Thursday, 29 October 2026 Karunadu Gharjane — Edition

Karunadu Gharjane

News website

ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ. ಗದಗ ಧಾರವಾಡ I ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಗೆಲುವು. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಸಂಕನೂರ ಎಸ್.ವಿ ಮುನ್ನಡೆ. ಜಿಲ್ಲೆ ಧಾರವಾಡ I ಪಶ್ಚಿಮ ಪದವೀಧರರ ಕ್ಷೇತ್ರದ ಮತ ಎಣಿಕೆಗೆ ಸಕಲ ಸಿದ್ಧತೆ: ಚುನಾವಣಾಧಿಕಾರಿ ಕೆ.ಎಮ್. ಜಾನಕಿ ಜಿಲ್ಲೆ ಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ. ಅಪರಾಧ ಗದಗ l ಗೂಂಡಾ ಕಾಯ್ದೆಯಡಿ ಸಂಜಯ ಕೊಪ್ಪದನ ಬಂಧನ ದೃಢೀಕರಿಸಿದ ರಾಜ್ಯ ಸರ್ಕಾರ – ಒಂದು ವರ್ಷದ ಅವಧಿಗೆ ಬಂಧನ ಮುಂದುವರಿಕೆ. ಗದಗ ಗದಗ | ಕಾಣೆಯಾಗಿದ್ದ ಕೆಆರ್‌ಡಿಐಎಲ್ ಅಧಿಕಾರಿ ಪರ್ವೀಜ ಧಾರವಾಡ ಪತ್ತೆ! ಗಜೇಂದ್ರಗಡ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಗದಗ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಗದಗ ಜಿಲ್ಲೆಯ ಶೇ. 77.66 ರಷ್ಟು ಮತದಾನ ದಾಖಲು. ಗದಗ ಗದಗ I ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಮತದಾನದ ವಿವರ.
ಗದಗ

ಮಕ್ಕಳಿದ್ದೂ ಅನಾಥವಾದ ವೃದ್ಧ ದಂಪತಿ: ಐದು ಜೀವಗಳ ಸಾಕಲು ಕೈಗಾಡಿಯೇ ಆಧಾರ! ಕೋಳಿವಾಡ ಕುಟುಂಬವನ್ನು ರಕ್ಷಿಸಲು ಮಾಸಿಕ ₹10,000 ಗೌರವಧನಕ್ಕೆ ಆಗ್ರಹ.

ಕರುನಾಡು ಘರ್ಜನೆ ಸುದ್ದಿ ಗದಗ 29: 75 ವರ್ಷ ಎಂದರೆ ವಿಶ್ರಾಂತಿ ಪಡೆಯುವ ವಯಸ್ಸು. ಆದರೆ ಗದಗಿನ ರಾಜೀವ್ ಗಾಂಧಿನಗರದ ನಿವಾಸಿ, ಹಿರಿಯ ಶ್ರಮಜೀವಿ ಮಹಾಂತೇಶ್ ಪರಪ್ಪ ಕೋಳಿವಾಡ ಅವರಿಗೆ ಮಾತ್ರ ಬಿಸಿಲು, ಮಳೆ, ಚಳಿ ಎನ್ನದೆ ದಿನವೂ 4 ರಿಂದ…

