ಕರುನಾಡು ಘರ್ಜುನೆ ಸುದ್ದಿ ಗದಗ: ಇಂದು ರೋಣ ನಗರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯ ಆಚರಿಸಲಾಯಿತು ರೋಣ ತಾಲೂಕ ಗೌಂಡಿ ಹಾಗೂ ಬಾರ್ ಬಿಲ್ಡಿಂಗ್ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ದಿನಾಂಕ 1/5/2026 ರಂದು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲ್ಲಾಗಿತ್ತು ಈ ಸಭೆಯಲ್ಲಿ ಉದ್ಘಟಕ ರಾಗಿ ಗೌರವಾನ್ವಿತ ಶ್ರೀ ಹುಲುಗಪ್ಪ ಡಿ. ಪ್ರಧಾನ ದಿವಾಣಿ ನ್ಯಾಯಾಧೀಶರು ಹಾಗೂ ಜೆ ಎಂ ಎಫ್ ಸಿ. ರೋಣ ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವೆಗಳ ಸಮಿತಿ ರೋಣ ಇವರು ಉದ್ಘಾಟನೆ ಮೂಲಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ಹಾಗೂ ಈ ಸಭೆಗೆ ಅಧ್ಯಕ್ಷರಾಗಿ ಶ್ರೀ ಜಿ ಜಿ ಮತ್ತಿ ಕಟ್ಟಿ ಅಧ್ಯಕ್ಷರು ವಕೀಲರ ಸಂಘ ರೋಣ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀಮತಿ ಶ್ರೀ ಎಮ್ಎಚ್ ಮುಲ್ಲಾ ಕಾರ್ಯದರ್ಶಿಗಳು ವಕೀಲರ ಸಂಘ ರೋಣ ಶ್ರೀಮತಿ ಗೀತಾ ಆಲೂರ ಸಮಾಜ ಕಲ್ಯಾಣ ಇಲಾಖೆ ರೋಣ ಶ್ರೀ ವೀರಪ್ಪ ಚವಡಿ ಪಿ ಎಸ್ ಐ ರೋಣ ಶ್ರೀ ಈಶ್ವರ ಕುರಿ ಬಿ ಆರ್ ಸಿ ರೋಣ ಶ್ರೀ ಮೊಹಮ್ಮದ್ ಮುಸ್ತಫಾ ಮೈನುದ್ದೀನ್ ಕಾರ್ಮಿಕರ ನಿರೀಕ್ಷಕರು ರೋಣ ಹಾಗೂ ಗೌರವ ಉಪನ್ಯಾಸಕರು ಶ್ರೀ ಎಲ್ ಎನ್ ಬಾಣದ ವಕೀಲರು ರೋಣ ಹಾಗೂ ಈ ಸಭೆಯಲ್ಲಿ ಮಾತನಾಡಿ ಕಾರ್ಮಿಕರ ಪಿಂಚಣಿ ವಯಸ್ಸು 60 ಇದ್ದು ಹಾಗೂ ಮುಂಬರುವ ದಿನಗಳಲ್ಲಿ ಕಾರ್ಮಿಕರ ಪಿಂಚಣಿ ವಯಸ್ಸನ್ನು 55ಕ್ಕೆ ತಿಳಿಸಲಾಗುವುದು ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಾಗೂ ಕಾರ್ಮಿಕರ ಇಲಾಖೆ ವತಿಯಿಂದ ಬರುವಂತ ಎಲ್ಲಾ ಸೌಕರ್ಯಗಳನ್ನು ಕಾರ್ಮಿಕರಿಗೆ ಮುಟ್ಟಲಿ ಎಂದು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಈ ಸಭೆಯಲ್ಲಿ ಭಾಗವಹಿಸಿದಂತ ಎಂಎಂ ಸಂಗಮ್ ಹಾಗೂ ಇಮಾಮ್ ಬದಾಮಿ ಹಾಗೂ ಎಲ್ಲಾ ಕಾರ್ಮಿಕರ ಸಂಘದವರ ಭಾಗವಹಿಸಿದ್ದರು.