡಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ಷ್ಮವಾದ ವಿಚಾರವನ್ನು ಪುನರಪರಿಶೀಲಿಸಿ ಅಲೆಮಾರಿ ಜನಾಂಗಕ್ಕೆ ನ್ಯಾಯ ಕೊಡಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ಮುಂದುವರೆಯುವುದ ಮತ್ತು ಬೀದಿ ಹೋರಾಟ,ಧರಣಿ, ಸತ್ಯಾಗ್ರಹ, ನಿರಂತರ ನ್ಯಾಯ ಸಿಗುವವರೆಗೂ ಸುಪ್ರೀಂ ಕೋರ್ಟನಲ್ಲಿ ಕಾನೂನು ಹೋರಾಟ ಮಾಡಲಾಗುವುದು.
ಅಲೆಮಾರಿ ಸಮುದಾಯಗಳಲ್ಲಿ ಇದುವರೆಗೂ ಒಬ್ಬ ಗ್ರಾಮ ಪಂಚಾಯತ ಸದಸ್ಯರು ಇರುವುದಿಲ್ಲ. ಇದುವರೆಗೂ ಮೀಸಲಾತಿ ಪಡೆಯದಿರುವ ಜನಾಂಗ ಆಲೆಮಾರಿ ಜನಾಂಗ ಇರುವುವಾಗ ಈ ಅಲೆಮಾರಿ ಜನಾಂಗವನ್ನು ಸ್ಪರ್ಶ ಸಮುದಾಯಗಳಲ್ಲಿ ಸೇರಿಸಿದ್ದು ತಪ್ಪು ಎಂದು ಅಲೆಮಾರಿ ಸಮುದಾಯದವರು ತೀವ್ರವಾಗಿ ಖಂಡಿಸಿದ್ದಾರೆ. ಒಳಮೀಸಲಾತಿ ಮೀಸಲಾತಿ ಉದ್ದೇಶ ಇದುವರೆಗೂ ಸುಪ್ರೀಂಕೋರ್ಟನ
ಆದೇಶದ ಪ್ರಕಾರ ಮೀಸಲಾತಿಯ ಲಾಭವನ್ನು ಪಡೆಯದೇ ಇರುವ ವಂಚಿತರಾಗಿರುವವರು ಹಿಂದುಳಿದಿರುವಿಕೆಯ ಆಧಾರದ ಮೇಲೆ ಪ್ರತ್ಯೇಕ ಒಳಮೀಸಲಾತಿ ನೀಡಬೇಕಾಗಿತ್ತು.
ಈಗ ರಾಜ್ಯ ಸರ್ಕಾರ ಧ್ವನಿ ಇಲ್ಲದ ಅಸ್ಪಶ್ಯ ಅಲೆಮಾರಿ ಜನಾಂಗವನ್ನು ಪ್ರಸ್ತುತ ಹೊಸ ಒಳಮೀಸಲಾತಿಯಿಂದ ಇದುವರೆಗೂ ಮೀಸಲಾತಿ ವಂಚಿತರಾಗಿದ್ದ ಅವರಿಗೆ ಇನ್ನೂ ಮೀಸಲಾತಿಯಿಂದ ಸೌಲಭ್ಯದಿಂದ ಬಲಿಷ್ಠ ಸಮುದಾಯಗಳ ಜೊತೆ ಸೇರಿಸಿ ಮೀಸಲಾತಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿದೆ ಎಂದು ಆಲೆಮಾರಿಗಳು ಈ ರಾಜಕೀಯ ನಿರ್ಣಯ ವಿರುದ್ಧ ಆಕ್ರೋಶವನ್ನು ರಾಜ್ಯಾದ್ಯಂತ ವ್ಯಕ್ತಪಡಿಸಿದ್ದಾರೆ. ಬರುವ ದಿನಮಾನಗಳಲ್ಲಿ ಅಲೆಮಾರಿಗಳ ಬದುಕು ಅತ್ಯಂತ ದುರ್ಬಲ ಮತ್ತು ಚಿಂತಾಜನಕ ಸ್ಥಿತಿಗೆ ಬರುವಂತಾಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ವಿರುದ್ಧ ಕಾನೂನು ಹೋರಾಟ ಮತ್ತು ಬೀದಿ ಹೋರಾಟ, ನ್ಯಾಯ ಸಿಗುವವರೆಗೆ ಹೋರಾಟವನ್ನು ಮಾಡಲು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ ಆಶಯಗಳಿಗೆ ಧಿಕ್ಕರಿಸಿ ಭಾರತ ಸಂವಿಧಾನದಲ್ಲಿ ಯಾರಿಗೆ ಅವಕಾಶದಿಂದ ವಂಚಿತರಾಗಿದ್ದರೋ ಡಾ. ಬಿ. ಆರ್. ಅಂಬೇಡ್ಕರವರ ಚಿಂತನೆಯಾಗಿದ್ದು ಯಾರಿಗೆ ಅವಕಾಶ ಸಿಕ್ಕಿರುವುದಿಲ್ಲ ಅಂತವರಿಗೆ ಸಂವಿಧಾನದ ಮೂಲಕ ನ್ಯಾಯ ಕೊಡಲು ಸಂವಿಧಾನದಲ್ಲಿ ಎಲ್ಲ ಅವಕಾಶವಿದ್ದರೂ ರಾಜ್ಯ ಸರ್ಕಾರ ರಾಜಕೀಯ ನಿರ್ಣಯ ತೆಗೆದುಕೊಂಡು ಪರಿಶಿಷ್ಟ ಜಾತಿಯ ಅಸ್ಪಶ್ಯ ಅಲೆಮಾರಿಗಳಿಗೆ ಅನ್ಯಾಯ ಮಾಡಲಾಗಿದೆ.