ಕರುನಾಡು ಘರ್ಜನೆ ಸುದ್ದಿ ಗದಗ 29: 75 ವರ್ಷ ಎಂದರೆ ವಿಶ್ರಾಂತಿ ಪಡೆಯುವ ವಯಸ್ಸು. ಆದರೆ ಗದಗಿನ ರಾಜೀವ್ ಗಾಂಧಿನಗರದ ನಿವಾಸಿ, ಹಿರಿಯ ಶ್ರಮಜೀವಿ ಮಹಾಂತೇಶ್ ಪರಪ್ಪ ಕೋಳಿವಾಡ ಅವರಿಗೆ ಮಾತ್ರ ಬಿಸಿಲು, ಮಳೆ, ಚಳಿ ಎನ್ನದೆ ದಿನವೂ 4 ರಿಂದ 5 ಕ್ವಿಂಟಲ್ನಷ್ಟು ಭಾರ ಹೊತ್ತು ಕೈಗಾಡಿ ಜಗ್ಗುವುದೇ ವಿಧಿಯಾಟವಾಗಿದೆ.
ವಿಧಿ ತಂದಿಟ್ಟ ಕಠಿಣ ಪರಿಸ್ಥಿತಿಯಿಂದಾಗಿ ಈ ಇಳಿವಯಸ್ಸಿನಲ್ಲೂ ಇಡೀ ಕುಟುಂಬದ ಹೊಣೆ ಹೊತ್ತು ಕೈಗಾಡಿ ಎಳೆಯುತ್ತಿರುವ ಈ ಹಿರಿಯ ಜೀವಿಯ ಬದುಕು ಕಣ್ಣೀರು ತರಿಸುವಂತಿದ್ದು, ಸರ್ಕಾರ ಇವರನ್ನು ‘ವಿಶೇಷ ಪ್ರಕರಣ’ ಎಂದು ಪರಿಗಣಿಸಿ ತಕ್ಷಣವೇ ಆಸರೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಮತ್ತು ಹಿರಿಯ ಸಮಾಜ ಸೇವಕರಾದ ಹೀರಾಲಾಲ ಸಿಂಗ್ರಿ ಅವರು ಸರ್ಕಾರವನ್ನು ಅತ್ಯಂತ ಬಲವಾಗಿ ಒತ್ತಾಯಿಸಿದ್ದಾರೆ.
*ಮಕ್ಕಳಿದ್ದೂ ಅನಾಥವಾದ ವೃದ್ಧ ದಂಪತಿ; ಕಣ್ಣೀರು ತರಿಸುವ ಕೌಟುಂಬಿಕ ಹಿನ್ನೆಲೆ:*
ಮಹಾಂತೇಶ್ ಕೋಳಿವಾಡ ಅವರಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿದೆ. ಆದರೆ ವಿಧಿಯ ಆಟ ಬೇರೆಯೇ ಇತ್ತು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಮಗ ಅಕಾಲಿಕ ಮರಣ ಹೊಂದಿದ್ದು, ಆತನ ಎರಡು ಮಕ್ಕಳಲ್ಲಿ ಒಂದು ಮಗುವಿನ (ಮೊಮ್ಮಗ) ಸಂಪೂರ್ಣ ಜವಾಬ್ದಾರಿ ಈ ವಯಸ್ಸಾದ ಅಜ್ಜ-ಅಜ್ಜಿಯ ಹೆಗಲೇರಿದೆ. ಇನ್ನೊಬ್ಬ ಮಗ ದುಶ್ಚಟಗಳಿಗೆ ದಾಸನಾಗಿ, ತಂದೆ-ತಾಯಿಗೆ ಆಸರೆಯಾಗುವ ಬದಲು ತನ್ನ ಹೆಂಡತಿಯ ಊರಿನಲ್ಲಿ ವಾಸಿಸುತ್ತಾ ತನ್ನ ಸ್ವಾರ್ಥ ಜೀವನ ನೋಡಿಕೊಳ್ಳುತ್ತಿದ್ದಾನೆ. ಇತ್ತ ಮಗಳ ಗಂಡನೂ ತೀರಿಕೊಂಡಿದ್ದು, ಆಕೆಗೂ ಒಂದು ಹೆಣ್ಣು ಮಗುವಿದೆ. ಪ್ರಸ್ತುತ ಆ ಮಗಳು ಮತ್ತು ಮೊಮ್ಮಗುವಿನ ರಕ್ಷಣೆಯ ಭಾರವೂ ಈ 75 ವರ್ಷದ ವೃದ್ಧ ತಂದೆಯ ಮೇಲೆಯೇ ಬಿದ್ದಿದೆ!
*5.ಕ್ವಿಂಟಾಲ್ ಭಾರದ ಕೈಗಾಡಿ; ಐದು ಜನರ ಹೊಟ್ಟೆ ತುಂಬಿಸುವ ಇಳಿ ವಯಸ್ಸಿನ ಹೋರಾಟ:*
ಇಡೀ ಕುಟುಂಬದಲ್ಲಿ ದುಡಿಯುವ ಗಂಡಸು ಇವರೊಬ್ಬರೇ. ಮಗಳು ಮನೆಗೆಲಸ ಮಾಡಿ ತರುವ ಅತ್ಯಲ್ಪ ಆದಾಯ ಹಾಗೂ ಈ ಹಿರಿಯ ಜೀವಿಯ ದೈಹಿಕ ಶ್ರಮವೇ ಇಡೀ ಕುಟುಂಬಕ್ಕೆ ಆಧಾರ. ನೆಮ್ಮದಿಯಿಂದ ತಲೆಮರೆಸಿಕೊಳ್ಳಲು ಒಂದು ವ್ಯವಸ್ಥಿತ ಮನೆಯೂ ಇವರಿಗಿಲ್ಲ. ಕಣ್ಣು ಸರಿಯಾಗಿ ಕಾಣದ, ಕಾಲುಗಳು ನಡುಗುವ ಈ 75ರ ಪ್ರಾಯದಲ್ಲೂ ಮಹಾಂತೇಶ್ ಪರಪ್ಪ ಕೋಳಿವಾಡ ಅವರು