ಗದಗ 16: “ಯಾರು ನಮ್ಮ ಸಣ್ಣ ಪುಟ್ಟ ಮನೆಗಳನ್ನು ನೋಡಿ ನಮ್ಮ ಯೋಗ್ಯತೆಯನ್ನು ಅಳೆದಿದ್ದಾರೋ, ಯಾರು ನಮ್ಮ ಬಡತನವನ್ನು ನೋಡಿ ಉಪೇಕ್ಷೆಯಿಂದ ನಕ್ಕಿದ್ದಾರೋ, ಆ ಎಲ್ಲಾ ಕೆಲ ರಾಜಕಾರಣಿಗಳು ಮತ್ತು ಕೆಲ ಶ್ರೀಮಂತರು ಕಣ್ಣು ತೆರೆದು ನೋಡಬೇಕಾದ ಕಾಲ ಬಂದಿದೆ. ಸೌಂದರ್ಯ, ಸಂಪತ್ತು ಮತ್ತು ಭವ್ಯತೆ ಕೇವಲ ಕೆಲವೇ ಕೆಲವು ಜನರ ಜಹಗೀರಲ್ಲ ಎಂಬುದನ್ನು ನಮ್ಮ ಸಮಾಜದ ಹೆಮ್ಮೆಯ ನಾಯಕ ಶ್ರೀ ನಾಮದೇವ ನಾಗರಾಜ್ ಅವರು ಇಡೀ ರಾಜ್ಯಕ್ಕೆ ಸಾಬೀತುಪಡಿಸಿದ್ದಾರೆ,” ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಅತ್ಯಂತ ಭಾವನಾತ್ಮಕವಾಗಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಭೈರಸಂದ್ರ ಗ್ರಾಮದಲ್ಲಿ ತಲೆಎತ್ತಿ ನಿಂತಿರುವ ಶ್ರೀ ನಾಮದೇವ ನಾಗರಾಜ್ ಅವರ ನೂತನ *‘ಶತಾಬ್ದಿ ನಿವಾಸ’* ದ ಗೃಹಪ್ರವೇಶ ಮಹೋತ್ಸವದಲ್ಲಿ ಭಾಗವಹಿಸಿ, ಅಲ್ಲಿನ ದೈವಿಕ ವಾತಾವರಣವನ್ನು ಕಣ್ಣಾರೆ ಕಂಡು ಕೃತಾರ್ಥರಾದ ಕೃಷ್ಣಾ ಎಚ್. ಹಡಪದ ಅವರು ಇಡೀ ಸವಿತಾ ಸಮಾಜಕ್ಕೆ ಪ್ರೇರಣೆ ನೀಡುವಂತೆ ಸುದೀರ್ಘ ಪತ್ರಿಕಾ ಹೇಳಿಕೆ ನೀಡಿದ್ದಾರೆ
.
*ವೈಭವೋಪೇತ ದೈವಿಕ ಸಂಕಲ್ಪ:* ಈ ಭವ್ಯ ನಿವಾಸವು ಕೇವಲ ಇಟ್ಟಿಗೆ-ಸಿಮೆಂಟ್‌ನ ಬೃಹತ್ ಕಟ್ಟಡವಲ್ಲ, ಅದು ಧರ್ಮ ಮತ್ತು ಭಕ್ತಿಯ ಸಂಗಮ. ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಸಿಗುವ ಪವಿತ್ರ ಗೋಮಾತೆಯ ದರ್ಶನ, ಹಸಿರು ಉಕ್ಕುವ ಅಡಿಕೆ ತೋಟ, ಮನಸ್ಸಿಗೆ ಮುದ ನೀಡುವ ಬೃಂದಾವನ ಮತ್ತು ಮನೆಯೊಳಗೇ ನಿರ್ಮಾಣವಾಗಿರುವ ಸಾಕ್ಷಾತ್ ಶ್ರೀ ವೆಂಕಟೇಶ್ವರ ಸ್ವಾಮಿಯ ಭವ್ಯ ದೇವಸ್ಥಾನವು ಕಲ್ಪನೆಗೂ ಮೀರಿದ ಆಧ್ಯಾತ್ಮಿಕ ಪ್ರಪಂಚವನ್ನು ಸೃಷ್ಟಿಸಿದೆ. ಬಂದ ಸಾವಿರಾರು ಅತಿಥಿಗಳನ್ನು ಭೇದಭಾವವಿಲ್ಲದೆ ಸಮಾನವಾಗಿ ಕಂಡು, ಪ್ರೀತಿಯ ಭೋಜನದೊಂದಿಗೆ ಪರಿಸರ ಕಾಳಜಿಯ ತೆಂಗಿನಕಾಯಿ ಸಸಿ, ಮುತ್ತೈದೆ ವಸ್ತುಗಳು ಮತ್ತು ಜ್ಞಾನದ ಸಂಕೇತವಾಗಿ ಪುಸ್ತಕ ನೀಡಿ ಗೌರವಿಸಿ ಬಿಳ್ಕೊಟ್ಟ ಆತಿಥ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.
