Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಶತಮಾನದ ಸೌಹಾರ್ದತೆಯ ಹೆಮ್ಮರ ಬಿದ್ದು ಬಡ ಮುಸ್ಲಿಂ ಕುಟುಂಬದ ಸೂರು ಸಂಪೂರ್ಣ ಜಖಂ* “ಜಿಲ್ಲಾಡಳಿತ, ಸಚಿವರು, ನಗರಸಭೆ ಮನಸ್ಸು ಮಾಡಿದರೆ ಮಾತ್ರ ಮುಲ್ಲಾ ಕುಟುಂಬಕ್ಕೆ ಪುನರ್ಜನ್ಮ!- ಕೃಷ್ಣಾ ಹಡಪದ” *ಆಲ-ಬೇವು

ಕರುನಾಡು ಘರ್ಜನೆ ಸುದ್ದಿ ಗದಗ 19: “ಬಡವನ ಸಿಟ್ಟಿಗೆ ಜಗದ ಕಣ್ಣು ಕೆಂಪು ಎನ್ನುತ್ತಾರೆ. ಆದರೆ ಇಲ್ಲಿ ಪ್ರಕೃತಿಯ ಮುನಿಸಿಗೆ ಬಡವನ ಇಡೀ ಬದುಕೇ ಕರಗಿ ಹೋಗಿದೆ! ಕೇವಲ ಮರ ತೆರವುಗೊಳಿಸಿದರೆ ಬಡವನ ಹೊಟ್ಟೆ ತುಂಬುತ್ತದೆಯೇ? ಕೋಮು ಸೌಹಾರ್ದತೆಯ ಸಂಕೇತವಾಗಿ ಹೆಮ್ಮರವನ್ನು…