ಬರೋಬ್ಬರಿ ನಾಲ್ಕರಿಂದ ಐದು ಕ್ವಿಂಟಲ್ ನಷ್ಟು ಭಾರದ ಕೈಗಾಡಿಯನ್ನು ರಸ್ತೆಯಲ್ಲಿ ಜಗ್ಗುತ್ತಿದ್ದರೆ, ನೋಡುವವರ ಕಣ್ಣಾಲಿಗಳು ಒದ್ದೆಯಾಗುತ್ತವೆ ಮತ್ತು ದುಡಿಯಲು ಬೇರೆ ಯಾವುದೇ ಮಾರ್ಗವಿಲ್ಲದೆ, ಈ ಐದು ಜನರ ಹೊಟ್ಟೆ ತುಂಬಿಸಲು ಕೈಗಾಡಿ ಎಳೆಯುವುದೇ ಇವರಿಗೆ ಅನಿವಾರ್ಯವಾಗಿದೆ. *ಸರ್ಕಾರದ ₹1,200 ವೃದ್ಧಾಪ್ಯ ವೇತನ ಯಾವುದಕ್ಕೆ ಸಾಲದು:*
ಪ್ರಸ್ತುತ ಸರ್ಕಾರದಿಂದ ಇವರಿಗೆ ವೃದ್ಧಾಪ್ಯ ವೇತನದ ರೂಪದಲ್ಲಿ ಬರುತ್ತಿರುವುದು ಕೇವಲ 1,200 ರೂಪಾಯಿಗಳು ಮಾತ್ರ. ಇಂದಿನ ದುಬಾರಿ ದಿನಗಳಲ್ಲಿ ಐದು ಜನರ ಸಂಸಾರಕ್ಕೆ, ಔಷಧಿ-ಉಪಚಾರಕ್ಕೆ ಈ ಹಣ ಯಾವುದಕ್ಕೂ ಸಾಲದಾಗಿದೆ. ಗಂಡು ಮಕ್ಕಳಿಂದಾಗಲಿ ಅಥವಾ ಇನ್ಯಾವುದೇ ಮೂಲದಿಂದಾಗಲಿ ಇವರಿಗೆ ಯಾವುದೇ ಆಸರೆ ಇಲ್ಲ. ಈ ಹಿರಿಯ ಶ್ರಮಜೀವಿಯ ಕಷ್ಟವನ್ನು ಕಂಡು ಇತ್ತೀಚೆಗೆ ಗದಗಿನ ಖ್ಯಾತ ಹಿರಿಯ ಸಮಾಜ ಸೇವಕರಾದ ಹೀರಾಲಾಲ ಸಿಂಗ್ರಿ ಅವರು ಕೋಳಿವಾಡ ಅವರನ್ನು ಸನ್ಮಾನಿಸಿ, ಗೌರವಿಸಿ ಧೈರ್ಯತುಂಬಿ ಮಾನವೀಯತೆ ಮೆರೆದಿರುವುದು ಶ್ಲಾಘನೀಯ.
*ವಿಶೇಷ ಪ್ರಕರಣವೆಂದು ಪರಿಗಣಿಸಲು ಸರ್ಕಾರಕ್ಕೆ ಆಗ್ರಹ:*
ಇದು ಕೇವಲ ಒಂದು ಬಡ ಕುಟುಂಬದ ಕಥೆಯಲ್ಲ, ಇಳಿವಯಸ್ಸಿನಲ್ಲೂ ಸ್ವಾಭಿಮಾನದಿಂದ ಬದುಕಲು ಹೋರಾಡುತ್ತಿರುವ ಒಬ್ಬ ಶ್ರಮಜೀವಿಯ ಮಹಾ ಯಾತನೆ. ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಳ್ಳಬಾರದು. ಮುಖ್ಯಮಂತ್ರಿಗಳು ಹಾಗೂ ನಮ್ಮ ನೆಚ್ಚಿನ ನಾಯಕರು ಬಡವರ ಪರವಾದ ಹಿರಿಯ ಶಾಸಕರಾದ ಎಚ್ ಕೆ ಪಾಟೀಲ್ ಸಾಹೇಬರು. ಜಿಲ್ಲಾ ಉಸ್ತುವಾರಿ ಸಚಿವರು ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಬೇಕು. ಮಹಾಂತೇಶ್ ಪರಪ್ಪ ಕೋಳಿವಾಡ ಅವರ ಕುಟುಂಬವನ್ನು ರಕ್ಷಿಸಲು ತಕ್ಷಣವೇ ಪ್ರತಿ ತಿಂಗಳು ₹10,000 ಗಳ ವಿಶೇಷ ಮಾಸಾಶನ ಮಂಜೂರು ಮಾಡಬೇಕು. ಜೊತೆಗೆ ಇವರಿಗೆ ವಾಸಿಸಲು ಒಂದು ಸುಸಜ್ಜಿತ ಉಚಿತ ಮನೆಯನ್ನು ನೀಡಿ, ಈ ಹಿರಿಯ ಜೀವಿಗೆ ವಿಶ್ರಾಂತಿ ಬದುಕು ಕಲ್ಪಿಸಬೇಕು,” ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣಾ ಎಚ್. ಹಡಪದ ಹಾಗೂ ಹಿರಿಯ ಸಮಾಜ ಸೇವಕರಾದ ಹೀರಾಲಾಲ ಸಿಂಗ್ರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ತೀವ್ರವಾಗಿ ವಿನಂತಿಸಿ, ಮನವಿ ಮಾಡಿದ್ದಾರೆ.

ವರದಿ- ಕೃಷ್ಣಾ ಎಚ್ ಹಡಪದ
9845650612

Editor

Leave a comment