Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

“ಶಿಲ್ಪಕಲೆಯ ಸಾಧಕನಿಗೆ ಸನ್ಮಾನ; ಶ್ರಮಿಕ ವರ್ಗಕ್ಕೆ ನ್ಯಾಯಕ್ಕಾಗಿ ಮೊಳಗಿತು ಗದಗ ಜಿಲ್ಲಾ ಸವಿತಾ ಸಮಾಜದ ಧ್ವನಿ

ಕರುನಾಡು ಘರ್ಜನೆ ಸುದ್ದಿ ಗದಗ 01: “ಸವಿತಾ ಸಮಾಜದ ಕುಲಕಸುಬಾದ ಕ್ಷೌರಿಕ ವೃತ್ತಿಯು ಕೇವಲ ಶ್ರಮವಲ್ಲ, ಅದು ಸಮಾಜಕ್ಕೆ ಸೌಂದರ್ಯ ನೀಡುವ ಪವಿತ್ರ ಕಾಯಕ. ಇಂತಹ ವೃತ್ತಿಯೊಂದಿಗೆ ಶಿಲ್ಪಕಲೆಯಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಜಯರಾಮ್ ಭದ್ರಾವತಿ ಅವರಂತಹ ಸಾಧಕರು ನಮ್ಮ…

ಕರುನಾಡು ಘರ್ಜನೆ ಸುದ್ದಿ ಗದಗ 01: “ಸವಿತಾ ಸಮಾಜದ ಕುಲಕಸುಬಾದ ಕ್ಷೌರಿಕ ವೃತ್ತಿಯು ಕೇವಲ ಶ್ರಮವಲ್ಲ, ಅದು ಸಮಾಜಕ್ಕೆ ಸೌಂದರ್ಯ ನೀಡುವ ಪವಿತ್ರ ಕಾಯಕ. ಇಂತಹ ವೃತ್ತಿಯೊಂದಿಗೆ ಶಿಲ್ಪಕಲೆಯಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಜಯರಾಮ್ ಭದ್ರಾವತಿ ಅವರಂತಹ ಸಾಧಕರು ನಮ್ಮ ಸಮಾಜದ ಆಸ್ತಿ” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಶ್ಲಾಘಿಸಿದರು.
ಇಲ್ಲಿನ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪ ಕಲಾವಿದ ಜಯರಾಮ್ ಭದ್ರಾವತಿ ಅವರಿಗೆ ಸನ್ಮಾನ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ವಿಮೆ, ಪಿಂಚಣಿ, ವೈದ್ಯಕೀಯ ಸೌಲಭ್ಯ ಹಾಗೂ ಮಕ್ಕಳ ಶಿಕ್ಷಣದ ಸ್ಕಾಲರ್‌ಶಿಪ್‌ಗಳನ್ನು ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜ ಬಾಂಧವರಿಗೂ ವಿಸ್ತರಿಸಬೇಕು. ಎಂದರಲ್ಲದೆ ಕ್ಷೌರಿಕ ಕುಟುಂಬಗಳನ್ನು ಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆಗೊಳಿಸಿ ‘ಕಾಯಕ ಕಾರ್ಮಿಕ’ ಭದ್ರತೆ ಒದಗಿಸಬೇಕು” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಕಾರ್ಮಿಕ ಇಲಾಖೆಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ, “ನಮ್ಮ ಸಮಾಜದ ಇತಿಹಾಸವು ಕಲೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಕ್ಷೌರಿಕ ವೃತ್ತಿಯ ಸೂಕ್ಷ್ಮತೆ ಮತ್ತು ಶಿಲ್ಪಕಲೆಯ ಭವ್ಯತೆ ನಮ್ಮಲ್ಲಿ ರಕ್ತಗತವಾಗಿದೆ. ಆದರೆ ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಮ್ಮ ವೃತ್ತಿ ಬಾಂಧವರು ಆರ್ಥಿಕವಾಗಿ ನಲುಗುತ್ತಿದ್ದಾರೆ. ಸರ್ಕಾರವು ನಮ್ಮ ಕಲೆಗೆ ಸೂಕ್ತ ಮಾರುಕಟ್ಟೆ ಮತ್ತು ಪ್ರೋತ್ಸಾಹ ನೀಡಿ ಈ ಪವಿತ್ರ ವೃತ್ತಿಯನ್ನು ಜೀವಂತವಾಗಿರಿಸಬೇಕು” ಎಂದು ಒತ್ತಾಯಿಸಿದರು.
ಮತ್ತೊಬ್ಬ ಹಿರಿಯರಾದ ವೆಂಕಟೇಶ ದಾವಣಗೆರೆ ಅವರು ಮಾತನಾಡಿ, “ಜಯರಾಮ್ ಭದ್ರಾವತಿ ಅವರು 1 ಅಡಿಯಿಂದ ಹಿಡಿದು 65 ಅಡಿ ಎತ್ತರದ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ಶಿಲ್ಪಕಲೆಯಲ್ಲಿ ಸವಿತಾ ಸಮಾಜದ ಕೀರ್ತಿಯನ್ನು ವಿಶ್ವಮಟ್ಟಕ್ಕೇರಿಸಿದ್ದಾರೆ. ಇಂತಹ ಕಲಾವಿದರ ಶ್ರಮಕ್ಕೆ ಬೆಲೆ ಸಿಗಬೇಕು. ಸಮಾಜದ ಯುವಪೀಳಿಗೆ ವೃತ್ತಿ ಕೌಶಲದೊಂದಿಗೆ ಉನ್ನತ ಶಿಕ್ಷಣ ಪಡೆದು ಇತಿಹಾಸದ ಹಾದಿಯಲ್ಲಿ ಮುನ್ನಡೆಯಬೇಕು” ಎಂದು ಕರೆ ನೀಡಿದರು.
ಸನ್ಮಾನಿತ ಶಿಲ್ಪ ಕಲಾವಿದ ಜಯರಾಮ್ ಭದ್ರಾವತಿ ಅವರು ತಮ್ಮ ಅನಿಸಿಕೆ ಹಂಚಿಕೊಂಡು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ರವಿ ರಾಂಪೂರ, ಸಾಗರ ಹಡಪದ, ವಿನಾಯಕ ರಾಯಚೂರು, ಸಿರಿ ರಾಂಪೂರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಮಾಜದ ಬಾಂಧವರು ಉಪಸ್ಥಿತರಿದ್ದರು.

