ಕರುನಾಡು ಘರ್ಜನೆ ಸುದ್ದಿ ಹೈದರಾಬಾದ್: ಅಬ್ಬಾ ಇಂತಹಾ ಪೋಲೀಸರು ಇರುತ್ತಾರ..? ಒಂಟಿ ಮಹಿಳೆಯರಿಗೆ ತಡರಾತ್ರಿ ಕಿರುಕುಳವನ್ನು ತಡೆಯುವ ಉದ್ದೇಶದಿಂದ ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿದ, ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಸಿಪಿ ಅವರು ಮಧ್ಯ ರಾತ್ರಿ ದಿಲ್‌ಸುಖ್‌ನಗರದ ಬೀದಿಗಳಲ್ಲಿ ಸಾಮಾನ್ಯ ಮಹಿಳೆಯಂತೆ ಬಸ್ ಗಾಗಿ ಕಾಯುತ್ತ ನಿಂತಿದ್ದು, ಈ ವೇಳೆ 40ಕ್ಕೂ ಹೆಚ್ಚು ಕಾಮುಕರಿಂದ ಕಿರುಕುಳ ಎದುರಿಸಿದ್ದಾರೆ.
ಮಲ್ಕಾಜ್‌ಗಿರಿ ಕಮಿಷನರೇಟ್‌ಗೆ ಮೊದಲ ಮಹಿಳಾ ಆಯುಕ್ತೆಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸುಮತಿ ಅವರು ರೋಡ್ ರೋಮಿಯೋಗಳಿಗೆ ಶಾಕ್ ಟ್ರೀಟ್ಮೆಂಟ್ ನೀಡಲು ನಿರ್ಧರಿಸಿದ್ದರು.
ಅದರಂತೆ ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 3.30 ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಸಿಪಿ ಸುಮತಿ ಅವರು ಸಾಮಾನ್ಯ ಮಹಿಳೆಯಂತೆ ಸರಳ ಉಡುಪಿನಲ್ಲಿ ರಸ್ತೆಬದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದರು. ಕೆಲವೇ ನಿಮಿಷಗಳಲ್ಲಿ, ಅವರನ್ನು ಸುತ್ತುವರೆದ ಪುರುಷರ ಗುಂಪು ಅಶ್ಲೀಲ ಮತ್ತು ಅಸಭ್ಯ ಭಾಷೆಯನ್ನು ಬಳಸಿ ಕಿರುಕುಳ ನೀಡಿದೆ. ಕೇವಲ ಮೂರೇ ಗಂಟೆಯಲ್ಲಿ 40ಕ್ಕೂ ಹೆಚ್ಚು ಪುರುಷರು ಕಿರುಕುಳ ನೀಡಲು ಯತ್ನಿಸಿರುವ ಆಘಾತಕಾರಿ ಘಟನೆ