Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಶ್ರಮಿಕರ ಬದುಕಿಗೆ ಆಸರೆಯಾದ ಕೃಷ್ಣಗೌಡ್ರು ಪಾಟೀಲರ ಯುವ ನಾಯಕತ್ವ. ಸವಿತಾ ಸಮಾಜಕ್ಕೆ ಕಾರ್ಮಿಕ ಕಾರ್ಡ್ ಆಶಾಕಿರಣ

ಕರುನಾಡು ಘರ್ಜನೆ ಗದಗ 15: ಯಾವ ದೇಶದಲ್ಲಿ ಶ್ರಮಿಕನ ಬೆವರಿನ ಹನಿಗೆ ಗೌರವ ಸಿಗುತ್ತದೆಯೋ, ಆ ದೇಶ ಮಾತ್ರ ಸುದೃಢವಾಗಿ ಬೆಳೆಯಲು ಸಾಧ್ಯ. ಸಮಾಜದ ಕಟ್ಟಕಡೆಯ ಅಸಂಘಟಿತ ವಲಯದ ಕಾರ್ಮಿಕರ ಅಭಿವೃದ್ಧಿಯೇ ನಿಜವಾದ ಪ್ರಗತಿಯ ಮೂಲಾಧಾರ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ…

ಕರುನಾಡು ಘರ್ಜನೆ ಗದಗ 15: ಯಾವ ದೇಶದಲ್ಲಿ ಶ್ರಮಿಕನ ಬೆವರಿನ ಹನಿಗೆ ಗೌರವ ಸಿಗುತ್ತದೆಯೋ, ಆ ದೇಶ ಮಾತ್ರ ಸುದೃಢವಾಗಿ ಬೆಳೆಯಲು ಸಾಧ್ಯ. ಸಮಾಜದ ಕಟ್ಟಕಡೆಯ ಅಸಂಘಟಿತ ವಲಯದ ಕಾರ್ಮಿಕರ ಅಭಿವೃದ್ಧಿಯೇ ನಿಜವಾದ ಪ್ರಗತಿಯ ಮೂಲಾಧಾರ.
ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಶ್ರಮಿಕ ವರ್ಗದ ಏಳಿಗೆಗಾಗಿ ಗದಗ ಜಿಲ್ಲೆಯಲ್ಲಿ ಹೊಸದೊಂದು ಸಾಮಾಜಿಕ ಕ್ರಾಂತಿ ಸದ್ದಿಲ್ಲದೆ ನಡೆಯುತ್ತಿದೆ.
ಸಮಾಜದ ಕಲ್ಯಾಣಕ್ಕಾಗಿ ಕಂಕಣಬದ್ಧರಾಗಿ ನಿಂತಿರುವ ಗದಗ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಕೃಷ್ಣಗೌಡ್ರು ಪಾಟೀಲ ಅವರ ನೇತೃತ್ವದಲ್ಲಿ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಅಧ್ಯಕ್ಷತೆಯಲ್ಲಿ ಮೇ 16-5-2026 ಶನಿವಾರ ರಂದು ಕಾಟನ್ ಸೇಲ್ ಸೊಸೈಟಿಯಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಗದಗ ಜಿಲ್ಲಾ ಸವಿತಾ ಸಮಾಜದ ಬಾಂಧವರಿಗಾಗಿ ಶ್ರೀ ಕೃಷ್ಣಗೌಡ್ರು ಪಾಟೀಲರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ‘ಕಾರ್ಮಿಕ ಕಾರ್ಡ್ ವಿತರಣಾ ಸಮಾರಂಭ’ವು ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.
*ಆದರ್ಶಗಳ ಹಾದಿಯಲ್ಲಿ ಮುನ್ನಡೆಯುವ ಜನನಾಯಕ:* ಶ್ರೀ ಕೃಷ್ಣಗೌಡ್ರು ಪಾಟೀಲರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿರುವವರಲ್ಲ; ಬದಲಿಗೆ ತಮ್ಮ ಹಿರಿಯರ ತ್ಯಾಗ, ಬದ್ಧತೆ ಮತ್ತು ಜನಸೇವೆಯ ಮಹೋನ್ನತ ಮಾರ್ಗದರ್ಶನದಲ್ಲಿ ಬೆಳೆದುಬಂದ ಸವ್ಯಸಾಚಿ. ಬಡವರ, ಶ್ರಮಿಕರ, ರೈತರ ಕಷ್ಟ-ಕಾರ್ಪಣ್ಯಗಳಿಗೆ ತಕ್ಷಣವೇ ಸ್ಪಂದಿಸುವ ಇವರ ಗುಣವು ಇವರನ್ನು ಹಿರಿಯರ ನಿಜವಾದ ಉತ್ತರಾಧಿಕಾರಿಯನ್ನಾಗಿ ಮಾಡಿದೆ.
ಸಮಾಜದ ಪ್ರತಿಯೊಂದು ವರ್ಗದ ಹಿತವನ್ನು ಕಾಪಾಡುವುದೇ ಇವರ ದೈನಂದಿನ ಕಾಯಕವಾಗಿದೆ.