*ಬಾಕ್ಸ್ ಹೇಳಿಕೆ*
*”ಕ್ಷೌರಿಕರಿಗೂ ಸಿಗಲಿ ‘ಕಾರ್ಮಿಕ ಭಾಗ್ಯ’ದ ಸೌಲಭ್ಯ”*
“ಕಟ್ಟಡ ಕಾರ್ಮಿಕರಂತೆ ಕ್ಷೌರಿಕ ವೃತ್ತಿ ಮಾಡುವವರೂ ಕೂಡ ಹಗಲಿರುಳು ದೈಹಿಕ ಶ್ರಮ ಪಡುವ ನೈಜ ಶ್ರಮಿಕರು. ಆದರೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಿರುವುದು ವಿಷಾದನೀಯ. ಸರ್ಕಾರವು ಕೂಡಲೇ ಕ್ಷೌರಿಕ ಬಾಂಧವರನ್ನು ಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕ ಇಲಾಖೆಯ ಮೂಲಕ ದೊರೆಯುವ ಪಿಂಚಣಿ, ವಿಮೆ, ವೈದ್ಯಕೀಯ ನೆರವು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು. ಕೇಶ ವಿನ್ಯಾಸಕರ ಬದುಕು ಕೇವಲ ಅಂಗಡಿಗೆ ಸೀಮಿತವಾಗದೆ, ಅವರ ಭವಿಷ್ಯಕ್ಕೆ ಸರ್ಕಾರದ ಭದ್ರತೆಯ ಅವಶ್ಯಕತೆ ಇದೆ.”ವರದಿ : – ಕೃಷ್ಣಾ ಎಚ್. ಹಡಪದ ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಸವಿತಾ ಸಮಾಜ, ಕೃಷ್ಣಾ ಎಚ್ ಹಡಪದ
9845650612

Editor

Leave a comment