Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಗದಗ ಜಿಲ್ಲಾ ಸವಿತಾ ಸಮಾಜದ ಸಾರ್ಥಕ ಸೇವೆ ಇಡೀ ರಾಜ್ಯಕ್ಕೆ ಮಾದರಿ: ಕೃಷ್ಣಗೌಡ್ರು ಪಾಟೀಲ

ಕರುನಾಡು ಘರ್ಜನೆ ಸುದ್ದಿ ಗದಗ 18: ಅಸಂಘಟಿತ ವಲಯದ ಶ್ರಮಿಕ ವರ್ಗದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಗದಗ ಜಿಲ್ಲಾ ಸವಿತಾ ಸಮಾಜವು ಹಮ್ಮಿಕೊಂಡಿರುವ ತಳಮಟ್ಟದ ಜನಪರ ಕಾರ್ಯಕ್ರಮಗಳು ಇಡೀ ಕರ್ನಾಟಕ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ಮಾದರಿಯಾಗಿವೆ ಎಂದು ಕಾಂಗ್ರೆಸ್…

ಕರುನಾಡು ಘರ್ಜನೆ ಸುದ್ದಿ ಗದಗ 18: ಅಸಂಘಟಿತ ವಲಯದ ಶ್ರಮಿಕ ವರ್ಗದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಗದಗ ಜಿಲ್ಲಾ ಸವಿತಾ ಸಮಾಜವು ಹಮ್ಮಿಕೊಂಡಿರುವ ತಳಮಟ್ಟದ ಜನಪರ ಕಾರ್ಯಕ್ರಮಗಳು ಇಡೀ ಕರ್ನಾಟಕ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ಮಾದರಿಯಾಗಿವೆ ಎಂದು ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರು ಪಾಟೀಲ ಅವರು ಅಭಿಪ್ರಾಯಪಟ್ಟರು.
ಕಾಟನ್ ಸೆಲ್ ಸೊಸೈಟಿಯಲ್ಲಿನ ಕೃಷ್ಣಗೌಡ್ರು ಪಾಟೀಲರ ಕಾರ್ಯಾಲಯದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡ ಗದಗ-ಬೆಟಗೇರಿ ಅವಳಿ ನಗರದ ಸವಿತಾ ಸಮಾಜದ 250 ಜನ ಅರ್ಹ ಫಲಾನುಭವಿಗಳಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ ಸಿದ್ಧಪಡಿಸಲಾದ ಸ್ಮಾರ್ಟ್ ಗುರುತಿನ ಚೀಟಿಗಳನ್ನು ವಿತರಿಸುವ ಭವ್ಯ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜದ ಕಟ್ಟಕಡೆಯ ಶ್ರಮಿಕನಿಗೂ ಸರ್ಕಾರದ ಸವಲತ್ತುಗಳು ತಲುಪಿದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಸಾಕಾರಗೊಳ್ಳಲು ಸಾಧ್ಯ. ಸವಿತಾ ಸಮಾಜದ ಬಂಧುಗಳು ನಿರಂತರ ಶ್ರಮದ ಮೂಲಕ ಸಮಾಜದ ಅತ್ಯಗತ್ಯ ಅಂಗವಾಗಿದ್ದಾರೆ. ಇಂತಹ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸಾಮಾಜಿಕ ಹಕ್ಕುಗಳನ್ನು ಕೊಡಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುತ್ತಿರುವ ಗದಗ ಜಿಲ್ಲಾ ಸವಿತಾ ಸಮಾಜ ಮತ್ತು ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ನಿಯೋಗದ ಕಾರ್ಯ ಶ್ಲಾಘನೀಯ. ಇಂತಹ ಒಂದು ಪವಿತ್ರ ಹಾಗೂ ಜನಪರ ಕಾರ್ಯಕ್ರಮಕ್ಕೆ ನಮ್ಮ ಕಾರ್ಯಾಲಯವು ಸಾಕ್ಷಿಯಾಗಿರುವುದು ನನ್ನ ಸೌಭಾಗ್ಯ” ಎಂದು ಕೃಷ್ಣಗೌಡ್ರು ಪಾಟೀಲ ನುಡಿದರು
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದ ಗದಗ ಜಿಲ್ಲೆಯ ದಲಿತ ಚಳುವಳಿಯ ಮುಂಚೂಣಿ ನಾಯಕರು ಹಾಗೂ ಹಿರಿಯ ವಿಚಾರವಂತರಾದ ಎಸ್. ಎನ್. ಬಳ್ಳಾರಿ ಗುರುಗಳು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ಶೋಷಿತ ಮತ್ತು ಶ್ರಮಿಕ ವರ್ಗದ ಜನರಿಗೆ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ತಲುಪಿಸುವ ಇಂತಹ ಕಾರ್ಯಕ್ರಮಗಳು ಇಂದಿನ ತುರ್ತು ಅಗತ್ಯಗಳಾಗಿವೆ. ಎಂದ ಅವರು ಇಂದು ಗದಗ ಜಿಲ್ಲಾ ಸವಿತಾ ಸಮಾಜವು ಕೇವಲ ಭಾಷಣಕ್ಕೆ ಸೀಮಿತವಾಗದೆ, 250 ಶ್ರಮಿಕ ಕುಟುಂಬಗಳಿಗೆ ರಕ್ಷಣಾ ಕವಚ ನೀಡುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯ ಕ್ರಾಂತಿಗೆ ಮುನ್ನುಡಿ ಬರೆದಿದೆ. ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಸಬಲೀಕರಣಗೊಳಿಸುತ್ತಿರುವ ಈ ನಡೆ ಇಡೀ ರಾಜ್ಯಕ್ಕೆ ದಾರಿದೀಪವಾಗಿದೆ” ಎಂದು ಬಣ್ಣಿಸಿದರು.
ಕಾಂಗ್ರೆಸ್ ಯುವ ನಾಯಕರಾದ ರವಿಕುಮಾರ ರೆಡ್ಡಿ ಅವರು ಮಾತನಾಡಿ, “ಕಷ್ಟಪಟ್ಟು ದುಡಿಯುವ ಶ್ರಮಿಕ ವರ್ಗಕ್ಕೆ ಸೂಕ್ತ ಗೌರವ ಮತ್ತು ಸಾಮಾಜಿಕ ಭದ್ರತೆ ಸಿಗದೇ ಹೋದರೆ ಸದೃಢ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಗದಗ ಜಿಲ್ಲಾ ಸವಿತಾ ಸಮಾಜವು ಇಡೀ ಕರ್ನಾಟಕದಲ್ಲೇ ಅತ್ಯಂತ ಕ್ರಿಯಾಶೀಲ ಜಿಲ್ಲೆಯಾಗಿ ಕೆಲಸ ಮಾಡುತ್ತಿದೆ. 250 ಜನರಿಗೆ ಒಂದೇ ವೇದಿಕೆಯಲ್ಲಿ ಅಸಂಘಟಿತ ಕಾರ್ಮಿಕ ಕಾರ್ಡ್ ಒದಗಿಸುವುದು ಸಾಮಾನ್ಯ ಹರಸಾಹಸವಲ್ಲ. ಸಂಘಟನೆಯ ನೈಜ ಶಕ್ತಿ ಎಂಥದ್ದು ಎಂಬುದನ್ನು ಗದಗ ಜಿಲ್ಲಾ ಸವಿತಾ ಸಮಾಜವು ಸಾಬೀತುಪಡಿಸಿದೆ” ಎಂದು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಅಬ್ದುಲ್ ಮುನಫ್ ಮುಲ್ಲಾ ಅವರು ಮಾತನಾಡಿ, “ಸರ್ಕಾರದ ಕಲ್ಯಾಣ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಪ್ರಾಮಾಣಿಕ ಕೊಂಡಿಯಾಗಿ ಗದಗ ಜಿಲ್ಲಾ ಸವಿತಾ ಸಮಾಜ ಕೆಲಸ ಮಾಡಿದೆ ಜೊತೆಗೆ ಶ್ರಮಿಕರ ಬದುಕನ್ನು ಹಸನುಗೊಳಿಸಲಿವೆ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳಾದ ಸಿದ್ದಿ ಸರ್ ಅವರು ಮಾತನಾಡಿ, “ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯ ವತಿಯಿಂದ ವಿತರಿಸಲಾದ ಈ ಗುರುತಿನ ಚೀಟಿಯು ಕೇವಲ ಕಾರ್ಡ್ ಅಲ್ಲ, ಇದು ಶ್ರಮಿಕರ ಬದುಕಿನ ಆಶಾಕಿರಣ. ಈ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ಉಚಿತ ಆರೋಗ್ಯ ವಿಮೆ, ಆಕಸ್ಮಿಕ ಅಪಘಾತ ಪರಿಹಾರ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಸಿಗುವ ಧನಸಹಾಯ ಹಾಗೂ ವೃದ್ಧಾಪ್ಯದಲ್ಲಿ ಆಸರೆಯಾಗುವ ಪಿಂಚಣಿ ಸೇರಿದಂತೆ ಹತ್ತಾರು ಅತ್ಯಗತ್ಯ ಸಾಮಾಜಿಕ ಭದ್ರತಾ ಸೌಲಭ್ಯಗಳು ನೇರವಾಗಿ ಸಿಗಲಿವೆ. ಪ್ರತಿಯೊಬ್ಬ ಕಾರ್ಮಿಕರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಯೋಜನೆಯ ಸಂಪೂರ್ಣ ವಿವರಗಳನ್ನು ಸವಿಸ್ತಾರವಾಗಿ ಜನರಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಮಾತನಾಡಿ, “ನಮ್ಮ ಸಮಾಜದ ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕನಿಗೂ ಸರ್ಕಾರದ ಪ್ರತಿಯೊಂದು ಸವಲತ್ತುಗಳನ್ನು ತಲುಪಿಸುವುದೇ ನಮ್ಮ ಸಂಘಟನೆಯ ಏಕೈಕ ಧ್ಯೇಯವಾಗಿದೆ. ಇಂದು ವಿತರಿಸಲಾದ ಈ ಗುರುತಿನ ಚೀಟಿಗಳು ಬಡ ಕುಟುಂಬಗಳ ಜೀವನದ ರಕ್ಷಾಕವಚಗಳು. ತಳಮಟ್ಟದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ನಮ್ಮ ಸಮಾಜ ಇಡೀ ರಾಜ್ಯದಲ್ಲೇ ಮಾದರಿಯಾಗಿ ಹೊರಹೊಮ್ಮಿದೆ. ನಮಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಯುವ ನಾಯಕರಾದ ಕೃಷ್ಣಗೌಡ್ರು ಪಾಟೀಲ ಅವರಿಗೆ ಹಿರಿಯರಾದ ಹನುಮಂತಪ್ಪ ರಾಂಪೂರ ಅವರಿಗೆ ವಿಕಾಸ ಕ್ಷೀರಸಾಗರ. ಮಂಜುನಾಥ ಮಾನೆ. ಅರುಣ ರಾಂಪೂರ. ಹಾಗೂ ಆಗಮಿಸಿದ ಎಲ್ಲಾ ಗಣ್ಯರಿಗೆ ಇಡೀ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ” ಎಂದರು.