ನ್ಯಾಯಾಲಯದಲ್ಲಿ ಪ್ರತ್ಯೇಕ 1% ಎ ಗುಂಪು ಒಳಮೀಸಲಾತಿ ಸಿಗುವವರೆಗೂ ಅಲೆಮಾರಿ ಸಮುದಾಯಗಳ ಹೋರಾಟ ಮುಂದುವರೆಯಲಿದೆ ಸಂವಿಧಾನದ ಮುಂದೆ ತಲೆಬಾಗುತ್ತೇವೆ. ಸಾಮಾಜಿಕ ಅನ್ಯಾಯಕೊರರ ಮುಂದೆ ಸೋಲು ಒಪ್ಪಿಕೊಳ್ಳುವುದಿಲ್ಲ. ಅಲೆಮಾರಿಗಳಿಗೆ ಮಾಡಿದ ವಂಚನೆಯನ್ನು ಚರಿತ್ರೆ ಎಲ್ಲರ ಮುಂದೆ ತೆರೆದಿಡಲಿದೆ. ಅನಾಥ ಅಲೆಮಾರಿಗಳಿಗೆ ರಾಜ್ಯ ಸರ್ಕಾರ ಮಾಡಿದ ಮೋಸದ ಕಾರಣಕ್ಕಾಗಿ ನಿಮ್ಮ ಬಾಯಲ್ಲಿ ಅಂಬೇಡ್ಕರ, ಬಸವಣ್ಣ, ಲೋಹಿಯಾರಂತಹ ಮಹಾನುಭಾವರ ನಾಮಸ್ಮರಣೆ ಕೂಡದು, ಅಲೆಮಾರಿಗಳು ಭಿಕ್ಷೆ ಬೇಡಿಯಾದರೂ ನ್ಯಾಯಾಲಯದಲ್ಲಿ ಹೋರಾಟವನ್ನು ಮುಂದುವರೆಸುತ್ತೇವೆ ಅಲೆಮಾರಿಗಳ ಹಿರಿಯ ಚಿಂತಕರು, ಸಾಹಿತಿಗಳು, ಪ್ರಗತಿಪರರು, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಹೋರಾಟದ ಬಗ್ಗೆ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರ ವಿರುದ್ಧ ನ್ಯಾಯಾಂಗ ಹೋರಾಟ ಹಾಗೂ ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮತ್ತು ಪತ್ರಿಕಾ ಪ್ರಕಟಣೆಯ ಮೂಲಕ ಅಲೆಮಾರಿ ಜನಾಂಗದವರಿಗೆ ಅನ್ಯಾಯದ ವಿರುದ್ಧ ಕಾನೂನು ಹೋರಾಟ, ಬೀದಿ ಹೋರಾಟ, ಬೆಂಗಳೂರಿನ ಪ್ರೀಂಡ ಪಾರ್ಕನಲ್ಲಿ ನ್ಯಾಯ ಸಿಗುವವರೆಗೂ ನಿರಂತರ ಹೋರಾಟಗಳು ನಡೆಯುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಅಲೆಮಾರಿ ಜನಾಂಗದ ಹಿಂದುಳಿವಿಕೆ ನೋಡಿ ನ್ಯಾ. ನಾಗಮೋಹನದಾಸ ವರದಿ ಪ್ರಕಾರ ಪ್ರತ್ಯೇಕ 1% ‘ಎ’ ಗಂಪು ಕೊಡಲೇಬೇಕೆಂದು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಆಲೆಮಾರಿಗಳು ಹಕ್ಕೋತ್ತಾಯವಾಗಿದೆ ಎಂದು ದುರಗೇಶ ವಿಭೂತಿ ರಾಜ್ಯ ಸಂಚಾಲಕರು ಕರ್ನಾಟಕ ಅಸ್ಪಶ್ಯ ಆಲೆಮಾರಿ ಸಮುದಾಯಗಳ ಮಹಾಒಕ್ಕೂಟ ಬೆಂಗಳೂರು ಹಾಗೂ ಅಧ್ಯಕ್ಷರು ಅಲೆಮಾರಿ ಬುಡಕಟ್ಟು ಮಹಾಸಭಾ ಗದಗ ಜಿಲ್ಲಾ ಘಟಕ ಪ್ರತಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.