*ಸಮಾಜದ ಯುವಕರಿಗೆ ಸ್ವಾಭಿಮಾನದ ಸಂದೇಶ:* “ನಮ್ಮ ಸಮಾಜದಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ದೊಡ್ಡ ಮನೆಗಳನ್ನು ಕಟ್ಟಿರಬಹುದು. ಆದರೆ ನಾಮದೇವ ನಾಗರಾಜ್ ಅವರು ಕಟ್ಟಿರುವ ಈ ಮನೆ ಇಡೀ ರಾಜ್ಯದ ಲಕ್ಷಾಂತರ ಸವಿತಾ ಸಮಾಜದ ಕುಟುಂಬಗಳ ಸ್ವಾಭಿಮಾನದ ಕಿರೀಟ. ನಮ್ಮನ್ನು ಸಣ್ಣದಾಗಿ ಕಂಡವರ ಎದುರು ನಾವು ಹೆಮ್ಮೆಯಿಂದ ಎದೆಯುಬ್ಬಿಸಿ, ‘ನಮ್ಮವರೂ ಇಂತಹ ಸಾಮ್ರಾಜ್ಯವನ್ನು ಸೃಷ್ಟಿಸಬಲ್ಲರು’ ಎಂದು ಹೇಳಿಕೊಳ್ಳುವ ಸುವರ್ಣಾವಕಾಶ ಸಿಕ್ಕಿದೆ. ಸಮಾಜದಲ್ಲಿ ಇಂತಹ ಭವ್ಯ ಸೃಷ್ಟಿಗಳನ್ನು ಮಾಡುವ ಶಕ್ತಿವಂತರು ನಮ್ಮಲ್ಲೇ ಉದಯಿಸುತ್ತಿದ್ದಾರೆ. ಯುವ ಪೀಳಿಗೆ ಇವರನ್ನು ಆದರ್ಶವಾಗಿಟ್ಟುಕೊಂಡು, ಕೀಳರಿಮೆಯನ್ನು ಬಿಟ್ಟು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗಲು ಸಂಕಲ್ಪ ಮಾಡಬೇಕು,” ಎಂದು ಹಿರಿಯರಾದ ಹನುಮಂತಪ್ಪ ರಾಂಪೂರ. ಸವಿತಾ ಸಮಾಜದ ರಾಜ್ಯ ನಾಯಕರಾದ ಬೈಲಪ್ಪ ನಾರಾಯಣಸ್ವಾಮಿ ಮತ್ತು ರಾಜ್ಯ ನಿರ್ದೇಶಕರಾದ ಕಡೂರು ರವಿಕುಮಾರ. ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಯುವಕರಿಗೆ ಕರೆ ನೀಡಿದ್ದಾರೆ.
ಬಡವರ ಬಂಧು, ಕಷ್ಟಕಾಲದ ಸಖ, ಧೀಮಂತ ನಾಯಕ ಸನ್ಮಾನ್ಯ ಶ್ರೀ ನಾಮದೇವ ನಾಗರಾಜ್ ಅವರ ಈ ಸಾಧನೆ ಇಡೀ ಸವಿತಾ ಸಮಾಜದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ದಾಗಿದೆ.