ಕರುನಾಡು ಘರ್ಜನೆ ಸುದ್ದಿ ಗದಗ 19: “ಬಡವನ ಸಿಟ್ಟಿಗೆ ಜಗದ ಕಣ್ಣು ಕೆಂಪು ಎನ್ನುತ್ತಾರೆ. ಆದರೆ ಇಲ್ಲಿ ಪ್ರಕೃತಿಯ ಮುನಿಸಿಗೆ ಬಡವನ ಇಡೀ ಬದುಕೇ ಕರಗಿ ಹೋಗಿದೆ! ಕೇವಲ ಮರ ತೆರವುಗೊಳಿಸಿದರೆ ಬಡವನ ಹೊಟ್ಟೆ ತುಂಬುತ್ತದೆಯೇ? ಕೋಮು ಸೌಹಾರ್ದತೆಯ ಸಂಕೇತವಾಗಿ ಹೆಮ್ಮರವನ್ನು ಸಾಕಿ ಬೆಳೆಸಿದ ನಾಸೀರುದ್ದಿನ್ ಮುಲ್ಲಾ ಕುಟುಂಬದ ಪುಣ್ಯಜೀವಿಗೆ ತಕ್ಷಣವೇ ಹೊಸ ಸೂರಿನಾಶ್ರಯ ಕಲ್ಪಿಸಬೆಕೇಂದು ಗದಗಿನ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಸರ್ಕಾರಕ್ಕೆ ತೀವ್ರ ಒತ್ತಾಯ ವ್ಯಕ್ತಪಡಿಸಿದ್ದಾರೆ.
ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದ ಹಿಂಭಾಗದ ಖಾನತೋಟ ರೋಡ್ ಮಧ್ಯದಲ್ಲಿದ್ದ ನೂರು ವರ್ಷ ಹಳೆಯದಾದ ಬೃಹತ್ ಮರವು ಭೀಕರ ಗಾಳಿ ಮಳೆಗೆ ಧರೆಗುರುಳಿದೆ.
ದುರದೃಷ್ಟವಶಾತ್, ಈ ಹೆಮ್ಮರವು ಸ್ಥಳೀಯ ಅತ್ಯಂತ ನಿರ್ಗತಿಕ ಕುಟುಂಬದವರಾದ ನಾಸೀರುದ್ದಿನ್ ಮುಲ್ಲಾ ಅವರ ಮನೆಯ ಮೇಲೆಯೇ ಉರುಳಿ ಬಿದ್ದಿದೆ. ಇದರ ಭೀಕರತೆಗೆ ಇಡೀ ಮನೆ ಸಂಪೂರ್ಣ ಜಖಂಗೊಂಡಿದೆ. ಘಟನೆಯಿಂದ ಅಕ್ಕಪಕ್ಕದ ಇನ್ನೂ ನಾಲ್ಕೈದು ಮನೆಗಳಿಗೂ ಸಣ್ಣಪುಟ್ಟ ಹಾನಿಯಾಗಿದೆ.
*ಭಾವನಾತ್ಮಕ ಹಿನ್ನೆಲೆ – ಕೋಮು ಸೌಹಾರ್ದತೆಯ ಸಾಕ್ಷಿ:*
ಇಲ್ಲಿನ ಅತ್ಯಂತ ಹೃದಯಸ್ಪರ್ಶಿ ಮತ್ತು ವಿಶೇಷ ವಿಚಾರವೆಂದರೆ, ನಾಸೀರುದ್ದಿನ್ ಮುಲ್ಲಾ ಅವರು ಮುಸ್ಲಿಂ ಸಮುದಾಯದವರಾಗಿದ್ದರೂ, ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪೂಜಿಸಲ್ಪಡುವ ಆಲ ಮತ್ತು ಬೇವಿನ ಜಂಟಿ ಮರವನ್ನು ತಲೆಮಾರುಗಳಿಂದ ತಮ್ಮ ಸ್ವಂತ ಮಗುವಿನಂತೆ ಪ್ರೀತಿಯಿಂದ ಪೋಷಿಸಿಕೊಂಡು ಬಂದಿದ್ದರು. ನಮ್ಮ ನಾಡಿನ ಕೋಮು ಸೌಹಾರ್ದತೆಗೆ ಮತ್ತು ಪ್ರಕೃತಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಾಗಿದ್ದ ಆ ಜಂಟಿ ಹೆಮ್ಮರವು ಸತತ್ ಭೀಕರ ಗಾಳಿ ಮಳೆಯಿಂದ ಇಂದು ಬಡವನ ಆಸರೆಯನ್ನೇ ಕಿತ್ತುಕೊಂಡಿರುವುದು ಇಡೀ ಗದಗ ನಗರದ ಜನತೆಯ ಕರುಳು ಹಿಂಡುವಂತೆ ಮಾಡಿದೆ.
*ಅಧಿಕಾರಿಗಳ ನಡೆಗೆ ಕೃತಜ್ಞತೆ – ಪರಿಹಾರದ ಮೌನಕ್ಕೆ ಆಕ್ಷೇಪ:*
ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ್ ಸರ್ ಹಾಗೂ ಲಕ್ಷ್ಮಣ ಜೋಗದಂಡಕರ್ ಸರ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಮರವನ್ನು ತೆರವುಗೊಳಿಸಲು ಮಾಸ್ಟರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಈ ತಕ್ಷಣದ ಕರ್ತವ್ಯ ಪ್ರಜ್ಞೆಗೆ ಕೃಷ್ಣಾ ಎಚ್ ಹಡಪದ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ದುರಂತ ನಡೆದು ಇಷ್ಟು ಸಮಯ ಕಳೆದರೂ ಸಂತ್ರಸ್ತ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಅಥವಾ ಪುನರ್ವಸತಿಯ ಕುರಿತು ಸರಕಾರಿ ಅಧಿಕಾರಿಗಳು ತುಟಿ ಬಿಚ್ಚದಿರುವುದು ಅತ್ಯಂತ ಖೇದಕರ ಸಂಗತಿ ಎಂದು ಅವರು ಆಕ್ಷೇಪಿಸಿದ್ದಾರೆ.
