Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಜಿಲ್ಲೆ

ಕೊಪ್ಪಳ | ರಹಿತ ಕೂಲಿ ಕಾರ್ಮಿಕರ ಕಾರ್ಮಿಕರ ಸಮಸ್ಯೆಗಳು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿ ಮನವಿ.

ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ಭೂ ರಹಿತ ಕೂಲಿ ಕಾರ್ಮಿಕರ MGNREGA ಕಾರ್ಮಿಕರ ಸಮಸ್ಯೆಗಳು, ಸಮಾನ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿ ಮಂಗಳವಾರ ಉಪ ತಹಶೀಲ್ದಾರಾದ ಪರಶುರಾಮ್ ಘಾಟಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.…

ಕರುನಾಡು ಘರ್ಜನೆ ಸುದ್ದಿ ಕೊಪ್ಪಳ: ಭೂ ರಹಿತ ಕೂಲಿ ಕಾರ್ಮಿಕರ MGNREGA ಕಾರ್ಮಿಕರ ಸಮಸ್ಯೆಗಳು, ಸಮಾನ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವಂತೆ ಆಗ್ರಹಿಸಿ ಮಂಗಳವಾರ ಉಪ ತಹಶೀಲ್ದಾರಾದ ಪರಶುರಾಮ್ ಘಾಟಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ನಮ್ಮ ದೇಶದ ಜನಸಂಖ್ಯೆಯ ಶೇಕಡ 70ರಷ್ಟು ಅಂದರೆ ಸುಮಾರು 100 ಕೋಟಿ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಅವರಲ್ಲಿ ಶೇಕಡ 50ರಷ್ಟು ಜನರು ಯಾವುದೇ ಸ್ಥಿರ ಜೀವನೋಪಾಯವನ್ನು ಹೊಂದಿಲ್ಲ ಅಥವಾ ತಲೆಮಾರುಗಳಿಂದ ಕೂಲಿಕಾರ್ಮಿಕರಾಗಿ ಉಳಿದಿದ್ದಾರೆ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ ಉದ್ಯೋಗಕ್ಕಾಗಿ ಅವರು ವಲಸೆ ಹೋಗುತ್ತಿದ್ದಾರೆ ಅನಾರೋಗ್ಯದ ಕಾರಣ ಪೌಷ್ಟಿಕ ಆಹಾರ ಅಥವಾ ವೈದ್ಯಕೀಯ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಜೀವನವು ಅರ್ಧಕ್ಕೆ ಕೊನೆಗೊಳ್ಳುತ್ತಿದೆ

ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಕನಿಷ್ಠ ವೇತನವನ್ನು ಘೋಷಿಸುತ್ತದೆ ಆದರೆ ಎಲ್ಲಿಯೂ ಕೂಡ ಅನುಷ್ಠಾನಗೊಂಡಿಲ್ಲ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ನೂರು ಕೆಲಸದ ದಿನಗಳು ಮಾತ್ರ ನೀಡಲಾಗುತ್ತದೆ ಅದರಲ್ಲಿಯೂ ಕೂಡ ಕನಿಷ್ಠ ಸಂಬಳ 370/- ಮಾತ್ರ ನಿಗದಿಪಡಿಸಲಾಗಿದೆ ಹೆಚ್ಚಿದ ಅಗತ್ಯ ವಸ್ತುಗಳ ಬೆಲೆಗಳ ಆಧಾರದ ಮೇಲೆ ದಿನಕ್ಕೆ 850/-ಕನಿಷ್ಠ ಕೂಲಿ ಇರಬೇಕು (7 ವೇತನ ಆಯೋಗದ ಶಿಫಾರಸ್ಸಿನಂತೆ )

ರೈತರ ಜೊತೆಯಲ್ಲಿ ಕೂಲಿ ಕಾರ್ಮಿಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಕೂಲಿ ಕಾರ್ಮಿಕರಿಗೆ ಯಾವುದೇ ತಿಂಗಳಲ್ಲಿ 15ರಿಂದ 20 ದಿನಗಳಿಗಿಂತ ಹೆಚ್ಚು ಕಾಲ ದುಡಿಯಲು ಕೆಲಸ ಸಿಗುತ್ತಿಲ್ಲ ಸಾಲಗಾರರ ಸುಳಿಯಿಂದ ಹೊರಬರಲು ವರ್ಷವಿಡಿ ಕೂಲಿ ಕಾರ್ಮಿಕರು ಪ್ರತಿ ತಿಂಗಳು 20ರಿಂದ 25 ದಿನ ಕೆಲಸ ಹುಡುಕಬೇಕಾಗಿದೆ