ಬಾಕ್ಸ್ ಹೇಳಿಕೆ
°°°°°°°°°°°°°°
“ಶ್ರಮಿಕರ ಬದುಕಿಗೆ ಭದ್ರತೆ ನೀಡಿದ ಐತಿಹಾಸಿಕ ಹೆಜ್ಜೆ”

ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಕಷ್ಟಗಳು ಮತ್ತು ಅವರ ಸಾಮಾಜಿಕ ಭದ್ರತೆಯ ಅನಿವಾರ್ಯತೆಯನ್ನು ಗದಗ ಜಿಲ್ಲಾ ಸವಿತಾ ಸಮಾಜವು ಸರಿಯಾಗಿ ಅರ್ಥಮಾಡಿಕೊಂಡಿದೆ. ಒಂದೇ ವೇದಿಕೆಯಲ್ಲಿ 250 ಜನ ಶ್ರಮಿಕ ಬಂಧುಗಳಿಗೆ ಸರ್ಕಾರದ ಗುರುತಿನ ಚೀಟಿ ಒದಗಿಸಿರುವುದು ಕೇವಲ ಸೌಲಭ್ಯ ವಿತರಣೆಯಲ್ಲ; ಇದು ಅವರ ಬದುಕಿಗೆ ನೀಡಿದ ದೊಡ್ಡ ರಕ್ಷಾಕವಚ. ಕೃಷ್ಣಾ ಎಚ್. ಹಡಪದ ಅವರ ದೂರದೃಷ್ಟಿಯ ನೇತೃತ್ವ ಮತ್ತು ಯುವ ನಾಯಕ ಕೃಷ್ಣಗೌಡ್ರು ಪಾಟೀಲರ ಜನಪರ ಕಾಳಜಿಯಿಂದಾಗಿ ಇಂದು ಗದಗ ಜಿಲ್ಲೆಯು ಇಡೀ ಕರ್ನಾಟಕ ರಾಜ್ಯಕ್ಕೆ ಹೆಮ್ಮೆಯ ಮಾದರಿಯಾಗಿ ನಿಂತಿದೆ.
– ಹನುಮಂತಪ್ಪ ರಾಂಪೂರ, ಹಿರಿಯರು, ಗದಗ.
ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೋಟೆಕಲ್ಲ ಸ್ವಾಗತಿಸಿದರು. ಶ್ರೀಸಂತ ಸೇನಾ ಮಹಾರಾಜ ನಾಬಿಕ್ ಮರಾಠ ಕ್ಷೌರಿಕ ಸಮಾಜದ ಅಧ್ಯಕ್ಷರಾದ ವಿಕಾಸ ಕ್ಷೀರಸಾಗರ ನಿರೂಪಣೆ ಮಾಡಿದರು. ಗದಗ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಾನೆ ಮತ್ತು ಜಿಲ್ಲಾ ಖಜಾಂಚಿಗಳಾದ ಅರುಣ ರಾಂಪೂರ ಜಂಟಿಯಾಗಿ ವಂದನಾರ್ಪಣೆ ಸಲ್ಲಿಸಿದರು
ಅತಿಥಿಗಳಾಗಿ ಹಿರಿಯರಾದ ಅಶೋಕ್ ಮಾನೆ. ಪಾಂಡು ಕಾಳೆ. ಜ್ಯೋತಿ ರಾಮ ಮಾನೆ. ದೀಪಕ ಮಾನೆ. ದತ್ತು ಮಾನೆ. ಸುಧೀರ ಮಾನೆ. ಪರಶುರಾಮ (ಬಜ್ಜು) ರಾಂಪೂರ. ಆಂಜನೇಯ ಆದೋನಿ. ಜಂಬಣ್ಣ ಕಡಮುರು. ದೂದಣ್ಣ ರಾಂಪೂರ. ನರಸಿಂಹ ಗುರುಜಾರಕರ. ವೇದಿಕೆ ಮೇಲೆ ಹಾಸಿನರಾಗಿದ್ದರು.
ಈ ಭವ್ಯ ಸಮಾರಂಭದಲ್ಲಿ ಗದಗ-ಬೆಟಗೆರಿ ಸವಿತಾ ಸಮಾಜ ಮತ್ತು ಮರಾಠ ಸಮಾಜ ಒಟ್ಟು ಐದು ದೈವಗಳ ಅಧ್ಯಕ್ಷರು ಪದಾಧಿಕಾರಿಗಳು ಗುರು ಹಿರಿಯರು ಕಾರ್ಮಿಕ ಗುರುತಿನ ಚೀಟಿಯ ನೂರಾರು ಫಲಾನುಭವಿಗಳು ಯುವಕರು ಸಮಾಜದ ಪ್ರಮುಖ ನಾಯಕರು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೃಷ್ಣಾ ಎಚ್ ಹಡಪದ
9845650612

Editor

Leave a comment