ಕರುನಾಡು ಘರ್ಜನೆ ಸುದ್ದಿ ಕೊಪ್ಪಳ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ಕೊಪ್ಪಳ ತಾಲೂಕಿನ ಮುನಿರಾಬಾದ್ ಡ್ಯಾಂನ ಸ್ಪಿಲ್ ವೇ ಗೇಟ್ ಲೋಕಾರ್ಪಣೆ ಮುಗಿಸಿ ವೇದಿಕೆ ಕಾರ್ಯಕ್ರಮ ಬಳಿಕ ಜನರ ಮನವಿಗಳನ್ನು ಸ್ವೀಕಾರ ಮಾಡುತ್ತಿದ್ದಾಗ ಬಲ್ಡೋಟ ತೊಲಗಲಿ ತೊಲಗಲಿ ಬಲ್ಡೋಟ ತೊಲಗಲಿ. ಬಲ್ಡೋಟ ವಿರುದ್ಧ ಕ್ರಮ ಕೈಗೊಳ್ಳಲೇಬೇಕು.ಕೈಗೊಳ್ಳಲೇಬೇಕು ಎಂದು ಘೋಷಣೆ ಕೂಗಿ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಗರ ಸೇರಿದಂತೆ ತಾಲೂಕಿನ ಗಿಣಿಗೇರಿ ಹಾಗೂ ಹಿರೇ ಬಗನಾಳ ಭಾಗದ ಸ್ಥಾಪಿತವಾಗಿರುವ ಸುಮಾರು ಎರಡು ನೂರು ಕಂಪೆನಿಗಳು ಪರಿಸರ ರಕ್ಷಣೆ ಕುರಿತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮವಾಗಿ ಸುಮಾರು 20ಕ್ಕೂ ಹೆಚ್ಚು ಬಾಧಿತ ಗ್ರಾಮಗಳು ಪರಿಸರ ಮಾಲಿನ್ಯಕ್ಕೆ ಸಿಕ್ಕು ನರಳುತ್ತಿವೆ. ಈ ಕುರಿತಂತೆ ಕಂಪನಿಗಳ ದೌರ್ಜನ್ಯ ದಬ್ಬಾಳಿಕೆ ವಿರೋಧಿಸಿ ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ.ಈಗಲೂ ಕಂಪನಿಗಳ ಪರಿಸರ ಮಾಲಿನ್ಯದ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆದಿದ್ದು.ಬಲ್ಡೋಟ ಹಟಾವೂ
ಕೊಪ್ಪಳ ಬಚಾವೋ ಘೋಷಣೆ ಅಡಿ ಹೋರಾಟವು ನಡೆಯುತ್ತಿದೆ.ಈಗಿರುವ ಕಂಪನಿಗಳ ವಿಸ್ತರಣೆಯನ್ನು ನಿಲ್ಲಿಸಬೇಕು ಈಗಿರುವ ಕಂಪನಿಗಳು ಪರಿಸರ ಮಾಲಿನ್ಯವನ್ನು ತಡೆಯುವಲ್ಲಿ ಸೂಕ್ತ ಕ್ರಮ ವಹಿಸಬೇಕು ಬಸಾಪುರ ಕೆರೆಯನ್ನು ಜನಜಾನುವಾರುಗಳಿಗೆ ಮುಕ್ತವಾಗಿರಬೇಕು. ಬಾಧಿತ ಗ್ರಾಮಗಳಿಗೆ ಸ್ವತಃ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು.
ಈ ಬೇಡಿಕೆಗೆ ಒತ್ತಾಯಿಸಿ ಕೊಪ್ಪಳದಲ್ಲಿ ನಡೆಯುತ್ತಿರುವ ಹೋರಾಟದ ಮುಖಂಡರು ಮತ್ತು ಸಂಘಟನೆಗಳು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರೂ ಸರ್ಕಾರ ಯಾವುದೇ ಕ್ರಮ ವಹಿಸದಿರುವುದು ಹಾಗೂ ರೈತರ ನೆರವಿಗೆ ಬಾರದಿರುವುದು ಖೇದಕರ ಸಂಗತಿ. ತಾವು ಈ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಪರಿಸರ ವಿರೋಧಿ ಬಲ್ದೋಟ ಕಂಪನಿಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ನ್ಯಾಯವನ್ನು ದೊರಕಿಸಿ ಕೊಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಪಾತ್ರೋಟಿ.ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡ ಮೌಲಾ ಹುಸೇನ್ ಹಣಗಿ ಮುಂತಾದವರು ಆಗ್ರಹಿಸಿದರು.