ಕರುನಾಡು ಘರ್ಜನೆ ಸುದ್ದಿ ಗದಗ, ದಿನಾಂಕ : 24/06/2026 ತಾಲೂಕಿನ ನಾಗಾವಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟದ ವ್ಯಾಪ್ತಿಯಲ್ಲಿ ವಾರದ ಸಂತೆ ಇರುವ ” ಕಾರಣ “ಸಂಜೀವಿನಿ ಮಾಸಿಕ ಸಂತೆ” ಆಯೋಜನೆ ಮಾಡಲಾಗಿದ್ದು, ಮಾಸಿಕ – ಸಂತೆಯಲ್ಲಿ ನಾಗಾವಿ ಗ್ರಾಮದ ಮತ್ತು – ಸುತ್ತ ಮುತ್ತಲಿನ ಗ್ರಾಮದ ಒಕ್ಕೂಟಗಳ
ಸದಸ್ಯರಿಗೆ ಮಾರುಕಟ್ಟೆ ಒದಗಿಸಲೆಂದು ಒಟ್ಟು 12 ಜನ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಗುಂಪುಗಳಲ್ಲಿ ಸಾಲ ಪಡೆದು ಜೀವನೋಪಾಯ ಚಟುವಟಿಕೆ ಕೈಗೊಂಡಿರುವ “ಮಾಸಿಕ ಸಂತೆ” ಆಯೋಜಿಸಲಾಗಿತ್ತು. ಈ ಮಾಸಿಕ ಸಂತೆಯಲ್ಲಿ ಗ್ರಾಮಿಣ ಪ್ರದೇಶದ ಮಹಿಳಾ ಸದಸ್ಯರು ತಯಾರಿಸಿದ “ಹಳ್ಳಿ ರುಚಿ” ಕಾರದ ಪುಡಿ & ಹಳ್ಳಿ ರುಚಿ ಸಾಂಪ್ರದಾಯಿಕ ಉತ್ಪನ್ನವನ್ನು
ಈ “ಸಂಜೀವಿನಿ ಮಾಸಿಕ ಸಂತೆ”ಯನ್ನು ಮತ್ತು ಇನ್ನಿತರೆ ವ್ಯಾಪಾರದ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಲಭ್ಯವಿರುವಂತೆ ಇಡಲಾಗಿತ್ತು. ಗದಗ ತಾಲೂಕ ನಾಗಾವಿ ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟದ , ಪದಾಧಿಕಾರಿಗಳು, ಮುಖ್ಯ ಪುಸ್ತಕ ಬರಹಗಾರರು ಹಾಗೂ ಒಕ್ಕೂಟದ ಸಿಬ್ಬಂದಿಗಳು ಮತ್ತು ಗ್ರಾಮದ ಹಿರಿಯರು ಹಾಗೂ ಒಕ್ಕೂಟದ ಸರ್ವ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು, ಕಾರ್ಯಕ್ರಮದಲ್ಲಿ
ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ ಗದಗ, ತಾಲೂಕು ಪಂಚಾಯಿತಿ ಗದಗ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಆಶ್ರಯದಲ್ಲಿ ಈ ಮಾಸಿಕ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ
ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಮೇಳದಲ್ಲಿ ಮುಖ್ಯವಾಗಿ ದಿನಬಳಕೆ ವಸ್ತುಗಳು ಮನೆಗೆ ಅಗತ್ಯವಿರುವ ನಿತ್ಯೋಪಯೋಗಿ ಸಾಮಗ್ರಿಗಳು & ಆಹಾರ ಪದಾರ್ಥಗಳು ಶುದ್ಧ ಮತ್ತು ನೈಸರ್ಗಿಕವಾಗಿ ಸಿದ್ದಪಡಿಸಿದ ಆಹಾರ ಉತ್ಪನ್ನಗಳು ಹಾಗೂ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಲಾಯಿತು. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ಈ ಮಾಸಿಕ ಸಂತೆ ಪ್ರಮುಖ ಪಾತ್ರ ವಹಿಸಿ ಗ್ರಾಮೀಣ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಗವಿಸಿದ್ದಪ್ಪ.M. ಕಂದಗಲ್ ತಾಲೂಕ ಸಂಯೋಜಕರು ತಾಲೂಕು ಪಂಚಾಯತ್ ಗದಗ.
ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿ ಸ್ಥಳೀಯ ವಸ್ತುಗಳಿಗೆ ಎಲ್ಲರೂ ಆದ್ಯತೆ ನೀಡಬೇಕು ಮತ್ತು ಸಂಜೀವಿನಿ ಯೋಜನೆಯ ಉತ್ಪನ್ನಗಳ ಬ್ರಾಂಡ್ ಆದ ‘ಹಳ್ಳಿ ರುಚಿ’ ಯನ್ನು ಎಲ್ಲರೂ ಖರೀದಿರುವ ಮೂಲಕ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮಾಹಿತಿ ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಜೀವಿನಿ ಯೋಜನೆ ಗವಿಸಿದ್ದಪ್ಪ.M. ಕಂದಗಲ್ ತಾಲೂಕ ವ್ಯವಸ್ಥಾಪಕರು ತಾಲೂಕು ಪಂಚಾಯತ್ ಗದಗ. ಶೋಭಾ ಪ್ರ. ಹಗೇದಾಳ ತಾಲೂಕು ಪಂಚಾಯತ್ ಗದಗ