ಅದೇ ರೀತಿಯಲ್ಲಿ ಹೆಚ್ಚುವರಿ ಆದಾಯಕ್ಕಾಗಿ ಸಬ್ಸಿಡಿ ಸಾಲಗಳು ಜಾಬ್ ಕಾರ್ಡ್ ಹೊಂದಿದವರಿಗೆ ಬ್ಯಾಂಕ್ ಗಳಿಂದ ಸಾಲ ನೀಡಲು ಆದೇಶ ನೀಡಬೇಕು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ದುಡಿಯುವ ಕೂಲಿಕಾರ್ಮಿಕರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ ಬೇರೆ ದಾರಿ ಇಲ್ಲದೆ ಬದುಕಬೇಕಾದ ಅನಿವಾರ್ಯತೆ ಕೂಲಿ ಕಾರ್ಮಿಕರಿಗೆ ಇದೆ ಸಾಮಾಜಿಕ ಭದ್ರತೆಯ ಸಮಿತಿ ಕಾಯ್ದೆ ಜಾರಿಗೆ ತಂದರು ಅದರಲ್ಲಿ ಕೃಷಿ ಕಾರ್ಮಿಕರನ್ನು ಮತ್ತು ದಿನಗೂಲಿ ಕಾರ್ಮಿಕರನ್ನು ಒಳಗೊಂಡಿಲ್ಲ ಆದ್ದರಿಂದ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಕೋಡನ್ನು ಕಾರ್ಮಿಕರಿಗೆ ಅನ್ವಯಿಸಲು ಈ ಕೆಳಕಂಡಂತೆ ಕ್ರಮ ಕೈಗೊಳ್ಳಬೇಕೆಂದು ಕೂಡಲೇ ನಾವುಗಳೆಲ್ಲರೂ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ

1. 60 ವರ್ಷ ಪೂರೈಸಿದ ಪ್ರತಿಯೊಬ್ಬ ವ್ಯಕ್ತಿಗೂ ವೃದ್ಧ ಪಿಂಚಣಿ ಅಲ್ಲದೆ ನಿವೃತ್ತಿ ವೇತನವನ್ನು 5000/- ಕಡಿಮೆ ಇಲ್ಲದಂತೆ ನೀಡಬೇಕು
2. ಪ್ರತಿ ಕುಟುಂಬ ಕಾರ್ಮಿಕರಿಗೆ ಉಚಿತವಾಗಿ ಉತ್ತಮ ಮನೆ ನಿರ್ಮಿಸಿ ಕೊಡಬೇಕು
3. ಮಾಸಿಕ ವೇತನಕ್ಕೆ ಸಮಾನವಾಗಿ ಹೆರಿಗೆ ವೇತನವನ್ನು ತಿಂಗಳಿಗೆ 10,000/-ದಂತೆ 6 ತಿಂಗಳವರೆಗೂ ನೀಡಬೇಕು
4. ಕೃಷಿ ಕಾರ್ಮಿಕರಿಗೆ ಸಹಜ ಸಾವು ಮತ್ತು ಆಕಸ್ಮಿಕ ಮರಣಕ್ಕೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು
5. ವೈದಕೀಯ ಸೌಲಭ್ಯವನ್ನು ಪಡೆಯಲು ಇಎಸ್ಐ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಕೃಷಿ ಕಾರ್ಮಿಕರ ಹೆಸರನ್ನು ನೋಂದಾಯಿಸಿಕೊಳ್ಳಬೇಕು
6. ಭೂಮಿ ಇಲ್ಲದ ಬಡವರಿಗೆ ಪ್ರತಿ ಕುಟುಂಬಕ್ಕೆ 5 ಎಕರೆ ಭೂಮಿಯನ್ನು ಹಂಚಿಕೆ ಮಾಡಿ ಕೃಷಿ ಯೋಗ್ಯ ಮತ್ತು ನೀರಾವರಿ ಅನುಕೂಲ ಕಲ್ಪಿಸಬೇಕು
7. ಅರಣ್ಯ ಭೂಮಿ ಹಕ್ಕು ಕಾಯ್ದೆ ಜಾರಿಗೆ ತರಬೇಕು ಮತ್ತು ಪಾಳು ಭೂಮಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಹಾಗೂ ಭೂಮಿ ಇಲ್ಲದವರಿಗೆ ಹಕ್ಕುಪತ್ರ ನೀಡಬೇಕು
8. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಕೂಲಿ ಕಾರ್ಮಿಕರಿಗೂ ಜಾಬ್ ಕಾರ್ಡ್ ನೀಡಬೇಕು ಮತ್ತು ಕುಟುಂಬಕ್ಕೆ ಅಲ್ಲದೆ ಪ್ರತಿ ವ್ಯಕ್ತಿಗೆ ವರ್ಷಕ್ಕೆ 200 ಕೆಲಸದ ದಿನಗಳನ್ನು ಕೊಡಬೇಕು
9. ಕೃಷಿ ಮತ್ತು ಸಂಬಂಧಿತ ಕಾರ್ಮಿಕರನ್ನು ಕುಶಲ ಕಾರ್ಮಿಕರು ಎಂದು ಗುರುತಿಸಬೇಕು ಮತ್ತು ಎಲ್ಲರಿಗೂ ಉದ್ಯೋಗ ಖಾತ್ರಿ ಯೋಜನೆಯೊಂದಿಗೆ ಕಾಮಗಾರಿಗಳಲ್ಲಿ ಕನಿಷ್ಠ ಕೂಲಿ 920/-ರೂ ನಿಗದಿಪಡಿಸಬೇಕು
10. ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ನಿಷೇಧಿಸಬೇಕು ಜೈವಿಕ ಗೊಬ್ಬರಗಳು ಮತ್ತು ಜೈವಿಕ ಔಷಧಿಗಳನ್ನು ಪ್ರೋತ್ಸಾಹಿಸಬೇಕು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಬೇಕು ಆಹಾರದ ಸಾರ್ವಭೌಮತ್ವವನ್ನು ರಕ್ಷಿಸಬೇಕು
11. ನರೇಗಾ ಕೂಲಿ ವಿಳಂಬವಾದಲ್ಲಿ ಕಾನೂನುಬದ್ಧವಾಗಿ ಸಿಗಬೇಕಾದ ‘ವಿಳಂಬ ಪರಿಹಾರ’ (Delay Compensation) ವನ್ನು ಕಾರ್ಮಿಕರಿಗೆ ನೀಡಬೇಕು
12. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯ ವ್ಯವಸ್ಥೆ ಕಡ್ಡಾಯವಾಗಿರಬೇಕು.
13. ಕೆಲಸದ ಸಮಯದಲ್ಲಿ ಅಪಘಾತ ಅಥವಾ ಸಾವು ಸಂಭವಿಸಿದರೆ ಕಾರ್ಮಿಕರ ಕುಟುಂಬಕ್ಕೆ ತಕ್ಷಣದ ಆರ್ಥಿಕ ನೆರವು ಮತ್ತು ವಿಮಾ ಸೌಲಭ್ಯ ಒದಗಿಸಬೇಕು.
14. ನರೇಗಾ ಕಾರ್ಮಿಕರಿಗೆ ಕಾಲಕಾಲಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಬೇಕು
15. ಅರ್ಹವಿರುವ ಎಲ್ಲಾ ಕುಟುಂಬಗಳಿಗೆ ಜಾಬ್ ಕಾರ್ಡ್ ವಿತರಿಸಬೇಕು.
ಕೆಲಸದ ಸ್ಥಳದಲ್ಲಿ ತಾರತಮ್ಯ ಮಾಡದೆ, ಪಕ್ಷಪಾತವಿಲ್ಲದೆ ಎಲ್ಲರಿಗೂ ಸಮಾನವಾಗಿ ಕೆಲಸ ಹಂಚಿಕೆ ಮಾಡಬೇಕೆಂದು ಕರ್ನಾಟಕ ವೃತ್ತಿಪರ ವ್ಯವಸಾಯ ಯೂನಿಯನ್ ರಾಜ್ಯ ಸಂಚಾಲಕ ಯಲ್ಲಪ್ಪ ಮ್ಯಾಗಳಕೇರಿ.ಕರ್ನಾಟಕ ವೃತ್ತಿಪರ ವ್ಯವಸಾಯ ಯೂನಿಯನ್ ರೋಣ ತಾಲೂಕಾ ಸಂಚಾಲಕಿ ಶ್ರೀಮತಿ ಉಮಾ.ಕರ್ನಾಟಕ ವೃತ್ತಿಪರ ವ್ಯವಸಾಯ ಯೂನಿಯನ್ ಮುಂಡರಗಿ ತಾಲೂಕು ಸಂಚಾಲಕಿ ಶ್ರೀಮತಿ ದೌಲಾಬಿ. ಕರ್ನಾಟಕ ವೃತ್ತಿಪರ ವ್ಯವಸಾಯನಿನ ಕುಕುನೂರ್ ತಾಲೂಕು ಸಂಚಾಲಕಿ ಶ್ರೀಮತಿ ಲಲಿತ.ಕರ್ನಾಟಕ ವೃತ್ತಿಪರ ವ್ಯವಸಾಯನಿನ ಯಲಬುರ್ಗಾ ತಾಲೂಕು ಸಂಚಾಲಕಿ ಶ್ರೀಮತಿ ಶೈಲಜಾ
ಕರ್ನಾಟಕ ವೃತ್ತಿಪರ ವ್ಯವಸಾಯನಿನ ಗಜೇಂದ್ರಗಡ ತಾಲೂಕು ಸಂಚಾಲಕ ಮಾರುತಿ.ಕರ್ನಾಟಕ ವೃತ್ತಿಪರ ವ್ಯವಸಾಯನಿನ ಕೊಪ್ಪಳ ಜಿಲ್ಲಾ ಸಂಚಾಲಕ ಸುಂಕಪ್ಪ ಮೀಸಿ ಮುಂತಾದವರು ಒತ್ತಾಯಿಸಿದ್ದಾರೆ.

Editor

Leave a comment