*ಮೂರೂ ಇಲಾಖೆಗಳು ಮನಸ್ಸು ಮಾಡಿದರೆ ಅಸಾಧ್ಯವಾದುದೇನೂ ಇಲ್ಲ! (ಕ್ರಾಂತಿಕಾರಿ ಮಾರ್ಗೋಪಾಯ):*
ಈ ದಯನೀಯ ಸ್ಥಿತಿಯಲ್ಲಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಕೃಷ್ಣಾ ಎಚ್ ಹಡಪದ ಅವರು ಸರ್ಕಾರ ಹಾಗೂ ಜಿಲ್ಲಾಡಳಿತದ ಮುಂದೆ ಅತ್ಯಂತ ವ್ಯವಸ್ಥಿತವಾದ ತ್ರಿಮುಖ ಪರಿಹಾರದ ಮಾರ್ಗವನ್ನು ಪ್ರಸ್ತಾಪಿಸಿದ್ದಾರೆ: *ಜಿಲ್ಲಾಧಿಕಾರಿಗಳ ಅಭಿವೃದ್ಧಿ ನಿಧಿ:* ಗದಗ ಜಿಲ್ಲಾಧಿಕಾರಿಗಳು ಮಾನವೀಯತೆಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿ, ತಮ್ಮ ವಿಶೇಷ ‘ಜಿಲ್ಲಾ ಅಭಿವೃದ್ಧಿ ನಿಧಿ’ಯಿಂದ ತುರ್ತು ಧನಸಹಾಯ ಘೋಷಿಸಬೇಕು. *ಸಚಿವರ ವಿಶೇಷ ಅನುದಾನ:* ಗದಗ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿ, ‘ವಿಶೇಷ ಅನುದಾನ’ದ ಕ್ರೋಢೀಕರಣವನ್ನು ಈ ಕುಟುಂಬದ ಹೊಸ ಮನೆ ನಿರ್ಮಾಣಕ್ಕೆ ಜೋಡಿಸಬೇಕು. *ನಗರಸಭೆಯ ವಿಶೇಷ ಕಾಳಜಿ ನಿಧಿ:* ಸ್ಥಳೀಯ ಸಂಸ್ಥೆಯಾದ ನಗರಸಭೆಯು ತನ್ನ ‘ವಿಶೇಷ ಕಾಳಜಿ ನಿಧಿ’ ಅಥವಾ ತುರ್ತು ಅನುದಾನವನ್ನು ಇದಕ್ಕೆ ಪೂರಕವಾಗಿ ಬಳಸಿಕೊಳ್ಳಬೇಕು.”ಈ ಮೂರೂ ಇಲಾಖೆಗಳ ಆಡಳಿತಾತ್ಮಕ ಶಕ್ತಿಗಳು ಕೇವಲ ಕಾಗದದ ನಿಯಮಗಳಿಗೆ ಸಿಲುಕದೆ, ಜಂಟಿಯಾಗಿ ಮನಸ್ಸು ಮಾಡಿದರೆ ನಾಸೀರುದ್ದಿನ್ ಮುಲ್ಲಾ ಅವರ ಕುಟುಂಬಕ್ಕೆ ಸಂಪೂರ್ಣವಾಗಿ ಹೊಸ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದು ಕ್ಷಣದ ಕೆಲಸ. ಇದರೊಂದಿಗೆ ಅಕ್ಕಪಕ್ಕದ ಹಾನಿಗೊಳಗಾದ ಮನೆಗಳ ದುರಸ್ತಿಗೂ ಆರ್ಥಿಕ ನೆರವು ನೀಡಬೇಕು. ಸೌಹಾರ್ದತೆಯ ಹೆಮ್ಮರ ಸಲಹಿದ ಬಡ ಕುಟುಂಬದ ಕಣ್ಣೀರು ಒರೆಸದಿದ್ದರೆ ಸರ್ಕಾರಿ ವ್ಯವಸ್ಥೆಗೆ ಬೆಲೆ ಎಲ್ಲಿದೆ?
ಬಡವರ ಕಣ್ಣೀರು ಒರೆಸುವುದೇ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯ ಮುಖ್ಯ ಧೇಯವಾಗಿದೆ. ಆದ್ದರಿಂದ ಗದಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ನಗರಸಭೆ ತಕ್ಷಣವೇ ಈ ತ್ರಿವೇಣಿ ನಿಧಿಗಳ ಈ ಜಂಟಿ ಅನುದಾನದ ಕ್ರಿಯಾ ಯೋಜನೆಯನ್ನು ರೂಪಿಸಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಗದಗಿನ ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಅವರು ಗದಗ ಜಿಲ್ಲಾಧಿಕಾರಿಗಳಿಗೆ. ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ ಅವರಿಗೆ. ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ. ಅತ್ಯಂತ ನಮ್ರತೆಯಿಂದ ಹಾಗೂ ಬಲವಾಗಿ ವಿನಂತಿಸಿ ಒತ್ತಾಯಿಸಿದ್ದಾರೆ

ಕೃಷ್ಣಾ ಎಚ್. ಹಡಪದ
9845650612

Editor

Leave a comment