*ಯುವ ಸಮೂಹಕ್ಕೆ ಉದ್ಯೋಗದ ಬೆಳಕು:* ಇಂದಿನ ದಿನಗಳಲ್ಲಿ ನಿರುದ್ಯೋಗ ಎನ್ನುವುದು ಯುವ ಪೀಳಿಗೆಯನ್ನು ಕಾಡುತ್ತಿರುವ ದೊಡ್ಡ ಪಿಡುಗು. ಉದ್ಯೋಗವಿಲ್ಲದೆ ದಾರಿ ಕಾಣದೆ ಕಂಗಾಲಾಗಿರುವ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೃಷ್ಣಗೌಡ್ರು ನಿರಂತರವಾಗಿ ನಡೆಸುತ್ತಿರುವ ಹೋರಾಟ ಮತ್ತು ಪ್ರಯತ್ನಗಳು ಕ್ರಾಂತಿಕಾರಕವಾಗಿವೆ.
ಸವಿತಾ ಸಮಾಜ ಅಷ್ಟೇ ಅಲ್ಲ ಎಲ್ಲಾ ಸಮುದಾಯದ ಯುವಶಕ್ತಿಗೆ ಬಲ ತುಂಬುವ ಮೂಲಕ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಇವರು ಮುನ್ನುಡಿ ಬರೆದಿದ್ದಾರೆ.
*ಸವಿತಾ ಸಮಾಜದ ಏಳಿಗೆಗೆ ಹೆಗಲು:* ವಿಶೇಷವಾಗಿ ಹಿಂದುಳಿದ ವರ್ಗಗಳು ಮತ್ತು ಸವಿತಾ ಸಮಾಜದ ಆರ್ಥಿಕ ಭದ್ರತೆಗಾಗಿ ಇವರು ಸದಾ ಮುಂಚೂಣಿಯಲ್ಲಿ ನಿಂತಿದ್ದಾರೆ. ಕಾರ್ಮಿಕ ಇಲಾಖೆಯಿಂದ ಮಂಜೂರಾದ ಅಸಂಘಟಿತ ಕಾರ್ಮಿಕ ಕಾರ್ಡುಗಳು ಸವಿತಾ ಸಮಾಜದ ಬಾಂಧವರ ಬದುಕಿಗೆ ಕಾನೂನಾತ್ಮಕ ಮತ್ತು ಆರ್ಥಿಕ ರಕ್ಷಣೆಯನ್ನು ಒದಗಿಸಲಿವೆ. ಶ್ರಮಜೀವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಈ ಕಾಯಕವನ್ನು ಶ್ರೀ ಕೃಷ್ಣಗೌಡ್ರು ಪಾಟೀಲರು ತಮ್ಮ ಅಮೃತ ಹಸ್ತದಿಂದ ನೆರವೇರಿಸುತ್ತಿರುವುದು ಇಡೀ ಸಮಾಜಕ್ಕೆ ಹೆಮ್ಮೆಯ ಮತ್ತು ಗೌರವದ ಸಂಗತಿಯಾಗಿದೆ.
*ಕ್ರಾಂತಿಕಾರಿ ಹೆಜ್ಜೆಗೆ ತಮಗೆಲ್ಲ ಆದರದ ಸ್ವಾಗತ:* ಗದಗ-ಬೆಟಗೇರಿ ಸವಿತಾ ಸಮಾಜ ಹಾಗೂ ಸಮಾಜದ ಒಟ್ಟು ಐದು ದೈವದ ಗೌರವಾನ್ವಿತ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸಮಸ್ತ ಸಮಾಜದ ಬಂಧುಗಳ ಸಮ್ಮುಖದಲ್ಲಿ ಈ ಐತಿಹಾಸಿಕ ಕಾರ್ಯಕ್ರಮವು ಜರುಗಲಿದೆ.
ಶ್ರಮಿಕರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಯುವ ನಾಯಕರಾದ ಶ್ರೀ ಕೃಷ್ಣಗೌಡ್ರು ಪಾಟೀಲರನ್ನು ಗೌರವಪೂರ್ವಕವಾಗಿ ಸ್ವಾಗತಿಸುತ್ತಾ, ಗದಗ ಜಿಲ್ಲೆಯ ಸವಿತಾ ಸಮಾಜದ ಸಮಸ್ತ ಪ್ರಜ್ಞಾವಂತ ಬಾಂಧವರು ಮತ್ತು ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಮಾಜಿಕ ಕ್ರಾಂತಿಗೆ ಸಾಕ್ಷಿಯಾಗಬೇಕೆಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣ ಎಚ್. ಹಡಪದ ಹಿರಿಯರಾದ ಹನುಮಂತಪ್ಪ ರಾಂಪುರ. ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ. ಶ್ರೀ ಸಂತ ಸೇನಾ ಮಹಾರಾಜ್ ನಾಬಿಕ್ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರುಗಳಾದ ರಾಜು ಮಾನೆ. ಮತ್ತು ವಿಕಾಸ ಕ್ಷೀರಸಾಗರ. ಗಂಗಣ್ಣ ಗೌಡರ. ವೆಂಕಟೇಶ ರಾಂಪುರ. ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ ಕೃಷ್ಣ ಎಚ್. ಹಡಪದ
9845650612

Editor

Leave a comment