ಕರುನಾಡು ಘರ್ಜನೆ ಸುದ್ದಿ ಗದಗ ಮೇ 05: 2026-27 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಹೊಸದಾಗಿ ಮಂಜೂರಾಗಿರುವ ಮಹಿಳಾ ಪದವಿ ಪೂರ್ವ ಕಾಲೇಜು, ಗದಗ ಇಲ್ಲಿ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲೀಷ, ಹಿಂದಿ ಮತ್ತು ಉರ್ದು, ವಿಜ್ಞಾನ ವಿಭಾಗಕ್ಕೆ (ಭೌತಶಾಸ್ತç, ರಸಾಯನಶಾಸ್ತç, ಗಣಿತ ಹಾಗೂ ಜೀವಶಾಸ್ತç) ವಾಣಿಜ್ಯ ವಿಭಾಗಕ್ಕೆ (ಕಂಪ್ಯೂಟರ್ ವಿಜ್ಞಾನ, ಅರ್ಥಶಾಸ್ತç, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತç) ಕಲಾ ವಿಭಾಗಕ್ಕೆ (ಇತಿಹಾಸ, ಅರ್ಥಶಾಸ್ತç, ರಾಜ್ಯಶಾಸ್ತç ಮತ್ತು ಸಮಾಜಶಾಸ್ತç) ವಿಷಯಗಳನ್ನು ಭೋಧಿಸಲು ಅರ್ಹ ಅತಿಥಿ ಉಪನ್ಯಾಸಕರು ಅವಶ್ಯವಿರುತ್ತಾರೆ.
ಆದ್ದರಿಂದ ಅರ್ಹ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಮೇ 15 ರೊಳಗಾಗಿ ತಮ್ಮ ಶೈಕ್ಷಣಿಕ ದಾಖಲಾತಿಗಳನ್ನು ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ ಭವನ, ಜಿಲ್ಲಾ ನ್ಯಾಯಾಲಯದ ಎದುರುಗಡೆ, ಹುಬ್ಬಳ್ಳಿ ರೋಡ್, ಗದಗ ಕಛೇರಿಗೆ ಖುದ್ದು ಭೇಟಿ ನೀಡಿ ಅರ್ಜಿ ಸಲ್ಲಿಸಲು ಅಲ್ಪಸಂಖ್ಯಾAತರ ಕಲ್ಯಾಣ ಇಲಾಖೆಯ ಅಧಿಕಾರಿ ಅಮಿತ ಬಿದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.