ಈ ‘ಶತಾಬ್ದಿ ನಿವಾಸ’ದಲ್ಲಿ ಸುಖ, ಶಾಂತಿ, ಐಶ್ವರ್ಯ ಸದಾ ನೆಲೆಸಲಿ ಎಂದು ಭಗವತಿ ಶ್ರೀ ಗದ್ವಾಲ್ ಜಮಲಮ್ಮದೇವಿ ತಾಯಿಯಲ್ಲಿ ಪ್ರಾರ್ಥಿಸಲಾಗಿದೆ.
*ಬಾಕ್ಸ್ ಹೇಳಿಕೆ*
°°°°°°°°°°°°°°°
*”ಯಾರಿಗೆ ಸಮಾಜದ ಬಡವರ ಕಣ್ಣೀರು ಒರೆಸುವ ಹಂಬಲವಿರುತ್ತದೆಯೋ, ಅವರ ಪರಿಶ್ರಮಕ್ಕೆ ಭಗವಂತ ಸದಾ ಜೊತೆಯಿರುತ್ತಾನೆ.*
*1) “ಆದರ್ಶ ನಾಯಕತ್ವ:* ಸವಿತಾ ಸಮಾಜದ ಹೆಮ್ಮೆಯ ಸೇವಕರಾದ ಶ್ರೀ ನಾಮದೇವ ನಾಗರಾಜ್ ಅವರು ಕೇವಲ ಯಶಸ್ವಿ ಉದ್ಯಮಿಯಷ್ಟೇ ಅಲ್ಲ; ಸಮಾಜದ ಪ್ರತಿಯೊಬ್ಬ ಸಾಮಾನ್ಯ ಮತ್ತು ಬಡ ನಾಗರಿಕರ ಕಷ್ಟ-ಸುಖಗಳಿಗೆ ತಕ್ಷಣ ಸ್ಪಂದಿಸುವ ಧೀಮಂತ ನಾಯಕರಾಗಿದ್ದಾರೆ.
*2) ಸಮತೆಯ ಸಿದ್ಧಾಂತ:* ಅಧಿಕಾರ ಮತ್ತು ಸಂಪತ್ತಿನ ಹಮ್ಮು-ಬಿಮ್ಮುಗಳಿಲ್ಲದೆ, ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಂಡು ಗೌರವಿಸುವ ಅಪೂರ್ವ ಗುಣ ಇವರದ್ದಾಗಿದೆ.
*3) ಸಂಸ್ಕೃತಿಯ ಹರಿಕಾರ:* ದೊಡ್ಡಬಳ್ಳಾಪುರದಲ್ಲಿ ಇವರು ನಿರ್ಮಿಸಿರುವ ಭವ್ಯ ‘ಶತಾಬ್ದಿ ನಿವಾಸ’ ಇವರ ಉದಾತ್ತ ಚಿಂತನೆ, ಗೋದರ್ಶನ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿರುವ ಅಚಲ ಭಕ್ತಿಗೆ ಸಾಕ್ಷಿಯಾಗಿದೆ.
*4) ಸಮಾಜದ ಆಶಾಕಿರಣ:* ಸವಿತಾ ಸಮಾಜದ ಸಾವಿರಾರು ಕುಟುಂಬಗಳಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ನೆರವು ನೀಡುತ್ತಾ, ಯುವ ಪೀಳಿಗೆಗೆ ಸ್ವಾಭಿಮಾನದಿಂದ ಬದುಕಲು ನಿರಂತರ ಪ್ರೇರಣೆ ನೀಡುತ್ತಿರುವ ನೈಜ ಶಕ್ತಿ ಇವರಾಗಿದ್ದಾರೆ.- ಕೃಷ್ಣಾ ಎಚ್ ಹಡಪದ ಜಿಲ್ಲಾಧ್ಯಕ್ಷರು, ಗದಗ ಜಿಲ್ಲಾ ಸವಿತಾ ಸಮಾಜ.
ಕೃಷ್ಣಾ ಎಚ್ ಹಡಪದ
9845650612.